ಜಿಲ್ಲಾ ಸುದ್ದಿ

ಪರಿಸರ ಸ್ನೇಹಿ ಗಣಪ ಜಾಗೃತಿಗೆ ಮ್ಯಾಜಿಕ್ ಷೋ

Shilpa D

ಬೆಂಗಳೂರು: ಗಣೇಶ ಚತುರ್ಥಿ ಹತ್ತಿರವಾಗುತ್ತಿರುವುದರಿಂದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇದರ ಅಂಗವಾಗಿ ಪರಿಸರ ಸ್ನೇಹಿ ಗಣಪನನ್ನು ಮಾತ್ರ ಖರೀದಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಲು ಕಬ್ಬನ್ ಉದ್ಯಾನದಲ್ಲಿ ಭಾನುವಾರ ಮ್ಯಾಜಿಕ್ ಷೋ ನಡೆಸಿತು. ಕೇವಲ ಒಂದು ಬಾರಿಯಲ್ಲದೆ ಬೆಳಗ್ಗೆ 7.45ಕ್ಕೆ ಹಾಗೂ ಬೆಳಗ್ಗೆ 10ಕ್ಕೆ ಒಟ್ಟು ಎರಡು ಬಾರಿ ಮ್ಯಾಜಿಕ್  ಷೋ ನಡೆಯಿತು. ಪ್ಲಾಸ್ಟರ್ ಆಫ್ ಪ್ಯಾರೀಸ್ ಉಪಯೋಗಿಸುವುದರಿಂದ ಆಗುವ ಹಾನಿ ಹಾಗೂ ಪರಿಸರಸ್ನೇಹಿ ಗಣಪನನ್ನು ಖರೀದಿಸುವುದರಿಂದ ಆಗುವ ಲಾಭ ಕುರಿತು ಜಾಗೃತಿ ಮೂಡಿಸಿದ ಪ್ರಯತ್ನ ವಿಶೇಷವಾಗಿತ್ತು.

ಜತೆಗೆ ನೆರೆದಿದ್ದ ಮಕ್ಕಳಿಂದ ಮಣ್ಣಿನ ಗಣಪತಿ ಖರೀದಿಸುವುದಾಗಿ ಪ್ರತಿಜ್ಞೆ ಮಾಡಲಾಯಿತು. ಇಷ್ಟೇ ಅಲ್ಲದೆ ಕೆಲವು ಖಾಸಗಿ ಕಂಪನಿಗಳ ಉದ್ಯೋಗಿಗಳು ಉದ್ಯಾನದಲ್ಲಿ ಶ್ರಮದಾನ ಕಾರ್ಯಕ್ರಮ ನಡೆಸಿದರು, ಉದ್ಯಾನವನ್ನು ಸ್ವಚ್ಛ ಮಾಡುವುದು, ಗೋಡೆಗಳಿಗೆ ಬಣ್ಣ ಹಚ್ಚುವುದು ಸೇರಿದಂತೆ ಅನೇಕ ಕಾರ್ಯಗಳನ್ನು ನಡೆಸಿದರು. ಸಹಾಯ ಹೋಲಿಸ್ಟಿಕ್ ಇಂಟಿಗ್ರೇ ಟೆಡ್ ಆಸ್ಪತ್ರೆಯಿಂದ ಆಯುರ್ವೇದ, ನ್ಯಾಚುರೋಪತಿ, ಹೋಮಿಯೋಪತಿ ಮತ್ತು ಉಪಯೋಗ ವಿಧಾನಗಳಿಂದ ಉತ್ತಮ ಆರೋಗ್ಯ ಕಾಪಾಡಿ ಕೊಳ್ಳುವ ಕುರಿತು ಉಪನ್ಯಾಸ ನಡೆಯಿತು.

SCROLL FOR NEXT