ಜಿಲ್ಲಾ ಸುದ್ದಿ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾಹಿತಿ ಪುಸ್ತಕದಲ್ಲಿ ಕನ್ನಡದಲ್ಲೇ ಮಾಹಿತಿ

Manjula VN

ಬೆಂಗಳೂರು: ಸಾಮಾನ್ಯ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸುವಾಗ ಪ್ರತಿ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾಹಿತಿ ಪುಸ್ತಕವೊಂದನ್ನು ನೀಡುತ್ತದೆ. ಪರೀಕ್ಷೆಗೆ ಯಾರು ಅರ್ಹರು, ಪರೀಕ್ಷೆ  ಪ್ರಕ್ರಿಯೆಗಳು, ಸೀಟು ಪಡೆಯಲು ಇರುವ ಅವಕಾಶ, ಮೀಸಲಾತಿ ಶುಲ್ಕ, ಕಾಲೇಜು ವಿವರ ಹೀಗೆ ಅನೇಕ ಮಾಹಿತಿಗಳು ಅದರಲ್ಲಿ ಅಡಕವಾಗಿರುತ್ತದೆ. ಈ ಪುಸ್ತಕದಲ್ಲಿ ಮುಂಚಿನಿಂದಲೂ ಇಂಗ್ಲಿಷ್ ಗೆ ಪ್ರಾಧಾನ್ಯತೆ ನೀಡಲಾಗುತ್ತಿದೆ.

ಪ್ರಮುಖ ಮಾಹಿತಿಗಳಷ್ಟೆ ಕನ್ನಡದಲ್ಲಿರುತ್ತಿ ತ್ತು. ಅಂದರೆ ಶೇ.20ರಷ್ಟು ಕನ್ನಡದ ಮಾಹಿತಿ ಇದ್ದರೆ ಉಳಿದೆಲ್ಲಾ ಅಂಶಗಳು ಇಂಗ್ಲಿಷ್‍ನಲ್ಲೇ ಇರುತ್ತಿತ್ತು. ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಧಿಗಳು ಸಾಕಷ್ಟು ಅನಾನುಕೂಲ ಎದುರಿಸುತ್ತಿದ್ದರು.

ಸೀಟು ಹಂಚಿಕೆ ಪ್ರಕ್ರಿಯೆಯ ನಿಯಮಗಳನ್ನು ಅರಿತುಕೊಳ್ಳುವುದಕ್ಕೆ ಕಷ್ಟ ಪಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಇಂಗ್ಲಿಷ್ ನೊಂದಿಗೆ ಪೂರ್ಣ ಕನ್ನಡದಲ್ಲೇ ಮಾಹಿತಿ ಇರುವ ಮಾಹಿತಿ ಪುಸ್ತಕವನ್ನು ಪ್ರಾಧಿಕಾರ ಹೊರತರುತ್ತಿದೆ. ಈಗಾಗಲೇ ಮಾಹಿತಿ ಪುಸ್ತಕದ ಕನ್ನಡ ರೂಪಾಂತರ ಪ್ರಕ್ರಿಯೆ ಆರಂಭವಾಗಿದೆ. ಇಂಗ್ಲಿಷ್, ಕನ್ನಡ ಅವತರಣಿಕೆ ಬ್ರೌಚರನ್ನು ವೆಬ್‍ಸೈಟ್‍ನಲ್ಲಿಸಹ ಪ್ರಕಟಿಸಲಾಗುತ್ತದೆ.

SCROLL FOR NEXT