ಬೆಂಗಳೂರು: ಬಿಬಿಎಂಪಿ ಚುನಾವಣೆ ಮುಗಿಯುತ್ತಿದ್ದಂತೆ ಎಲ್ಲರ ದೃಷ್ಟಿ ಮೇಯರ್ ಸ್ಥಾನದತ್ತ ನೆಟ್ಟಿದೆ. ಕಾರ್ಪೊರೇಟರ್ ಮಾತ್ರವಲ್ಲದೆ ಬೆಂಗಳೂರು ವ್ಯಾಪ್ತಿಗೆ ಬರುವ ಶಾಸಕರು, ವಿಧಾನಪರಿಷತ್ತಿನ ಸದಸ್ಯರು, ಲೋಕಸಭಾ ಹಾಗೂ ರಾಜ್ಯಸಭೆಯ ಸದಸ್ಯರು ಮೇಯರ್ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು.
ಕಾರ್ಪೊರೇಟರ್ ಅಲ್ಲದೆ ಒಟ್ಟು 61 ಜನಪ್ರತಿನಿಧಿಗಳು ಮೇಯರ್ ಆಯ್ಕೆ ಮಾಡಬಹುದು. ಮೇಯರ್ ಆಯ್ಕೆ ಮಾಡಲು ಕಾಂಗ್ರೆಸ್ ನಲ್ಲಿ 26, ಬಿಜೆಪಿ 25, ಜೆಡಿಎಸ್ 7 ಹಾಗೂ ಪಕ್ಷೇತರದಲ್ಲಿ ಮೂವರು ಸದಸ್ಯರು ಅರ್ಹರಾಗಿದ್ದಾರೆ. ಇವರು ಮೇಯರ್ ಆಯ್ಕೆ ಸಭೆಯಲ್ಲಿ ಭಾಗವಹಿಸಿ ಮತ ಚಲಾಯಿಸಬಹುದು.
ಕಾಂಗ್ರೆಸ್ 13 ಶಾಸಕರು
ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್, ಕೃಷ್ಣ ಭೈರೇಗೌಡ, ರೋಶನ್ ಬೇಗ್, ಮುನಿರತ್ನ, ಎಸ್.ಎ.ಹ್ಯಾರಿಸ್, ಕೆ.ಜೆ.ಜಾರ್ಜ್, ಬಿ.ಎ.ಬಸವರಾಜು, ಎಸ್.ಟಿ.ಸೋಮಶೇಖರ್, ಪ್ರಿಯ ಕೃಷ್ಣ, ಆರ್.ವಿ. ದೇವರಾಜ್, ಬಿ.ಶಿವಣ್ಣ. ಎಂ.ಕೃಷ್ಣಪ್ಪ.