ಟಿಪ್ಪು ವಂಶಸ್ಥರೆನ್ನಲಾದ ಶೆಹಸಾದ್ ಇಸ್ಮಾಯಿಲ್ ಷಾ ಸುಲ್ತಾನ್ ಅವರನ್ನು ಖಮರುಲ್ಲಾ ಇಸ್ಲಾಂ ಸನ್ಮಾನಿಸುತ್ತಿರುವುದು 
ಜಿಲ್ಲಾ ಸುದ್ದಿ

ಪ್ರತಿ ವರ್ಷ ಸರ್ಕಾರದಿಂದಲೇ ಟಿಪ್ಪು ಜಯಂತಿ ಆಚರಣೆ

ಟಿಪ್ಪು ಸುಲ್ತಾನ್ ಜಯಂತಿಯನ್ನು ಪ್ರತಿ ವರ್ಷ ಸರ್ಕಾರವೇ ಆಚರಿಸಲಿದೆ ಎಂದು ವಕ್ಫ್ ಸಚಿವ ಖಮರುಲ್ಲಾ ಇಸ್ಲಾಂ ಪುನರುಚ್ಚರಿಸಿದ್ದಾರೆ.

ಬೆಂಗಳೂರು: ಟಿಪ್ಪು ಸುಲ್ತಾನ್ ಜಯಂತಿಯನ್ನು ಪ್ರತಿ ವರ್ಷ ಸರ್ಕಾರವೇ ಆಚರಿಸಲಿದೆ ಎಂದು ವಕ್ಫ್ ಸಚಿವ ಖಮರುಲ್ಲಾ ಇಸ್ಲಾಂ ಪುನರುಚ್ಚರಿಸಿದ್ದಾರೆ.

ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಿಸಿದ್ದಕ್ಕಾಗಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲು ಹಜರತ್ ಟಿಪ್ಪು ಸುಲ್ತಾನ್ ವಂಶಸ್ಥರೆನ್ನಲಾದ ಕೆಲವರು ಸಚಿವರನ್ನು ಭೇಟಿ ಮಾಡಿದ್ದರು. ಅವರನ್ನು ಸನ್ಮಾನಿಸಿ ಮಾತನಾಡಿದ ಸಚಿವರು, ಪ್ರತಿ ವರ್ಷ ಸರ್ಕಾರವೇ ಟಿಪ್ಪು ಜಯಂತಿ ಆಚರಿಸಲಿದೆ. ಕನಕ ಜಯಂತಿ, ಬಸವೇಶ್ವರರ ಜಯಂತಿ ಆಚರಿಸುವಾಗ ಟಿಪ್ಪು ಜಯಂತಿ ಏಕೆ ಆಚರಿಸಬಾರದು ಎಂದು ಪ್ರಶ್ನಿಸಿದರು. ಬಿಜೆಪಿ ನಾಯಕರು ಅಸಹಿಷ್ಣುತೆ ಸೃಷ್ಟಿಸಿದರು. ಅದರಲ್ಲೂ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮತ್ತು ಮಾಜಿ ಸ್ವೀಕರ್ ಕೆ.ಜಿ. ಬೋಪಯ್ಯ ಮಡಿಕೇರಿ ಘಟನೆಗಳಿಗೆ ನೇರ ಹೊಣೆಗಾರರು ಎಂದು ದೂರಿದ ಸಚಿವರು ಮಡಿಕೇರಿ ಘಟನೆಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದರು. ಟಿಪ್ಪು ವಂಶಸ್ಥರೆನ್ನಲಾದ ಶೆಹಸಾದ್ ಇಸ್ಮಾಯಿಲ್ ಷಾ ಸುಲ್ತಾನ್, ಷೇಹಸಾದ ರೆಹಮತ್ ಉನ್ನಿಸಾ, ಸೈಯದ್ ಮಂಚೂದ್ ಅವರನ್ನು ಸಚಿವರು ಸನ್ಮಾನಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal Floods: ಸಾವಿನ ಸಂಖ್ಯೆ 359ಕ್ಕೆ ಏರಿಕೆ; 288 ಭಾರತೀಯರು ಸೇರಿ 826 ಮಂದಿ ನಾಪತ್ತೆ; ಮತ್ತೆ ಪ್ರವಾಹ ಭೀತಿ! ಹೊಸ ಸರೋವರ ಪತ್ತೆ!

Nepal Floods: ಭೀಕರ ಪ್ರವಾಹದಲ್ಲಿ 30 ದೇಶಗಳ ನಾಗರೀಕರು ನಾಪತ್ತೆ, ಅಮೆರಿಕದವರೇ ಅತಿ ಹೆಚ್ಚು!

ಭಾರತ-ಶ್ರೀಲಂಕಾ 2ನೇ ಟೆಸ್ಟ್ ಡ್ರಾದಲ್ಲಿ ಅಂತ್ಯ; WTC ಪಾಯಿಂಟ್ಸ್‌ ಟೇಬಲ್‌ನಲ್ಲಿ ಟೀಂ ಇಂಡಿಯಾಗೆ ಭಾರೀ ಹೊಡೆತ!

ಪಕ್ಷದ ಹಿತಕ್ಕಾಗಿ ನಾಗೇಂದ್ರ ಯಾವುದೇ ತ್ಯಾಗಕ್ಕೂ ಸಿದ್ಧ, ಆದ್ರೆ...: ಹೈಕಮಾಂಡ್ ಭೇಟಿ ಬಳಿಕ CM ಶಿವಕುಮಾರ್

CSK ಯಲ್ಲಿ ಶೇ. 25 ರಷ್ಟು ಪಾಲು ಕೇಳಿದ್ದಾರೆಯೇ ಧೋನಿ? 3,820 ಕೋಟಿ ರೂ ಕ್ಲೈಮ್ ಹಿಂದಿರುವ ಸತ್ಯವೇನು?