ಕರ್ನಾಟಕ ಹೈಕೋರ್ಟ್ ಮತ್ತು ಬೆಂಗಳೂರು ಪುಸ್ತಕೋತ್ಸವ (ಸಂಗ್ರಹ ಚಿತ್ರ) 
ಜಿಲ್ಲಾ ಸುದ್ದಿ

ಅರಮನೆ ಮೈದಾನದಲ್ಲಿ ಏಳುದಿನ ಪುಸ್ತಕೋತ್ಸವ

ನಗರದ ಅರಮನೆ ಮೈದಾನದಲ್ಲಿ ಏಳು ದಿನಗಳ ಕಾಲ ಪುಸ್ತಕೋತ್ಸವ ನಡೆಸಲು ಬೆಂಗಳೂರು ಪುಸ್ತಕ ಮಾರಾಟಗಾರರು..

ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಏಳು ದಿನಗಳ ಕಾಲ ಪುಸ್ತಕೋತ್ಸವ ನಡೆಸಲು ಬೆಂಗಳೂರು ಪುಸ್ತಕ ಮಾರಾಟಗಾರರು ಹಾಗೂ ಪ್ರಕಾಶಕರ ಸಂಘಕ್ಕೆ ಹೈಕೋರ್ಟ್ ವಿಶೇಷ ಅನುಮತಿ ಕಲ್ಪಿಸಿದೆ.

ಅರಮನೆ ಮೈದಾನದಲ್ಲಿ ಏಳು ದಿನದ ಮಟ್ಟಿಗೆ ಪುಸ್ತಕ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವಂತೆ ಏಕಸದಸ್ಯ ಪೀಠ ನೀಡಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾ.ಡಿಎಚ್ ವಘೇಲ ಹಾಗೂ ನ್ಯಾ.ಆರ್‌ಬಿ ಬೂದಿಹಾಳ್ ಅವರಿದ್ದ ವಿಭಾಗೀಯ ಪೀಠ ಆ ಆದೇಶ ನೀಡಿದೆ. ಮೇಲ್ಮನವಿಯ ವಿಚಾರಣೆ ಸಂದರ್ಭದಲ್ಲಿ ನ್ಯಾಯಪೀಠ, ಅರ್ಜಿದಾರರು ಕೋರಿದಷ್ಟು ದಿನ ಪ್ರದರ್ಶನಕ್ಕೆ ಅವಕಾಶ ನೀಡಲು ಸಾಧ್ಯವೇ ಎಂದು ಸರ್ಕಾರವನ್ನು ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಸರ್ಕಾರಿ ವಕೀಲರು, ಸರ್ಕಾರಿ ಮಾರ್ಗ ಸೂಚಿಯ ಪ್ರಕಾರ ಕೇವಲ ಮೂರು ದಿನಗಳ ಕಾಲ ಮಾತ್ರ ಅವಕಾಶ ಕಲ್ಪಿಸಲು ಸಾಧ್ಯ. ಆದರೆ, ಇದು ಪುಸ್ತಕ ಪ್ರದರ್ಶನವಾದ ಹಿನ್ನಲೆಯಲ್ಲಿ ಈ ಪ್ರಕರಣವೊಂದಕ್ಕೆ ಮಾತ್ರ ಸೀಮಿತವಾಗುವಂತೆ ವಿಶೇಷ ಅನುಮತಿ ಕಲ್ಪಿಸಬಹುದು ಎಂದು ವಿವರಿಸಿದರು.

ಇದನ್ನು ಪರಿಗಣಿಸಿದ ವಿಭಾಗೀಯ ಪೀಠ ಒಂದು ವಾರದ ಅವಧಿಯ ಪುಸ್ತಕ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದೆ. ಇದರಿಂದ ಅರಮನೆ ಮೈದಾನದಲ್ಲಿ ಜ.2ರಿಂದ  ಜ.8ರವರೆಗೆ ಪುಸ್ತಕ ಪ್ರದರ್ಶನ ನಡೆಯಲಿದೆ.

ವಿವಾದವೇನು?: ಅರಮನೆ ಮೈದಾನದಲ್ಲಿ 10 ದಿನಗಳ ಅವಧಿಗೆ ಪುಸ್ತಕೋತ್ಸವ ಹಮ್ಮಿಕೊಳ್ಳಲು ಪುಸ್ತಕ ಮಾರಾಟಗಾರರು ಹಾಗೂ ಪ್ರಕಾಶಕರ ಸಂಘ ಸರ್ಕಾರದ ಅನುಮತಿ ಕೋರಿತ್ತು. ಆದರೆ, ನೂತನ ಮಾರ್ಗ ಸೂಚಿಯಂತೆ ಸರ್ಕಾರ 2013ರ ಡಿಸೆಂಬರ್‌ನಲ್ಲಿ ಪುಸ್ತಕೋತ್ಸವಕ್ಕೆ ಅನುಮತಿ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಸಂಘವು ಹೈಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ, ಕನಿಷ್ಟ ಏಳು ದಿನಗಳ ಅವಧಿಗೆ ಪುಸ್ತಕ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವಂತೆ 2014ರ ಫೆ.10ರಂದು ಸರ್ಕಾರಕ್ಕೆ ಸೂಚಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉ.ಕ. ನಿರ್ಲಕ್ಷ್ಯ ಮಾಡಿದ್ದೇವೆ ಎಂದು ಹೇಳುವ ನೈತಿಕ ಹಕ್ಕು ಬಿಜೆಪಿಯವರಿಗೆ ಇಲ್ಲ, 'ಗ್ಯಾರಂಟಿ ನಿಧಿ'ಯ ಶೇ. 43.63 ಭಾಗ ನೀಡಿದ್ದೇವೆ: ಸಿದ್ದರಾಮಯ್ಯ

ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾತ್ರೋರಾತ್ರಿ ಶೋಧ; ಇತಿಹಾಸದಲ್ಲಿಯೇ ಮೊದಲ ಬಾರಿಗೆ 30 ಮೊಬೈಲ್ ಫೋನ್‌ಗಳು ವಶ!

ಚಳಿಗಾಲದ ಅಧಿವೇಶನ ಸಂಪನ್ನ: ಉತ್ತರ ಕರ್ನಾಟಕ ಅಭಿವೃದ್ಧಿಗೆ ಗಣನೀಯ ಅನುದಾನ; ವಿಪಕ್ಷಗಳ ಗದ್ದಲದ ನಡುವೆಯೆ ಮಸೂದೆಗಳ ಅಂಗೀಕಾರ

ಹುಣಸೆ, ಹಲಸು, ನೇರಳೆ ಹಣ್ಣುಗಳಿಗೆ ರಾಷ್ಟ್ರೀಯ ಮಂಡಳಿ ಸ್ಥಾಪಿಸಿ: ಕೇಂದ್ರಕ್ಕೆ ಎಚ್‌ಡಿ ದೇವೇಗೌಡ ಒತ್ತಾಯ

ವಾಲ್ಮೀಕಿ ನಿಗಮ ಹಗರಣ: ಮಾಜಿ ಸಚಿವ ಬಿ ನಾಗೇಂದ್ರಗೆ ಸೇರಿದ ₹8.07 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು!

SCROLL FOR NEXT