ಜಿಲ್ಲಾ ಸುದ್ದಿ

ಷೇರು ವಿನಿಮಯ: ಬಾಗಿಲು ಹಾಕಿದ ಬೆಂಗಳೂರು ಕೇಂದ್ರ

Vishwanath S

ಬೆಂಗಳೂರು: ಸೆಬಿಯ ನಿರ್ದೇಶನದಂತೆ ಮಾರುಕಟ್ಟೆಯಲ್ಲಿ ರು. 1 ಸಾವಿರ ಕೋಟಿ ವಹಿವಾಟು ದಾಖಲಿಸದ ಕಾರಣ ಬೆಂಗಳೂರು ಷೇರು ವಿನಿಮಯ ಕೇಂದ್ರವು ವಿನಿಮಯ ಚಟುವಟಿಕೆಯಿಂದ ನಿರ್ಗಮಿಸಲಿದೆ. ನಿರ್ಗಮನಕ್ಕೆ ಸೆಬಿ ಅಂಗೀಕಾರ ನೀಡಿದೆ ಎಂದು ಕೇಂದ್ರದ ಕಾರ್ಯ ನಿರ್ವಾಹಕ ನಿರ್ದೇಶಕ ಮಂಜೀತ್ ಸಿಂಗ್ ತಿಳಿಸಿದ್ದಾರೆ.

ಬೆಂಗಳೂರು ಷೇರು ವಿನಿಮಯ ಕೇಂದ್ರವು ಎಲ್ಲ ಪ್ರಾದೇಶಿಕ ಷೇರು ವಿನಿಮಯ ಕೇಂದ್ರಗಳಂತೆ ಕಾರ್ಯನಿರ್ವಹಿಸುತ್ತಿದೆ. ಸೆಬಿ ಅಧೀನದಲ್ಲಿ ಇದರ ಕಾರ್ಯಚಟುವಟಿಕೆಗಳು ನಡೆಯುತ್ತಿವೆ. ಆದರೆ, ಈಗ ಸೆಬಿ ನಿರ್ದೇಶನದಂತೆ ರು. 1 ಸಾವಿರ ಕೋಟಿ ವಹಿವಾಟು ದಾಖಲಿಸಲು ಆಗಿಲ್ಲ. ಈ ಕಾರಣದಿಂದ ಸಂಸ್ಥೆ ನಿರ್ಗಮನದಲ್ಲಿ ಕ್ರಿಯೆಗೆ ಅಂಗೀಕಾರ ಪಡೆದುಕೊಂಡಿದೆ ಎಂದು ಅವರು ಸ್ಪಷ್ಪಪಡಿಸಿದ್ದಾರೆ.

ಬೆಂಗಳೂರು ಷೇರು ವಿನಿಮಯ ಕೇಂದ್ರದ ಅಂಗಸಂಸ್ಥೆಯಾದ ಬಿಜಿಎಸ್‌ಇ ಫೈನಾನ್ಷಿಯಲ್ ಲಿಮಿಟೆಡ್ ಮೂಲಕ ವಹಿವಾಟುಗಳಿಗೆ ವೇದಿಕೆ ಒದಗಿಸಲಾಗಿದೆ. ಟ್ರೇಡಿಂಗ್ ಹಾಗೂ ಡಿ-ಮ್ಯಾಟ್ ಸೇವೆಗಳು ನಿರಂತರವಾಗಿ ಲಭ್ಯವಾಗಲಿದೆ.

ಇದರೊಂದಿಗೆ ಬಿಜಿಎಸ್‌ಇ ಆರಂಭಿಸಿದ್ದ ಹೂಡಿಕೆದಾರರ ಜಾಗೃತಿ ಕಾರ್ಯಕ್ರಮವನ್ನು ಪ್ರತಿ ತಿಂಗಳ ಕೊನೆಯ ಭಾನುವಾರ ಮುಂದುವರಿಸಲಿದೆ ಎಂದು ಅವರು ತಿಳಿಸಿದ್ದಾರೆ.

SCROLL FOR NEXT