ಜಿಲ್ಲಾ ಸುದ್ದಿ

ಪೊಲೀಸ್ ಕಿರುಕುಳ ವಿರುದ್ಧ ಧರಣಿ

Sumana Upadhyaya

ಬೆಂಗಳೂರು: ಸಂಚಾರಿ ಪೊಲೀಸರು ಕಾನೂನು ಉಲ್ಲಂಘಿಸಿ ಬೀದಿ ವ್ಯಾಪಾರಿಗಳಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಬೃಹತ್ ಬೆಂಗಳೂರು ಬೀದಿ ವ್ಯಾಪಾರಿ  ಸಂಘಟನೆಗಳ ಒಕ್ಕೂಟದಿಂದ ಗುರುವಾರ ಶಿವಾಜಿನಗರದ ಛೋಟಾ  ಮೈದಾನದಲ್ಲಿ  ಪ್ರತಿಭಟನೆ ನಡೆಯಿತು.

ಜೀವನ ನಿರ್ವಹಣೆಗೆ ಬೀದಿ ವ್ಯಾಪಾರವನ್ನೇ ನಂಬಿಕೊಂಡಿರುವ ಬಡ ವರ್ಗದವರಿಗೆ ಸಂಚಾರ ಪೊಲೀಸರು ಅನಗತ್ಯವಾಗಿ ಕಿರುಕುಳ ನೀಡುತ್ತಿದ್ದಾರೆ. ಶಿವಾಜಿನಗರದ  ಮೀನಾಕ್ಷಿ  ಕೋಯಿಲ್ ಬೀದಿ ಹಾಗೂ ಸೆಂಟ್ರಲ್ ಬೀದಿಯಲ್ಲಿ ಸುಮಾರು 250ಕ್ಕೂ ಹೆಚ್ಚು ವ್ಯಾಪಾರಿಗಳು  ಜೀವನ ರೂಪಿಸಿಕೊಂಡಿದ್ದಾರೆ. ಆದರೆ, ಆರು ತಿಂಗಳಿಂದ ಬ್ರಾಡ್ ವೇ ಸಂಚಾರ  ಪೊಲೀಸರು  ವ್ಯಾಪಾರಕ್ಕೆ ಅವಕಾಶ ನೀಡದೆ ಕಿರುಕುಳ ನೀಡುತ್ತಿದ್ದಾರೆ. ಅವಾಚ್ಯ ಶಬ್ದಗಳಿಂದ  ನಿಂದಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರ 2014ರಲ್ಲಿ ಬೀದಿ ವ್ಯಾಪಾರಿಗಳ (ಜೀವನೋಪಾಯ  ರಕ್ಷಣೆ ಹಾಗೂ  ನಿಯಂತ್ರಣ) ಕಾಯ್ದೆ ಜಾರಿಗೆ ತಂದಿದೆ. ಇದನ್ನು ಪಾಲಿಸುವಂತೆ ನಗರ ಪೊಲೀಸ್ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಇದನ್ನು  ಉಲ್ಲಂಘಿಸುತ್ತಿರುವ ಸಂಚಾರ ಪೊಲೀಸರು, ಬೀದಿ  ವ್ಯಾಪಾರಿಗಳಿಗೆ  ನಿತ್ಯ ತೊಂದರೆ ನೀಡುತ್ತಿದ್ದಾರೆ. ಬಡವರ ಮೇಲಾಗುತ್ತಿರುವ ಈ ದೌರ್ಜನ್ಯ  ಕೂಡಲೇ ನಿಲ್ಲಬೇಕು. ನೆಮ್ಮದಿಯಾಗಿ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಬೇಕು  ಎಂದು   ಆಗ್ರಹಿಸಿದರು. 

SCROLL FOR NEXT