ನಗರದಲ್ಲಿ ಬೈಕ್ ಆ್ಯಂಬುಲೆನ್ಸ್ ಇಂದಿನಿಂದ
ಬೆಂಗಳೂರು: ಮಹಾನಗರಗಳಲ್ಲಿ ಅಪಘಾತಕ್ಕೀಡಾದವರನ್ನು ಸಕಾಲಕ್ಕೆ ತಲುಪಿ ತುರ್ತು ಚಿಕಿತ್ಸೆ ನೀಡಲು ರಾಜ್ಯ ಸರ್ಕಾರ `ಬೈಕ್ ಆ್ಯಂಬುಲೆನ್ಸ್ 24x7' ಸೇವೆ ಆರಂಭಿಸಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದ ಮುಂಭಾಗ ಬೈಕ್ ಸೇವೆಗೆ ಬುಧವಾರ ಚಾಲನೆ ನೀಡಲಿದ್ದಾರೆ. ರು.175 ಲಕ್ಷ ವೆಚ್ಚದಲ್ಲಿ 30 ಬೈಕ್ ಆ್ಯಂಬುಲೆನ್ಸ್
ಸಿದ್ಧವಾಗಿದ್ದು, 21 ಆ್ಯಂಬುಲೆನ್ಸ್ ಗಳು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸಲಿವೆ. 108 ಆರೋಗ್ಯ ಕವಚ ಅಡಿಯಲ್ಲೇ ಈ ಸೇವೆಯನ್ನೂ ಸೇರಿಸಲಾಗಿದೆ. ಸಾರ್ವಜನಿಕರು 108 ಸಂಖ್ಯೆಗೆ ಕರೆ ಮಾಡಿದ ನಂತರ ವಾಹನ ದಟ್ಟಣೆ ಹೆಚ್ಚಿರುವ ಹಾಗೂ ನಾಲ್ಕು ಚಕ್ರದ ಆ್ಯಂಬುಲೆನ್ಸ್ ತಲುಪಲು ಸಾಧ್ಯವಾಗದ ಸ್ಥಳಗಳಿಗೆ ಬೈಕ್ ಕಳುಹಿಸಲಾಗುತ್ತದೆ.
ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ ಆರೋಗ್ಯ ಸಚಿವ ಯು.ಟಿ.ಖಾದರ್, `ಆ್ಯಂಬುಲೆನ್ಸ್‍ಗಾಗಿ ಪ್ರತ್ಯೇಕ ರಸ್ತೆ ಮಾರ್ಗ ನಿರ್ಮಿಸಲು ಸಾಧ್ಯವಿಲ್ಲ. ಮಹಾನಗರಗಳಲ್ಲಿ ವಾಹನ ದಟ್ಟಣೆ ಹೆಚ್ಚಿರುವುದರಿಂದ ಅಪಘಾತಕ್ಕೊಳಗಾದವರಿಗೆ ಬೈಕ್ ಆ್ಯಂಬುಲೆನ್ಸ್ ಮೂಲಕ ತುರ್ತು ಚಿಕಿತ್ಸೆ ನೀಡಲಾಗುತ್ತದೆ. ಪ್ರಾಥಮಿಕ ಹಂತದಲ್ಲಿ ಬೈಕ್ ಆ್ಯಂಬುಲೆನ್ಸ್ ಗಳ ಸಫಲತೆ ಗಮನಿಸಿ ರಾಜ್ಯಾದ್ಯಂತ ವಿಸ್ತರಿಸಲಾಗುವುದು' ಎಂದು ತಿಳಿಸಿದರು.
ಕಾರ್ಯ ನಿರ್ವಹಣೆ ಹೇಗೆ
- ತುರ್ತು ಔಷಧ ಪೆಟ್ಟಿಗೆ ಹೊಂದಿರುವ ಬೈಕ್ ಆ್ಯಂಬುಲೆನ್ಸ್ ನಲ್ಲಿ ಒಬ್ಬ ಸವಾರ ಮಾತ್ರ ಕೂರಬಹುದು.
- ಜಿವಿಕೆ ಸಂಸ್ಥೆಯಿಂದ ತರಬೇತಿ ಪಡೆದ 40 ಸಿಬ್ಬಂದಿಯನ್ನು ನೇಮಿಸಲಾಗಿದೆ.
- ಅಪಘಾತಗಳಾದಾಗ ಸಿಬ್ಬಂದಿಯೊಬ್ಬರೇ ತೆರಳಿ ತುರ್ತು ಚಿಕಿತ್ಸೆ ನೀಡುತ್ತಾರೆ.
- ತುರ್ತುಸ್ಥಿತಿ ನಿಭಾಯಿಸಲು ಪರಿಣತಿ ಹೊಂದಿರುವ `ಎಮರ್ಜೆನ್ಸಿ ಮೆಡಿಕಲ್ ಟೆಕ್ನಿಶಿಯನ್'ಗಳೇ ವಾಹನ ಸವಾರರು
- 108ಕ್ಕೆ ಕರೆ ಮಾಡಿದಾಕ್ಷಣ ಸಂಸ್ಥೆಯಲ್ಲಿರುವ ಸಿಬ್ಬಂದಿ ಅಪಘಾತವಾದ ಸ್ಥಳದ ಮಾಹಿತಿಯನ್ನು ಜಿಪಿಎಸ್ ಮೂಲಕ ದಾಖಲಿಸುತ್ತಾರೆ.
- ನಾಲ್ಕು ಚಕ್ರದ ಆ್ಯಂಬುಲೆನ್ಸ್ ಗಳನ್ನು ಕಳುಹಿಸಲು ಸಾಧ್ಯವಿಲ್ಲದಿದ್ದರೆ ಮಾತ್ರ ಬೈಕ್ ಕಳುಹಿಸಲಾಗುತ್ತದೆ.
- ತುರ್ತು ಆಕ್ಸಿಜನ್ ಸೇರಿದಂತೆ ವಿವಿಧ ಔಷಧ ಪರಿಕರಗಳನ್ನು ಬೈಕ್‍ನ ಪೆಟ್ಟಿಗೆಯಲ್ಲಿ ಇಡಲಾಗಿದೆ.
- ಆಕ್ಸಿಜನ್ ಸಿಲಿಂಡರ್, ಗ್ಲುಕೋಮೀಟರ್, ಎಲ್‍ಇಡಿ ಟಾರ್ಚ್, ಬಿಪಿ ಚಿಕಿತ್ಸಕ ಯಂತ್ರ, ಮುಖ ಕವಚಗಳು, ಲ್ಯಾರಿಂಗೋಸ್ಕೋಪ್, ನೆಬ್ಯೂಲೈಜರ್ ಸೇರಿದಂತೆ 40 ಬಗೆಯ ಆರೋಗ್ಯ ಚಿಕಿತ್ಸಕ ಉಪಕರಣಗಳಿವೆ.
- 52 ವಿಧದ ಔಷಧಗಳು ಪೆಟ್ಟಿಗೆಯಲ್ಲಿದೆ.
ಎಲ್ಲೆಲ್ಲಿ ಬೈಕ್ ಆ್ಯಂಬುಲೆನ್ಸ್
-ಯು.ಟಿ.ಖಾದರ್, ಆರೋಗ್ಯ ಸಚಿವ
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos