ಏ.11 ರಿಂದ ರಾಜ್ಯಾದ್ಯಂತ ಜಾತಿವಾರು ಗಣತಿ ಆರಂಭ
ಬೆಂಗಳೂರು: ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಜತೆಗೆ ಜಾತಿವಾರು ಮಾಹಿತಿ ಸಂಗ್ರಹಿಸಲು ಮನೆ -ಮನೆ ಸಮೀಕ್ಷೆ ಏ.11 ರಿಂದ ರಾಜ್ಯಾದ್ಯಂತ ಆರಂಭವಾಗಲಿದೆ.
- 11ರಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭ
- ರಾಜ್ಯದ 6.50 ಕೋಟಿ ಜನರ ಪೈಕಿ 1.31 ಕೋಟಿ ಕುಟುಂಬಗಳು
- 1.33 ಲಕ್ಷ ಗಣತಿದಾರರು, ಪ್ರತಿ ಗಣತಿದಾರರಿಗೆ 150 ಮನೆ ಟಾರ್ಗೆಟ್
- 20 ದಿನಗಳ ಗಡುವು, ಗಣತಿಗೆ ರು.189 ಕೋಟಿ ವೆಚ್ಚ
- ತಪ್ಪು ಮಾಹಿತಿ ನೀಡಿದರೆ ಕಾನೂನು ಕ್ರಮವಿದೆ, ಎಚ್ಚರ ಇರಲಿ
ಮಲೆನಾಡಿನಲ್ಲಿ ಹೆಚ್ಚು
30ಕ್ಕೆ ಮುಗಿಯಬೇಕು
ತಪ್ಪು ಮಾಹಿತಿಗೆ ಕ್ರಮ
- 55 ಪ್ರಶ್ನೆ, ಉತ್ತರ ಕಡ್ಡಾಯವೇನಿಲ್ಲ ಆಯೋಗ 55 ಪ್ರಶ್ನೆಗಳ `ನಮೂನೆ 3' ಅನ್ನು ಸಿದ್ಧಪಡಿಸಿದೆ. ಇದರಲ್ಲಿ 1ರಿಂದ 31ರವರೆಗಿನ ಪ್ರಶ್ನೆಗಳು ಮಾಹಿತಿ ನೀಡುವವರ ವೈಯಕ್ತಿಕ
- ವಿವರಗಳಿಗೆ ಸೀಮಿತ.
- 42ರಿಂದ 55ರವರೆಗಿನ ಪ್ರಶ್ನೆಗಳು ಆತನ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ ಸ್ಥಿತಿಗತಿಗಳಿಗೆ ಮೀಸಲು.
- ಸರ್ಕಾರದ ಸವಲತ್ತುಗಳನ್ನು ಪಡೆಯುವ ದೃಷ್ಟಿಯಿಂದ ಪ್ರತಿಯೊಬ್ಬರು ಇಲ್ಲಿನ ಪ್ರಶ್ನೆಗಳಿಗೆ ಮಾಹಿತಿ ನೀಡಲೇಬೇಕು. ಆದರೆ, ಇದು ಕಡ್ಡಾಯವಲ್ಲ.
- ಜಾತಿ ಅಥವಾ ಧರ್ಮ ಹೇಳಿಕೊಳ್ಳಲು ನಿರಾಕರಿಸಿದರೆ, ಒತ್ತಡ ಮಾಡುವಂತಿಲ್ಲ.
- ನಿಗದಿಪಡಿಸಿದ ಕೋಡ್‍ಗಳನ್ನು ಬಳಸಬೇಕು. ಪರಿಶಿಷ್ಟ ಜಾತಿ `ಬಿ' ಹಾಗೂ ಪರಿಶಿಷ್ಟ ಪಂಗಡ `ಸಿ' ಪಟ್ಟಿಯಲ್ಲಿ ಬಂದರೆ, ಹಿಂದುಳಿದ ವರ್ಗಗಳು ಸೇರಿದಂತೆ ಉಳಿದ ಎಲ್ಲ
- ಜಾತಿಗಳನ್ನು `ಎ' ನಮೂನೆಯಲ್ಲಿ ಭರ್ತಿ ಮಾಡಲಾಗುತ್ತದೆ.
- ಪಟ್ಟಿಯಿಂದ ಬಿಟ್ಟು ಹೋದ ಜಾತಿ ಸಮುದಾಯದವರು ಭಯ ಪಡಬೇಕಿಲ್ಲ.
- ಗಣತಿ ವೇಳೆ ನೀಡುವ ಮಾಹಿತಿಯನ್ನೆ ದಾಖಲು ಮಾಡಿಕೊಳ್ಳಲು ಆಯೋಗ ಸೂಚಿಸಿದೆ.
30 ಜಿಲ್ಲೆಗಳಲ್ಲಿನ ಜಿಲ್ಲಾಧಿಕಾರಿಗಳು, ಜಿಪಂ ಸಿಇಒಗಳು, ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿಗಳು, ಜಿಲ್ಲಾ ಸಾಂಖ್ಯಿಕ ಅಧಿಕಾರಿಗಳು.10 ಮಹಾನಗರ ಪಾಲಿಕೆ ಆಯುಕ್ತರು, 76 ಉಪ ವಿಭಾಗಾಧಿಕಾರಿಗಳು. 176 ತಹಸೀಲ್ದಾರರು, 8 ವಲಯಗಳ ಜಂಟಿ ಆಯುಕ್ತರು.551 ನಗರಸಭೆ, ಪುರಸಭೆ, ಪಪಂಗಳ ಹಿರಿಯ ಅಧಿಕಾರಿಗಳು.ಒಟ್ಟು 1.33 ಲಕ್ಷ ಸಿಬ್ಬಂದಿ ಸಮೀಕ್ಷೆಯಲ್ಲಿ ಭಾಗವಹಿಸಲಿದೆ.