ಜಿಲ್ಲಾ ಸುದ್ದಿ

ಕಳೆದ ವರ್ಷ ಕಲಬುರ್ಗಿ ಜಿಲ್ಲೆಯಲ್ಲಿ 800 ಶಿಶು ಮರಣ

Lingaraj Badiger

ಕಲಬುರ್ಗಿ: ಕಲಬುರ್ಗಿ ಜಿಲ್ಲೆಯಲ್ಲಿ ಆರೋಗ್ಯ ಸೌಲಭ್ಯಗಳು ಇನ್ನು ಸುಧಾರಣೆಯಾಗಿಲ್ಲ ಎಂಬುದಕ್ಕೆ ಕಳೆದ ವರ್ಷ ಜಿಲ್ಲೆಯಲ್ಲಿ ಸಂಭವಿಸಿದ ಶಿಶು ಮರಣ ಪ್ರಮಾಣವೇ ಸಾಕ್ಷಿ.

ಏಪ್ರಿಲ್ 1, 2014ರಿಂದ ಮಾರ್ಚ್ 13, 2015ರ ವರೆಗೆ ಜಿಲ್ಲೆಯ ನಾಲ್ಕು ಪ್ರಮುಖ ಆಸ್ಪತ್ರೆಗಳಲ್ಲಿ ವಿವಿಧ ಕಾರಣಗಳಿಂದ 601 ಶಿಶುಗಳು ಮೃತಪಟ್ಟಿರುವುದಾಗಿ ವರದಿಯಾಗಿದೆ. ಈ ಪೈಕಿ 299 ಶಿಶುಗಳು ಕಲಬುರ್ಗಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ, 130 ಶಿಶುಗಳು ಬಸವೇಶ್ವರ ಶಿಕ್ಷಣ ಮತ್ತು ಸಾರ್ವಜನಿಕ ಆಸ್ಪತ್ರೆಯಲ್ಲಿ, ಸಂಗಮೇಶ್ವರ ಆಸ್ಪತ್ರೆಯಲ್ಲಿ 103 ಹಾಗೂ ಅನುರೂಪ್ ಶಹಾ ಆಶ್ಪತ್ರೆಯಲ್ಲಿ 58 ಶಿಶುಗಳು ಮರ ಹೊಂದಿವೆ. ಇನ್ನುಳಿದಂತೆ ನಗರದ ಇತರೆ ಪ್ರದೇಶಗಳಿಂದ ವರದಿಯಾಗಿದೆ. ಆದರೆ ನಗರದ ಇತರೆ ಹೇರಿಗೆ ಆಸ್ಪತ್ರೆಗಳ ಶಿಶುಮರಣ ಪ್ರಮಾಣ ಕುರಿತು ಆರೋಗ್ಯ ಇಲಾಖೆಗೆ ಯಾವುದೇ ಮಾಹಿತಿ ಇಲ್ಲ.

326 ಶಿಶುಗಳು ಹುಟ್ಟಿದ ಮೊದಲ ದಿನ, 118 ಶಿಶುಗಳು 2-4 ದಿನ, 32 ಶಿಶುಗಳು 4-7, 62 ಶಿಶುಗಳು 7-28 ದಿನ ಹಾಗೂ 63 ಶಿಶುಗಳು ಹುಟ್ಟಿದ 29ದಿನದಲ್ಲಿ ಮೃತಪಟ್ಟಿವೆ. ಮೃತಪಟ್ಟ 609 ಶಿಶುಗಳ ಪೈಕಿ 341 ಗಂಡು ಹಾಗೂ 240 ಹೆಣ್ಣು ಶಿಶುಗಳಾಗಿವೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಶಿಶು ಮರಣ ಪ್ರಮಾಣ ಕಡಿಮೆಯಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಕಳೆದ ವರ್ಷ 2013-14ರಲ್ಲಿ 815 ಶಿಶುಗಳು ಮೃತಪಟ್ಟಿದ್ದರೆ, ಈ ವರ್ಷ 800 ಶಿಶುಗಳು ಮಾತ್ರ ಮೃತಪಟ್ಟಿವೆ ಎಂದು ತಿಳಿಸಿದ್ದಾರೆ.

SCROLL FOR NEXT