ಜಿಲ್ಲಾ ಸುದ್ದಿ

ಮಠ ಆಸ್ತಿ ವಿವಾದ: ಅರ್ಜಿ ಮಾನ್ಯ ಮಾಡಿದ ಕೋರ್ಟ್

Mainashree

ಬೆಂಗಳೂರು: ರಾಘವೇಂದ್ರ ಸ್ವಾಮಿ ಮತ್ತು ಉತ್ತರಾದಿ ಮಠದ ಆಸ್ತಿ ವಿವಾದ ಹಾಗೂ ಆರಾಧನಾ ಮಹೋತ್ಸವಕ್ಕೆ ಅಡ್ಡಿ ಪಡಿಸಬಾರದೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಅಧೀನ ನ್ಯಾಯಾಲಯ ಭಾಗಶಃ ಮಾನ್ಯ ಮಾಡಿದೆ.

ರಾಘವೇಂದ್ರ ಸ್ವಾಮಿ ಮಠದ ಪರ ಪ್ರತಿನಿಧಿಗಳು, ಸೇವಕರು ಹಾಗೂ ಭಕ್ತಾದಿಗಳು ದಾವಾ ಆಸ್ತಿಗೆ ಪ್ರವೇಶಿಸಬಾರದು. ಆಸ್ತಿಯ ಸ್ವಾಧೀನಾನುಭವಕ್ಕೆ ಮತ್ತು ಪ್ರತಿವರ್ಷ ನಡೆಸುವ ಆರಾಧನಾ ಮಹೋತ್ಸವಕ್ಕೆ ಯಾವ ರೀತಿಯೂ
ಅಡ್ಡಿಪಡಿಸಬಾರದು ಎಂದು ಕೋರಿ ಅಧೀನ ನ್ಯಾಯಾಲಯದಲ್ಲಿ ಅರ್ಜಿ ದಾಖಲಾಗಿತ್ತು.

ವಿಚಾರಣೆ ನಡೆಸಿದ ಅಧೀನ ನ್ಯಾಯಾಲಯ, ಅರ್ಜಿದಾರರ ಮನವಿಯನ್ನು ಭಾಗಶಃ ಪರಿಗಣಿಸಿದೆ. ಪ್ರತಿವಾದಿಗಳು ವೃಂದಾವನ ಪೂಜೆ, ಆರಾಧನೆಯನ್ನು ಕೈಗೊಳ್ಳಬಹುದು ಎಂದು ಅಧೀನ ನ್ಯಾಯಾಲಯ ಆದೇಶದಲ್ಲಿ
ಸ್ಪಷ್ಟಪಡಿಸಿದೆ.

ಈ ಕುರಿತು ಅರ್ಜಿದಾರರು ಪತ್ರಿಕೆಗಳಲ್ಲಿ ನ್ಯಾಯಾಲಯದ ಆದೇಶವನ್ನು ವ್ಯತಿರಿಕ್ತವಾಗಿ ಬಿಂಬಿಸಿ ಭಕ್ತರಿಗೆ ತಪ್ಪು ಸಂದೇಶ ರವಾನಿಸಿದ್ದರು. ಆದರೆ ಅಧೀನ ನ್ಯಾಯಾಲಯದ ಆದೇಶ ಅದಕ್ಕೆ ವ್ಯತಿರಿಕ್ತವಾಗಿದೆ ಎಂದು ರಾಘವೇಂದ್ರ ಸ್ವಾಮಿ ಮಠದ ಆಪ್ತ ಕಾರ್ಯದರ್ಶಿ ಸುಯಮೀಂದ್ರಾಚಾರ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

SCROLL FOR NEXT