ಬೆಂಗಳೂರು: ಬಂಡಾಯದ ಬಿಸಿಯ ನಡುವೆ ಕಾಂಗ್ರೆಸ್ಸಿನ ಅಭ್ಯರ್ಥಿ, ಉಳಿದಂತೆ ಅಧೀಕೃತವಾಗಿ ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಬುಧವಾರ ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ಈ ಮೂಲಕ ಇದುವರೆಗೆ ಒಟ್ಟು 13 ನಾಮಪತ್ರಗಳು ಸಲ್ಲಿಕೆಯಾಗಿವೆ. ಕಾಂಗ್ರೆಸ್‍ನ ಎಂ.ನಾರಾಯಣಸ್ವಾಮಿ, ಬಿಜೆಪಿಯ ದೊಡ್ಡ ಬಸವರಾಜು ಹಾಗೂ ಪಕ್ಷೇತರ ಅಭ್ಯರ್ಥಿ ಎಚ್.ಎಸ್. ದಯಾನಂದ ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್‍ನ ಹಾಲಿ ಮೇಲ್ಮನೆ ಸದಸ್ಯ ದಯಾನಂದ ರೆಡ್ಡಿ ಅವರಿಗೆ ಬಿಫಾರಂ ಸಿಗದಿದ್ದರಿಂದ ಬಂಡಾಯ ಅಭ್ಯರ್ಥಿಯಾಗಿ ಜಿಲ್ಲಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್‍ನ ಅಧೀಕೃತ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಅವರು `ತಾವು ಪಕ್ಷದ ನಿಷ್ಠಾವಂತನಾಗಿರುವುದರಿಂದ ಈ ಸಾರಿ ಟಿಕೆಟ್ ಸಿಕ್ಕಿದೆ' ಎಂದು ಹರ್ಷ ವ್ಯಕ್ತಪಡಿಸಿದರೆ, ಬಂಡಾಯ ಅಭ್ಯರ್ಥಿ ಬಿ.ಟಿ.ದಯಾನಂದ ರೆಡ್ಡಿ ಅವರು `ನಾನು ಪಕ್ಷದ ವಿರುದ್ಧವಲ್ಲ, ಸಚಿವ ರಾಮಲಿಂಗಾ ರೆಡ್ಡಿ ವಿರುದ್ಧ ಸ್ಪರ್ಧಿಸಿರುವುದಾಗಿ' ಸವಾಲು ಹಾಕಿದರು.
ಇಷ್ಟು ದಿನಗಳ ಕಾಲ ವಿವಿಧ ಪಕ್ಷಗಳಿಂದ ಟಿಕೆಟ್ ಪಡೆಯಲು ಹರಸಾಹಸ ಮಾಡಿದ ಅಭ್ಯರ್ಥಿಗಳ ಕೊನೆಯ ಆಟ ಮುಗಿದಿದೆ. ಇನ್ನೇನಿದ್ದರೂ ಸ್ಪರ್ಧೀಗಿಳಿದವರ ಆಟ ಶುರುವಾಗಲಿದೆ. ಈ ನಡುವೆ ನಾಮಪತ್ರ ಹಿಂಪಡೆ ಯಲು ಇನ್ನೆರಡು ದಿನಗಳ ಅವಕಾಶವಿದ್ದು ಅಂತಿಮ ಕಣದಲ್ಲಿ ಉಳಿಯುವವರಾರು ಎಂಬುದು ಗೊತ್ತಾಗಬೇಕಿದೆ. ಅಲ್ಲಿ ಯವರೆಗೂ ಬಂಡಾಯಗಾರರನ್ನು ತಣಿಸು ವುದು ಆಯಾ ಪಕ್ಷಗಳಿಗೆ ತಲೆ ನೋವಾಗುವ ಮುನ್ಸೂಚನೆ ಇದೆ.