ಜಿಲ್ಲಾ ಸುದ್ದಿ

ಬಿ.ಇಡಿ ಪ್ರವೇಶ ಪ್ರಕ್ರಿಯೆ ಆರಂಭ : ಆನ್ ಲೈನ್ ಒಂದೇ ದಾರಿ

Srinivas Rao BV

ಬೆಂಗಳೂರು: ಎರಡು ವರ್ಷದ ಬಿ.ಇಡಿ ಕೋರ್ಸ್ ನ ಸರ್ಕಾರಿ ಕೋಟಾದ ಸೀಟುಗಳ ಪ್ರವೇಶ ಪ್ರಕ್ರಿಯೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಕೇಂದ್ರೀಕೃತ ದಾಖಲಾತಿ ಘಟಕವು ಚಾಲನೆ ನೀಡಿದೆ.
ಕಳೆದ ಬಾರಿಯ ಪ್ರವೇಶ ಪ್ರಕ್ರಿಯೆಯಲ್ಲಿ ಉಂಟಾದ ಗೊಂದಲ ಗೋಜಲುಗಳು ಈ ಬಾರಿ ಆಗದಂತೆ ಮುನ್ನೆಚ್ಚರಿಕೆ ವಹಿಸಿರುವ ಇಲಾಖೆಯು, ಅರ್ಜಿ ಸ್ವೀಕಾರ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆ ತಂದಿದೆ.
ಅರ್ಹ ಅಭ್ಯರ್ಥಿಗಳು ಇಲಾಖೆಯ ವೆಬ್ ಸೈಟ್‍ನಲ್ಲಿ ಆನ್‍ಲೈನ್ ಅರ್ಜಿ ಭರ್ತಿ ಮಾಡಬೇಕು. ಇದನ್ನು ಬಿಟ್ಟು ಬೇರಾವ ಮಾರ್ಗಗಳಿಲ್ಲ. ಡಿ. 28 ಅರ್ಜಿ ಸಲ್ಲಿಸಲು ಕೊನೆ ದಿನವಾಗಿದ್ದು, ಶುಲ್ಕ ಪಾವತಿಸಲು ಡಿ. 30 ಅಂತಿಮ ದಿನ. ತಾಂತ್ರಿಕ ತೊಂದರೆ ಅಥವಾ ಸಮಸ್ಯೆ ಎದುರಾದಲ್ಲಿ ಸಹಾಯ ವಾಣಿ (080 22228805, 22483140, 22483145) ಸಂಪರ್ಕಿಸಬಹುದು. ಶುಲ್ಕ ಪಾವತಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅಭ್ಯರ್ಥಿಗಳು ಕಡ್ಡಾಯವಾಗಿ ಪಾವತಿಸಬೇಕು. ಪೂರ್ವ ಮುದ್ರಿತ ಚಲನ್ ನಲ್ಲಿ ಮಾತ್ರ ಸ್ಟೇಟ್ ಬ್ಯಾಂಕ್ ಆಫ್  ಮೈಸೂರಿನ ಯಾವುದೇ ಶಾಖೆಯಲ್ಲಿ ಹಣ ಪಾವತಿಸಬಹುದು. ಬೇರೆ ಯಾವುದೇ ಬ್ಯಾಂಕಿನಲ್ಲಿ ಹಣ ಪಾವತಿಸಿದಲ್ಲಿ, ಬ್ಯಾಂಕ್ ಹುಂಡಿ, ಪೋಸ್ಟಲ್ ಆರ್ಡರ್, ಮನಿ ಆರ್ಡರ್ ಅಥವಾ ಇನ್ಯಾವುದೇ ಸ್ವರೂಪದಲ್ಲಿ ಶುಲ್ಕ ಪಾವತಿಸುವಂತಿಲ್ಲ ಹಾಗೂ ಅಂತಹ ಅರ್ಜಿ ಪರಿಗಣಿಸಲ್ಪಡುವುದಿಲ್ಲ.

SCROLL FOR NEXT