ಜಿಲ್ಲಾ ಸುದ್ದಿ

4612 ಚಾಲಕರ ವಿರುದ್ಧ ಕೇಸು

Sumana Upadhyaya

ಬೆಂಗಳೂರು: ಗುರುವಾರ ಬೆಳಗ್ಗೆಯೇ ವಿಶೇಷ ಕಾರ್ಯಾಚರಣೆಗೆ ಮುಂದಾದ ಸಂಚಾರಿ  ಪೊಲೀಸರು ಸಂಚಾರಿ ನಿಯಮ ಉಲ್ಲಂಘಿಸಿದ 4 ಸಾವಿರದ 612 ಮಂದಿ ವಾಹನ ಚಾಲಕರ ವಿರುದ್ಧ  ಪ್ರಕರಣ ದಾಖಲಿಸಿ ದಂಡ ವಿಧಿಸಿದ್ದಾರೆ.

ಸಂಚಾರಿ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಡಾ.ಎಂ.ಎ.ಸಲೀಂ ನೇತೃತ್ವದಲ್ಲಿ  ನಗರದ ವಿವಿಧ ಸಂಚಾರ ಠಾಣೆ ವ್ಯಾಪ್ತಿ ಪೊಲೀಸರು  ಬೆಳ್ಳಂಬೆಳಗ್ಗೆಯೇ ಪ್ರಮುಖ ರಸ್ತೆಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದರು. ಹೆಲ್ಮೆಟ್ ಧರಿಸದ, ಚಾಲನಾ ಪರವಾನಗಿ ಹೊಂದಿಲ್ಲದ, ಚಾಲನೆ   ವೇಳೆ ಮೊಬೈಲ್ ಫೋನ್‍ನಲ್ಲಿ ಮಾತನಾಡಿದ, ಸಿಗ್ನಲ್ ಜಂಪ್, ಅತಿ ವೇಗ  ಸೇರಿದಂತೆ ಸಂಚಾರಿ ನಿಯಮ ಉಲ್ಲಂಘಿಸಿದ ವಾಹನ ಸವಾರರನ್ನು ಹಿಡಿದು ಪ್ರಕರಣ ದಾಖಲಿಸಿದರು.

ಕೆ.ಆರ್.ಮಾರುಕಟ್ಟೆ, ಮೆಜೆಸ್ಟಿಕ್, ಮಲ್ಲೇಶ್ವರ, ಬಸವೇಶ್ವರನಗರ, ರಿಚ್‍ಮಂಡ್ ವೃತ್ತ, ಕಬ್ಬನ್ ಪಾರ್ಕ್, ಶಿವಾನಂದ ವೃತ್ತ, ಡಾ.ರಾಜ್‍ಕುಮಾರ್  ರಸ್ತೆ, ಕೆ.ಆರ್.ವೃತ್ತ ಸೇರಿದಂತೆ ನಗರದ  ವಿವಿಧ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಸುಮಾರು 5 ಸಾವಿರಕ್ಕೂ ಅಧಿಕ  ವಾಹನಗಳ ತಪಾಸಣೆ ನಡೆಸಿದರು. ಸಂಚಾರ ನಿಯಮಗಳ ಉಲ್ಲಂಘನೆಯಿಂದ ಅಪಘಾತ  ಪ್ರಕರಣಗಳು  ಹೆಚ್ಚಾಗುತ್ತಿವೆ. ಇದನ್ನು ತಡೆಯಲು ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು  ಪೊಲೀಸರು ತಿಳಿಸಿದರು.

SCROLL FOR NEXT