ಜಿಲ್ಲಾ ಸುದ್ದಿ

ನಿಮ್ಹಾನ್ಸ್ ಶೂಟೌಟ್ ಪ್ರಕರಣ: ನಾಲ್ವರು ಸಸ್ಪೆಂಡ್

Sumana Upadhyaya

ಬೆಂಗಳೂರು: ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ವಿಚಾರಣಾಧೀನ ಕೈದಿ ವಿಶ್ವನಾಥನಿಂದ
ಶೂಟೌಟ್ ಪ್ರಕರಣ ಸಂಬಂಧ ಕರ್ತವ್ಯಲೋಪವೆಸಗಿದ ಆರೋಪದಲ್ಲಿ ನಗರ ಸಶಸ್ತ್ರ ಮೀಸಲು ಪಡೆ(ಸಿಎಆರ್) ಹೆಡ್ ಕಾನ್ಸ್ಟೇಬಲ್ ಸೇರಿ ನಾಲ್ವರನ್ನು ಅಮಾನತುಗೊಳಿಸಲಾಗಿದೆ.

ಮಾನಸಿಕ ಅಸ್ವಸ್ಥ ಕೈದಿಗಳ ಬ್ಲಾಕ್ ನ ಭದ್ರತೆಗೆ ನಿಯೋಜಿಸಲಾಗಿದ್ದ ಹೆಡ್ ಕಾನ್ಸ್ಟೇಬಲ್ ನಂಜುಂಡಪ್ಪ, ಕಾನ್ ಸ್ಟೇಬಲ್‍ಗಳಾದ ಶರಣಪ್ಪ ವಡಿಗೇರ, ಸಿ.ಮಂಜುನಾಥ ಹಾಗೂ ಮೋಹನ್ ಆರಾಧ್ಯ ಅಮಾನತುಗೊಂಡವರು.

ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ಕರ್ತವ್ಯ ಲೋಪ ಎಸಗಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ನಾಲ್ವರನ್ನು ಅಮಾನತುಗೊಳಿಸಲಾಗಿದೆ ಎಂದು ಸಿಎಆರ್‍ನ ಜಂಟಿ ಪೊಲೀಸ್ ಆಯುಕ್ತೆ ಡಿ. ರೂಪಾ ತಿಳಿಸಿದರು.

ಘಟನೆ ನಡೆದ ಸಂದರ್ಭದಲ್ಲಿ ಹೆಡ್ ಕಾನ್‍ಸ್ಟೇಬಲ್ ಮಾತ್ರ ಕರ್ತವ್ಯದಲ್ಲಿದ್ದರು. ಉಳಿದ ನಾಲ್ವರು ಭದ್ರತೆಗೆ ಇರಲಿಲ್ಲ. ಮನೆಗಳು ಸೇರಿದಂತೆ ಬೇರೆ ಬೇರೆ ಕಡೆ ಹೊರಟು ಹೋಗಿದ್ದರು. ಘಟನೆ ಬಗ್ಗೆ ಆರಂಭದಲ್ಲಿ ಸ್ಪಷ್ಟನೆ ಕೇಳಿದಾಗ ಸಮರ್ಪಕ ಮಾಹಿತಿ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ವರದಿ ತರಿಸಿಕೊಂಡಾಗ ಕರ್ತವ್ಯ ಲೋಪ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ನಾಲ್ವರನ್ನು ಅಮಾನತುಗೊಳಿಸಲಾಗಿದೆ ಎಂದು ಕಂಡು ಬಂದಿದೆ. ನಾಲ್ವರನ್ನು ಅಮಾನತಿನಲ್ಲಿಟ್ಟು ಕರ್ತವ್ಯಲೋಪದ ಬಗ್ಗೆ ಇಲಾಖಾ ತನಿಖೆ ಮುಂದುವರೆಯಲಿದೆ ಎಂದು ಅವರು ಹೇಳಿದರು.

ಕುಟುಂಬಕ್ಕೆ ಶವ ಹಸ್ತಾಂತರ
ವಿಕ್ಟೋರಿಯಾ ಆಸ್ಪತ್ರೆ ಶವಗಾರದಲ್ಲಿ ಮಂಗಳವಾರ ಬೆಳಗ್ಗೆ ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ವೈದ್ಯರು ವಿಶ್ವನಾಥ ಶವಪರೀಕ್ಷೆ ನಡೆಸಿ ನಂತರ ಮೃತದೇಹವನ್ನು ಪಾಲಕರಿಗೆ ಹಸ್ತಾಂತರ ಮಾಡಿದರು. ಈ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಮೃತ ಕೈದಿಯ ಸೋದರ ಮಾವ ನಟರಾಜ್, ವಿಶ್ವನಾಥ ಸಾವಿನ ಪ್ರಕರಣ ಸಂಬಂಧ ಕಾನೂನು ಹೋರಾಟ ನಡೆಸುವುದಿಲ್ಲ. ನಿಮ್ಹಾನ್ಸ್ ನಲ್ಲಿ ಯಾವ ಪರಿಸ್ಥಿತಿಯಿತೋ ಗೊತ್ತಿಲ್ಲ ಆತನೇ ಇಲ್ಲದೆ ಇರುವಾಗ ಕಾನೂನು ಹೋರಾಟ ನಡೆಸುವುದು ಏನು ಪ್ರಯೋಜನ ಎಂದು ಹೇಳಿದ್ದಾರೆ.

SCROLL FOR NEXT