ಜಿಲ್ಲಾ ಸುದ್ದಿ

ಕಷ್ಟಪಟ್ಟು ಶ್ರಮವಹಿಸಿ ಸ್ವಾವಲಂಬಿ ಆಗಿ

Manjula VN

ಬೆಂಗಳೂರು: ಮಹಿಳೆಯರು ಸ್ವಾವಲಂಬಿಗಳಾಗಬೇಕಾದರೆ ಕಷ್ಟಪಟ್ಟು ನಿರಂತರ ಶ್ರಮವಹಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಉಮಾಶ್ರೀ ಹೇಳಿದರು.

ಚಿಂತಾಮಣಿಯ ನೂಪುರ ಫೈನ್ ಆಟ್ರ್ಸ್ ಅಕಾಡೆಮಿಯಿಂದ ಜಯನಗರದ ಖಾಸಗಿ ಕಾಲೇಜಿನಲ್ಲಿ ಏರ್ಪಡಿಸಿದ್ದ `ನೂಪುರ ಸಂಗಮ-2015' ಗಿನ್ನೆಸ್ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂದು ಮಹಿಳೆಯರು ಸ್ವಾವಲಂಬಿಯಾಗಬೇಕೆನ್ನುವುದನ್ನು ಸವಾಲಾಗಿ ಸ್ವೀಕರಿಸಬೇಕು. ಆಗ ಮಾತ್ರ ಪುರುಷನಿಗೆ ಸರಿಸಮಾನರಾಗಿ ಮುಂದೆ ಬರಲು ಸಾಧ್ಯ. ಅಂತಹ ಕೆಲಸವನ್ನು ಅಕಾಡೆಮಿಯ ರೂಪಾ ಅವರು ಮಾಡಿದ್ದಾರೆ ಎಂದರು.

ಮಾಜಿ ಸಚಿವ ಬಸವರಾಜ ಹೊರಟ್ಟಿ ಮಾತನಾಡಿ, ಸರ್ಕಾರ ಮಾಡಬೇಕಾದ ಕೆಲಸವನ್ನು ಕಲಾವಿದರೂ ಮಾಡುತ್ತಿದ್ದು, ಅಂತಹವರಿಗೆ ಸರ್ಕಾರ ಹಾಗೂ ಸಂಸ್ಥೆಗಳು ಸಹಾಯಹಸ್ತ ನೀಡಬೇಕು ಎಂದರು. ಇದೇ ವೇಳೆ ಗಿನ್ನಿಸ್ ದಾಖಲೆಗೆ ಶ್ರಮಿಸಿದ ವಿವಿಧ ವರ್ಗದ 1500ಮಕ್ಕಳು, ಮಹಿಳೆಯರಿಗೆ ಪ್ರಶಸ್ತಿ ನೀಡಲಾಯಿತು. ದೂರದರ್ಶನ ವಾಹಿನಿಯ ಹೆಚ್ಚುವರಿ ನಿರ್ದೇಶಕ ಡಾ. ಮಹೇಶ್ ಜೋಶಿ ಇದ್ದರು.

SCROLL FOR NEXT