ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಾಲಯ (ಸಂಗ್ರಹ ಚಿತ್ರ) 
ಜಿಲ್ಲಾ ಸುದ್ದಿ

ಮೆಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಾಲಯದ ಆಭರಣ ನಾಪತ್ತೆ

ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿನ ಆಭರಣಗಳು ನಾಪತ್ತೆಯಾಗಿವೆ ಎಂದು ಹೇಳಲಾಗುತ್ತಿದೆ.

ಮಂಡ್ಯ: ದಕ್ಷಿಣ ಭಾರತದ ಖ್ಯಾತ ದೇವಾಲಯಗಳಲ್ಲಿ ಒಂದಾಗಿರುವ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿನ ಆಭರಣಗಳು ನಾಪತ್ತೆಯಾಗಿವೆ ಎಂದು ಹೇಳಲಾಗುತ್ತಿದೆ.

ದೇವಾಲಯದಲ್ಲಿರುವ ಮೂರ್ತಿಗೆ ಹಾಕಲಾಗಿದ್ದ ಆಭರಣಗಳ ಪೈಕಿ ಬಹುತೇಕ ಆಭರಣಗಳು ನಾಪತ್ತೆಯಾಗಿದೆ ಎಂದು ಕೆಲ ಸಂಘಸಂಸ್ಥೆಗಳ ಆರೋಪಿಸಿವೆ. ಇನ್ನು ಈ ಆಭರಣಗಳ ನಿಗೂಢ ನಾಪತ್ತೆಯ ಹಿಂದೆ ದೇವಾಲಯದ ಅರ್ಚಕರಾದ ನರಸರಾಜ ಭಟ್ಟರ ಕೈವಾಡವಿದೆ ಎಂದು ಆರೋಪಿಸಲಾಗಿದೆ.

ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿರುವ ಮೂರ್ತಿಗೆ ಹಾಕಲಾಗುತ್ತಿದ್ದ ಸುಮಾರು 40 ಕ್ಕೂ ಹೆಚ್ಚು ಆಭರಣಗಳು ನಾಪತ್ತೆಯಾಗಿದ್ದು, ನರಸರಾಜ ಭಟ್ಟರೇ ಆಭರಣಗಳನ್ನು ಅಪಹರಿಸಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಮೂರ್ತಿಗೆ ಹಾಕಲಾಗಿದ್ದ ವಜ್ರಾಂಗಿ, ಬಿಳಿಕಲ್ಲುಗಳ ಎರಡು ಎಳೆ ಉಡದಾರ, ಚಿನ್ನ ಮತ್ತು ವಜ್ರದ ಹರಳುಗಳಿರುವ ಡಾಬು ಮುಂತಾದ ಸಾಕಷ್ಟು ಆಭರಣಗಳು ನಾಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮುಜರಾಯಿ ಸಚಿವ ಟಿಬಿ ಜಯಚಂದ್ರ ಅವರಿಗೂ ಕೂಡ ದೂರು ನೀಡಲಾಗಿದ್ದು, ಈ ವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಲು ನಿರ್ಧರಿಸಲಾಗಿದೆ ಎಂದು ಭಕ್ತಾದಿಗಳು ಹೇಳಿದ್ದಾರೆ. ಈ ಹಿಂದೆಯೂ ಕೂಡ ಹಲವು ಬಾರಿ ಮೇಲುಕೋಟೆಯಲ್ಲಿ ದೇವರ ಆಭರಣಗಳು ನಾಪತ್ತೆಯಾಗಿರುವ ಕುರಿತು ಆರೋಪಗಳು ಕೇಳಿಬಂದಿದ್ದವು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CM ಡಿಕೆಶಿ ಬಾಲ್ಯ ಸ್ನೇಹಿತ, ನಟ ರವಿಚಂದ್ರನ್‌ಗೆ MLC ಸ್ಥಾನ? ರಾಜಕೀಯ ಅಖಾಡಕ್ಕೆ ‘ಕ್ರೇಜಿ ಸ್ಟಾರ್’ ಎಂಟ್ರಿ ಸಾಧ್ಯತೆ

ವೈಟ್​ಫೀಲ್ಡ್ ಠಾಣೆಯಲ್ಲ 'ಡಾರ್ಕ್' ಫೀಲ್ಡ್ ಠಾಣೆ: ಕಾನೂನು ಬಾಹಿರ ವ್ಯಕ್ತಿ ಬಂಧನ ಸಂಬಂಧ ACP, DCP ವಿರುದ್ದ ಜಡ್ಜ್ ಗರಂ, Video!

ಮಳೆ ಕೊರತೆ ನೀಗಿಸಲು ರಾಜ್ಯ ಸರ್ಕಾರದ ಮಾಸ್ಟರ್ ಪ್ಲ್ಯಾನ್; Cloud seeding ಗೆ ಎರಡು ಸಮಿತಿಗಳ ರಚನೆ

ಹೈಕೋರ್ಟ್ ಆದೇಶ ಉಲ್ಲಂಘನೆ: ಮಮತಾ ವಿರುದ್ಧ ಸ್ವಯಂಪ್ರೇರಿತವಾಗಿ FIR ದಾಖಲಿಸಿದ ಪೊಲೀಸರು; ಮಾಜಿ CMಗೆ ಬಿಗ್ ಶಾಕ್!

ಮನುಕುಲಕ್ಕೆ ಎಚ್ಚರಿಕೆಗಾಗಿ ಟೈಮ್ ಟ್ರಾವಲ್! 2022 ರಲ್ಲಿ ಬಂದ ChatGPT ಬಳಸದಂತೆ 2012 ರಲ್ಲೇ ಜನರಿಗೆ ಕರೆ ನೀಡಿದ್ದ ಪೋಸ್ಟ್ ವೈರಲ್!