ಜಿಲ್ಲಾ ಸುದ್ದಿ

ತಂಬಾಕು ನಿಷೇಧ: ಸರ್ಕಾರಕ್ಕೆ ಪ್ರಸ್ತಾವನೆ

Guruprasad Narayana

ಬೆಂಗಳೂರು: ಆರೋಗ್ಯ ಇಲಾಖೆ ತಂಬಾಕು ನಿಷೇಧದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ನೀಡಿದೆ ಎಂದು ಆರೋಗ್ಯ ಸಚಿವ ಖಾದರ್ ಸೋಮವಾರ ತಿಳಿಸಿದ್ದಾರೆ. ಬುಧವಾರ ನಡೆಯುವ ಸಂಪುಟ ಸಭೆಯಲ್ಲಿ ನಿಷೇಧದ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು ಎಂದು ಸರ್ಕಾರಿ ಹೋಮಿಯೋಪತಿ ಆರೋಗ್ಯ ಶಿಕ್ಷಣ ಸಂಸ್ಥೆಯ ಹೊಸ ವರ್ಷದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ನೀಡುತ್ತಿದ್ದ ಭಾಷಣದಲ್ಲಿ ತಿಳಿಸಿದ್ದಾರೆ.

"ಓರಲ್ ಕ್ಯಾನ್ಸರ್ ನ  ಹಲವಾರು ಪ್ರಕರಣಗಳನ್ನು ಇಲಾಖೆ ದಾಖಲಿಸಿದೆ." ಎಂದು ತಿಳಿಸಿದ ಆವರು ವಿಶ್ವ ಆರೋಗ್ಯ ಸಂಸ್ಥೆ ಕೂಡ ಇದೇ ತರಹದ ಸಲಹೆ ಸೂಚನೆಗಳನ್ನು ನೀಡಿದೆ ಎಂದಿದ್ದಾರೆ. ಆರೋಗ್ಯದ ಹಿತದೃಷ್ಟಿಯಿಂದ ಮುನ್ನೆಚ್ಚರಿಕೆಯ ಕ್ರಮಗಳ ಬಗ್ಗೆ ಗಮನ ಹರಿಸುವುದು ಮುಖ್ಯ ಎಂದ ಸಚಿವರು "ಈಗಾಗಲೇ ಗುಟ್ಕಾ ನಿಷೇಧವಾಗಿದ್ದರೂ, ಹಲವಾರು ಸಂಸ್ಥೆಗಳು ಮತ್ತು ಕೆಲವು ಜನರು ಪಕ್ಕದ ರಾಜ್ಯಗಳಿಂದ ಇದನ್ನು ಆಮದು ಮಾಡಿಕೊಳ್ಳುತ್ತಿದ್ದಾರೆ." ಎಂದಿದ್ದಾರೆ. "ಈ ಸಂಸ್ಥೆಗಳು ಕಾನೂನನ್ನು ತಿರುಚಿ ಸರ್ಕಾರಕ್ಕೆ ಸವಾಲನ್ನೆಸೆದಿವೆ. ಕಾನೂನನ್ನು ಪಾಲಿಸದ ಇವರ ಮೇಲೆ ಶಿಸ್ತಿನ ಕ್ರಮ ತೆಗುದುಕೊಳ್ಳಲಾಗುವುದು" ಎಂದಿದ್ದಾರೆ.

ತಂಬಾಕು ಮತ್ತು ಗುಟ್ಕಾ ಜಿಗಿಯುವುದನ್ನು ಸಿಷೇಧಿಸುವುದರಿಂದ ಅಡಿಕೆ ಬೆಳೆಯುವ ರೈತರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದಿದ್ದಾರೆ ಸಚಿವರು. ಮಾಜಿ ಕೇಂದ್ರ ಸಚಿವ ಗುಲಾಂ ನಭಿ ಅಜಾದ್ ಅವರ ತಂಬಾಕು ಸೇವನೆ ವಿರೋಧಿ ನಿಲುವನ್ನು ಪ್ರಶಂಸಿಸಿದ ಖಾದರ್, ಈ ಹಿಂದೆ ಅಜಾದ್ ಅವರು ಎಲ್ಲ ರಾಜ್ಯ ಸರ್ಕಾರಗಳಿಗೂ ತಂಬಾಕು ನಿಷೇದ ಪ್ರಸ್ತಾವನೆ ಕುರಿತು ಬರೆದಿದ್ದ ಪತ್ರದ ಹಿನ್ನಲೆಯಲ್ಲಿ ಈ ಚರ್ಚೆ ನಡೆಯಲಿದೆ ಎಂದಿದ್ದಾರೆ.

ಬಜೆಟ್ ನಲ್ಲಿ ನಾವು ಕೊಟ್ಟ ವಚನದಂತೆ ಹೋಮಿಯೋಪತಿಯನ್ನು ಹಂತಹಂತವಾಗಿ ಪ್ರೋತ್ಸಾಹಿಸುತ್ತಿದ್ದೇವೆ. "ಎಲ್ಲ ಅಗತ್ಯ ಬೆಂಬಲವನ್ನೂ ಕೊಡಲು ನಾವು ಸಿದ್ಧ" ಎಂದಿದ್ದಾರೆ.

SCROLL FOR NEXT