ನೀರು ಪಾಲು 
ಜಿಲ್ಲಾ ಸುದ್ದಿ

ಈಜಲು ತೆರಳಿದ್ದ ಐವರು ಇಂಜಿನಿಯರಿಂಗ್‌ ವಿದ್ಯಾರ್ಥಿಗಳು ನೀರು ಪಾಲು

ಬೆಂಗಳೂರು ಉತ್ತರ ತಾಲೂಕಿನ ಬೆಟ್ಟಹಲಸೂರು ಎಂಬಲ್ಲಿ ಬಂಡೆ ಹೊಂಡದಲ್ಲಿ ಈಜಲು ತೆರಳಿದ್ದ ಇಂಜಿನಿಯರಿಂಗ್‌ ಕಾಲೇಜಿನ ಐವರು...

ಬೆಂಗಳೂರು : ಬೆಂಗಳೂರು ಉತ್ತರ ತಾಲೂಕಿನ ಬೆಟ್ಟಹಲಸೂರು ಎಂಬಲ್ಲಿ ಬಂಡೆ ಹೊಂಡದಲ್ಲಿ ಈಜಲು ತೆರಳಿದ್ದ ಇಂಜಿನಿಯರಿಂಗ್‌ ಕಾಲೇಜಿನ ಐವರು ವಿದ್ಯಾರ್ಥಿಗಳು ನೀರು ಪಾಲಾದ ದುರಂತ ಗುರುವಾರ ಮಧ್ಯಾಹ್ನ ಸಂಭವಿಸಿದೆ.

ಮೃತ ವಿದ್ಯಾರ್ಥಿಗಳು ಚೆನ್ನಹಳ್ಳಿ ಗ್ರಾಮದ ರೇವಣ ಸಿದ್ದೇಶ್ವರ  ಇಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳೆಂದು ತಿಳಿದು ಬಂದಿದೆ.

ಒಟ್ಟು 8 ಮಂದಿ ಗೆಳೆಯರು ಈಜಲು ತೆರಳಿದ್ದು ಇದರಲ್ಲಿ ೫ ಜನ ನೀರು ಪಾಲಾಗಿದ್ದಾರೆ.
ಈಜಲೆಂದು ನೀರಿಗೆ ಐದು ಜನರು ಹಾರಿದಾಗ ಮೂವರು ದಡದಲ್ಲೇ ನಿಂತಿದ್ದರು. ನೀರಿಗೆ ಹಾರಿದ ಐದು ಜನರಲ್ಲಿ ಒಬ್ಬನಿಗೆ ಈಜಲು ಬರುತ್ತಿರಲಿಲ್ಲ, ಆದ್ದರಿಂದ ಆತ ಮುಳುಗಿದ್ದಾನೆ. ಮುಳುಗುತ್ತಿರುವ ಗೆಳೆಯನನ್ನು ರಕ್ಷಿಸಲು ಇನ್ನುಳಿದ ನಾಲ್ಕು ಜನರು ಯತ್ನಿಸಿದಾಗ ಐವರೂ ಒಟ್ಟಿಗೆ ಮುಳುಗಿದ್ದಾರೆ. ಗೆಳೆಯರು ಮುಳುಗುತ್ತಿರುವುದನ್ನು ನೋಡಿ ದಡದಲ್ಲಿದ್ದ ಮೂವರು ಬೊಬ್ಬೆ ಹಾಕಿ ದಾರಿಹೋಕರಲ್ಲಿ ಹೇಳಿದ್ದಾರೆ.

ಮೃತರು ರೇವಣ್ಣ ಸಿದ್ದೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎರಡನೇ ವರ್ಷ ಪದವಿ ವಿದ್ಯಾರ್ಥಿಗಳಾಗಿದ್ದಾರೆ.



ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮೇಲಕ್ಕೆತ್ತುವ ಕಾರ್ಯ ನಡೆಸಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಧರ್ಮಸ್ಥಳ: ಬಂಗ್ಲೆಗುಡ್ಡೆಯಲ್ಲಿ ಅಸ್ಥಿಪಂಜರ ಪ್ರಕರಣ, ಮೂವರ DNA ಹೊಂದಾಣಿಕೆ ದೃಢ- FSL ವರದಿ

ಕರ್ನಾಟಕಕ್ಕೆ CWRC ನಂತರ CWMA ಶಾಕ್; ತಮಿಳುನಾಡಿಗೆ 3500 ಕ್ಯೂಸೆಕ್ ನೀರು ಹರಿಸುವಂತೆ ಕಟ್ಟುನಿಟ್ಟಿನ ಸೂಚನೆ

ಚಿನ್ನದಂಗಡಿಯಲ್ಲಿ ದೊಡ್ಡ ದರೋಡೆ: ಕದ್ದವನು ಕಳ್ಳ ಅಲ್ಲ, ಖತರ್ನಾಕ್ 'ಇಲಿ'; ಬಿಲ ತೋಡಿದಾಗ ಸಿಕ್ಕಿತು 'ಖಜಾನೆ'! Video ನೋಡಿ

IIT Madras ನಿರ್ದೇಶಕ ಕಾಮಕೋಟಿ 'ಗೋಮೂತ್ರ ತಜ್ಞ': ಪ್ರಿಯಾಂಕಾ ಗಾಂಧಿ ಹೇಳಿಕೆ ಖಂಡಿಸಿ 200ಕ್ಕೂ ಹೆಚ್ಚು ಶಿಕ್ಷಣ ತಜ್ಞರಿಂದ ಪತ್ರ

ಭೀಕರ: ಕಾರು ಗುದ್ದಿದ ರಭಸಕ್ಕೆ ಚೆಂಡಿನಂತೆ ಹಾರಿ ಬಿದ್ದ ವ್ಯಕ್ತಿ; ಓರ್ವ ಸಾವು, ಮೂವರಿಗೆ ಗಾಯ; Video