ಬೆಂಗಳೂರು: ಸರ್ಕಾರಿ ವೈದ್ಯರು ಇನ್ನುಮುಂದೆ ಮುಷ್ಕರ ನಡೆಸಿದರೆ ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ (ಮುಷ್ಕರನಿಷೇಧ) ಕಾಯ್ದೆ 1966ರ ಪ್ರಕಾರ ವೈದ್ಯರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಇದರ ಪರಿಣಾಮವಾಗಿ ಸರ್ಕಾರಿ ವೈದ್ಯರು ಇನ್ನು ಮುಂದೆ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಮುಷ್ಕರ ನಡೆಸಲು ಅವಕಾಶ ಇಲ್ಲದಂತಾಗಿದೆ. ಸರ್ಕಾರದ ಮೇಲೆ ಒತ್ತಡ ತಂತ್ರ ಹೇರುವ ಆತುರದಲ್ಲಿ ಕೈಗೊಂಡ ನಿರ್ಧಾರ ಗಳು ವೈದ್ಯರಿಗೇ ಮುಳುವಾಗಿ ಪರಿಣಮಿಸಿವೆ. 2014ರ ಅಕ್ಟೋಬರ್‍ನಲ್ಲಿ ಸರ್ಕಾರಿ ವೈದ್ಯರು ಮುಷ್ಕರ ನಡೆಸಿದ್ದರು. ಸರ್ಕಾರದೊಂದಿಗೆ ಮಾತುಕತೆ
ಯಶಸ್ವಿಯಾಗದ ಹಂತದಲ್ಲಿ ಸಾಮೂಹಿಕ ರಾಜಿ ನಾಮೆಗೂ ಮುಂದಾಗಿದ್ದರು.
ಇದರಿಂದ ಸಾರ್ವ ಜನಿಕರು ಭಾರಿ ಪ್ರಮಾಣದಲ್ಲಿ ತೊಂದರೆ ಅನುಭವಿಸಿದ್ದು, ಸಮಸ್ಯೆಯನ್ನು ಶೀಘ್ರಬಗೆಹರಿಸಬೇಕೆಂದು ಕೋರಿ ವಕೀಲ ಎನ್.ಪಿ ಅಮೃತೇಶ್ ಸಾರ್ವಜನಿಕ
ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು.
ಪ್ರಜಾಸತ್ತಾತ್ಮಕ ರೀತಿಯಲ್ಲಿ ಬಗೆಹರಿಸಿಕೊಳ್ಳಿ: ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾ.ಡಿ.ಎಚ್. ವಘೇಲಾ ಮತ್ತು ನ್ಯಾ.ರಾಮಮೋಹನ ರೆಡ್ಡಿ ಅವರಿದ್ದ
ವಿಭಾಗೀಯ ಪೀಠ, ಸರ್ಕಾರಿ ವೈದ್ಯರಿಗೆ ಸಮಸ್ಯೆ ಎಂದೆನಿಸಿದಾಗ ಪ್ರಜಾಸತ್ತಾತ್ಮಕ ರೀತಿಯಿಂದ ಬಗೆಹರಿಸಿಕೊಳ್ಳಬೇಕು. ವೈದ್ಯರಾದವರು ಸೇವೆ ಮಾಡುತ್ತೀವೆಂದು ಪ್ರತಿಜ್ಞಾ „ ತೆಗೆದುಕೊಂಡಿರುತ್ತಾರೆಯೇ ಹೊರತು, ಸರ್ಕಾರಿ ಸೇವೆ ಮಾಡುತ್ತೀವಿ ಎಂದಲ್ಲ. ವೈದ್ಯಸೇವೆ ಎಂಬುದು ಪವಿತ್ರವಾದ ಸೇವೆ. ಇದು ವ್ಯತ್ಯಯ ಆಗದಂತೆ ನೋಡಿಕೊಳ್ಳುವುದು
ವೈದ್ಯರ ಧರ್ಮ. ರೋಗಿಗಳಿಗೆ ತೊಂದರೆ ಆಗದಂತೆ ತಮ್ಮ ಸೇವೆಗೆ ಬದಟಛಿರಾಗಿರಬೇಕು. ಹಾಗೆ ಮಾಡದಿದ್ದಲ್ಲಿ ಸರ್ಕಾರ ಅಂತಹ ವೈದ್ಯರ ವಿರುದ್ದ ಯಾವುದೇ ವಾರಂಟ್ ಹೊರಡಿಸಿದೆ ಬಂಧನಕ್ಕೆ ಒಳಪಡಿಸುವ ಮೂಲಕ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಆದೇಶಿಸಿ ಅರ್ಜಿ ಇತ್ಯರ್ಥಪಡಿಸಿದೆ.
ಮುಚ್ಚಳಿಕೆ ಸಲ್ಲಿಸಿದ ಸಂಘ: ವಿಚಾರಣೆ ವೇಳೆ ಸರ್ಕಾರಿ ವೈದ್ಯಾಧಿಕಾರಿಗಳ ಸಂಘವು ಮುಂದಿನ ದಿನದಲ್ಲಿ ತಾವು ಯಾವುದೇ ರೀತಿ ರೋಗಿಗಳಿಗೆ ತೊಂದರೆ ಆಗದಂತೆ
ನೋಡಿಕೊಳ್ಳುತ್ತವೆ. ಸಾರ್ವಜನಿಕರಿಗೆ ತೊಂದರೆ ಆಗದಂತೆ ಎಚ್ಚರವಹಿಸುತ್ತೇವೆ ಎಂದು ಮುಚ್ಚಳಿಕೆಯನ್ನು ಪೀಠಕ್ಕೆ ಸಲ್ಲಿಸಿತು. ಇದನ್ನು ಪರಿಗಣಿಸಿದ ವಿಭಾಗೀಯ ಪೀಠ, ವೈದ್ಯರಿಗೆ ಸಮಸ್ಯೆ ಎಂದೆನಿಸಿದಾಗ ಸರ್ಕಾರದ ಬಳಿ ಚರ್ಚಿಸಿ ಸೂಕ್ತ ರೀತಿಯಲ್ಲಿ ಅದನ್ನು ಬಗೆಹರಿಸಿಕೊಳ್ಳಬೇಕು. ಸರ್ಕಾರ ಕೂಡ ಇದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು. ಮುಂದಿನ ದಿನದಲ್ಲಿ ವೈದ್ಯರು ಯಾವುದೇ ರೀತಿ ಮುಷ್ಕರ ಅಥವಾ ಸಾಮೂಹಿಕ ರಾಜಿನಾಮೆ ನೀಡಬಾರದು ಎಂದು ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿದೆ.
ಸರ್ಕಾರಕ್ಕೆ ತಮ್ಮ ಬೇಡಿಕೆ ಈಡೇರಿಸುವಂತೆ ಮುಖ್ಯಮಂತ್ರಿಗಳ ಜತೆ 6 ತಿಂಗಳ ಹಿಂದೆಯೇ ಸಭೆ ನಡೆಸಿದ್ದೇವೆ. ಆದರೆ ಈ ವರೆಗೂ ಸರ್ಕಾರ ನಮ್ಮ ಬೇಡಿಕೆ ಈಡೇರಿಸಿಲ್ಲ. ಈ
ನಿಟ್ಟಿನಲ್ಲಿ ವೈದ್ಯರ ಸಮಸ್ಯೆ ಬಗೆಹರಿಸುವಂತೆ ನ್ಯಾಯಾಲಯವೇ ಒಂದು ಸಮಿತಿ ರಚಿಸಿ ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ಹೈಕೋರ್ಟ್‍ಗೆ ಮನವಿ ಮಾಡಿದ್ದೇವೆ. ಹೈಕೋರ್ಟ್ ಸದ್ಯ ಅದನ್ನು ಪರಿಗಣಿಸಿಲ್ಲ. ಬದಲಾಗಿ ಮುಷ್ಕರ ನಡೆಸಿದರೆ ಸರ್ಕಾರ ನಮ್ಮ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ನಿರ್ದೇಶಿಸಿದೆ. ಈ ಆದೇಶ
ಒಂದು ರೀತಿಯಲ್ಲಿ ನಮ್ಮ ಹಕ್ಕನ್ನು ಕಿತ್ತುಕೊಂಡಂತಾಗಿದೆ. ಸಮಸ್ಯೆಇದ್ದರೂ ಧ್ವನಿ ಎತ್ತದಂತೆ ಬಾಯಿ ಕಟ್ಟಿಹಾಕಿದೆ.
ವೀರಭದ್ರಯ್ಯ, ಅಧ್ಯಕ್ಷರು, ಸರ್ಕಾರಿ ವೈದ್ಯಾಧಿಕಾರಿಗಳ ಸಂಘ