(ಸಾಂದರ್ಭಿಕ ಚಿತ್ರ) 
ಜಿಲ್ಲಾ ಸುದ್ದಿ

ಹಿಂಸೆಗೆ ತಿರುಗಿದ ರೈತ ಹೋರಾಟ

ಮಹದಾಯಿ ವಿಷಯವಾಗಿ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ನಿಯೋಗಕ್ಕೆ ಸಕಾರಾತ್ಮಕವಾಗಿ ಸ್ಪಂದಿಸದೇ ಇರುವುದು ಹೋರಾಟ ನಿರತ ರೈತರನ್ನು ಸರ್ಕಾರಗಳ ವಿರುದ್ಧ ಭುಗಿಲೇಳುವಂತೆ ಮಾಡಿದ್ದು, ಎಲ್ಲೆಲ್ಲೂ ಬಿಗಿವಿನ ವಾತಾವರಣ ನಿರ್ಮಾಣವಾಗಿದೆ...

ಹುಬ್ಬಳ್ಳಿ: ಮಹದಾಯಿ ವಿಷಯವಾಗಿ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ನಿಯೋಗಕ್ಕೆ ಸಕಾರಾತ್ಮಕವಾಗಿ ಸ್ಪಂದಿಸದೇ ಇರುವುದು ಹೋರಾಟ ನಿರತ ರೈತರನ್ನು ಸರ್ಕಾರಗಳ ವಿರುದ್ಧ ಭುಗಿಲೇಳುವಂತೆ ಮಾಡಿದ್ದು, ಎಲ್ಲೆಲ್ಲೂ ಬಿಗಿವಿನ ವಾತಾವರಣ ನಿರ್ಮಾಣವಾಗಿದೆ.

ಕಳಸಾ-ಬಂಡೂರಿ ತಿರುವು ಯೋಜನೆ ಅನುಷ್ಠಾನ ಮತ್ತು ಮಹದಾಯಿ ನೀರಿನ ಹಕ್ಕಿಗಾಗಿ `ಮಲಪ್ರಭಾ ಅಚ್ಚುಕಟ್ಟು ಪ್ರದೇಶ'ದ ರೈತರು ನಡೆಸುತ್ತಿರುವ ಹೋರಾಟ ಹಿಂಸೆಗೆ ತಿರುಗಿದ್ದು, ಸರ್ಕಾರಿ ಕಚೇರಿಗಳ ಧ್ವಂಸ, ಕಲ್ಲು ತೂರಾಟ, ಹೆದ್ದಾರಿ ತಡೆಗಳು ನಡೆದು ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ. ಸೋಮವಾರ ಸಂಜೆಯಿಂದಲೇ ಶುರುವಾಗಿರುವ ಹಿಂಸಾಚಾರ ಮಂಗಳವಾರ ರಾತ್ರಿಯವರೆಗೂ ಮುಂದುವರಿದಿತ್ತು.

1980ರಲ್ಲಿ ನಡೆದಿದ್ದ ರೈತ ಬಂಡಾಯ ಮತ್ತೆ ಮರುಕಳಿಸುವ ಲಕ್ಷಣಗಳು ಕಾಣತೊಡಗಿವೆ. ಪ್ರಧಾನಿ ಪ್ರತಿಕ್ರಿಯೆ ಸೋಮವಾರ ಸಂಜೆ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಅದನ್ನು ಖಂಡಿಸಿ ಬೀದಿಗಿಳಿದಿರುವ ರೈತರು, ಯುವಕರು ಕೈಗೆ ಸಿಕ್ಕದ್ದನ್ನೆಲ್ಲ ಧ್ವಂಸ ಮಾಡುತ್ತಿದ್ದಾರೆ. ಬಂಡಾಯದ ನೆಲ ನರಗುಂದದಲ್ಲಿ ಪ್ರತಿಭಟನಾಕಾರರು ಮಂಗಳವಾರವೂ ಅದೇ ರೋಷದಿಂದ ವಿವಿಧ ಸರ್ಕಾರಿ ಕಚೇರಿಗಳಿಗೆ ನುಗ್ಗಿ ಅಲ್ಲಿನ ನೌಕರನ್ನು ಒತ್ತಾಯದಿಂದ ಹೊರದಬ್ಬಿ ಕಂಪ್ಯೂಟರ್ ಗಳನ್ನು ಧ್ವಂಸಗೊಳಿಸಿದರು. ಕುರ್ಚಿ ಟೇಬಲ್‍ಗಳನ್ನು ಮುರಿದು ಹಾಕಿದರು.

ಕಿಟಕಿ-ಬಾಗಿಲುಗಳ ಗಾಜುಗಳನ್ನು ಪುಡಿಗುಟ್ಟಿದರು. ಇನ್ನೂ ಕೆಲವರು ಹುಬ್ಬಳ್ಳಿ-ವಿಜಯಪುರ ಹೆದ್ದಾರಿಗೆ ಅಡ್ಡಲಾಗಿ ಮುಳ್ಳುಗಳನ್ನು ಪೇರಿಸಿ, ರಸ್ತೆ ಮಧ್ಯದಲ್ಲಿ ಟಯರ್ ಇಟ್ಟು ಬೆಂಕಿ ಹಚ್ಚಿ
ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದಟಛಿ ಗುಡುಗಿದರು. ತಾಳ್ಮೆ ಕಳೆದುಕೊಂಡಿರುವ ಅನ್ನದಾತರನ್ನು ಸಮಾಧಾನ ಪಡಿಸುವ ಶಕ್ತಿ ಈಗ ಯಾರಿಗೂ ಇಲ್ಲದಂತಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ `ಮುಷ್ಕರ ಕೈಬಿಡಿ' ಎನ್ನುವ ಮನವಿಗೆ ಪ್ರತಿಭಟನಾ ನಿರತ ರೈತರು ಸ್ಪಂದಿಸಿಲ್ಲ.

ಗದಗ ಸಂಪೂರ್ಣ ಬಂದ್: ಪ್ರಧಾನಿ ನರೇಂದ್ರ ಮೋದಿ ನಿಲುವಿನಿಂದ ರೋಷಿಹೋಗಿರುವ ರೈತರು ಗದಗ ಬಂದ್ ಕರೆಕೊಟ್ಟು ಯಶಸ್ವಿಗೊಳಿಸಿದರು. ಸಾರಿಗೆ ಸಂಪರ್ಕ, ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳು ಬಾಗಿಲು ಹಾಕಿದ್ದವು. ಹುಬ್ಬಳ್ಳಿ, ಗದಗ, ಕೊಪ್ಪಳ ಮಾರ್ಗದ ಹೆದ್ದಾರಿ ಸಂಪೂರ್ಣ ಬಂದ್ ಆಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ತೋಂಟದಾರ್ಯ ಶ್ರೀಗಳು ಹಿಂಸಾಚಾರ ಕೈಬಿಟ್ಟು, ಅಸಹಕಾರ ಚಳವಳಿ ಆರಂಭಿಸುವಂತೆ ಕರೆನೀಡಿದರು. ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಶಾಸಕ, ಸಂಸದರು ತಕ್ಷಣ ರಾಜೀನಾಮೆ ನೀಡಿ ಈ ರೈತ ಹೋರಾಟವನ್ನು ಬೆಂಬಲಿಸುವಂತೆ ಆಗ್ರಹಿಸಿದರು.

ಹುಬ್ಬಳ್ಳಿ- ಧಾರವಾಡದಲ್ಲಿ ಯಾವುದೇ ಮುನ್ಸೂಚನೆ ನೀಡದೇ ಕೆಲವು ಗುಂಪುಗಳು ಸರ್ಕಾರಗಳ ವಿರುದಟಛಿ ಘೋಷನೆಗಳನ್ನು ಕೂಗಿದ್ದರಿಂದ ಯಾವಾಗ ಸಾರಿಗೆ ಬಂದ್ ಆಗುತ್ತದೆಯೋ ಏನೋ ಎನ್ನುವ ಆತಂಕದಲ್ಲಿಯೇ ನಾಗರಿಕರು ಸಂಚರಿಸಿ ದರು. ವ್ಯಾಪಾರಸ್ಥರು ಕೂಡ ಅದೇ ಆತಂಕದಲ್ಲಿ ಇದ್ದರು. ದಿನವಿಡೀ ಜನದಟ್ಟನೆ ತೀರ ವಿರಳವಾಗಿತ್ತು. ನವಲಗುಂದದಲ್ಲೂ ಇಡೀ ದಿನ ಬಂದ್ ಆಚರಿಸಲಾಯಿತು. ಅಂಗಡಿ- ಮುಂಗಟ್ಟೆಗಳು ಬಾಗಿಲು ಮುಚ್ಚಿದ್ದವು. ಹೆದ್ದಾರಿ ಬಂದ್ ಮಾಡಿದ್ದರಿಂದ ನಾಲ್ಕಾರು ಕೀಮಿ ಉದ್ದಕ್ಕೆ ವಾಹನಗಳು ಸಾಲುಗಟ್ಟಿದ್ದವು.

ಇಂದು ಧಾರವಾಡ ಬಂದ್: ಹೋರಾಟದ ಮುಂದಿನ ಹೆಜ್ಜೆಗಳ ಕುರಿತಂತೆ ಹುಬ್ಬಳ್ಳಿಯಲ್ಲಿ ವಾಣಿಜ್ಯೋದ್ಯಮ ಸಂಸ್ಥೆಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಭೆ ನಡೆಯಿತು. ಧಾರವಾಡದಲ್ಲೂ ವಿವಿಧೆಡೆ ಸಭೆಗಳು ನಡೆದು ಬುಧವಾರ ಧಾರವಾಡ ಜಿಲ್ಲೆ ಬಂದ್ ಮಾಡಲು ಕರೆ ನೀಡಲಾಯಿತು. ಸಭೆಯಲ್ಲಿ ಭಾಗವಹಿಸಿದ್ದ ಅನೇಕರು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಮುಖಂಡರ ವಿರುದ್ಧಆಕ್ರೋಶ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

ಸರ್ಕಾರಿ ಸಂಸ್ಥೆಗಳು, ಸಾರ್ವಜನಿಕ ಸ್ಥಳಗಳಲ್ಲಿ RSS ಚಟುವಟಿಕೆಗಳನ್ನು ನಿಷೇಧಿಸಿ: ಮುಖ್ಯಮಂತ್ರಿಗೆ ಪ್ರಿಯಾಂಕ್ ಖರ್ಗೆ ಪತ್ರ

SCROLL FOR NEXT