(ಸಾಂದರ್ಭಿಕ ಚಿತ್ರ) 
ಜಿಲ್ಲಾ ಸುದ್ದಿ

ಕಾಗದಕ್ಕಾಗಿ ಮರಗಳ ಸರ್ವನಾಶ ಮಠದಿಂದ ಪ್ರಕಾಶನ ಪ್ರಾಯಶ್ಚಿತ್ತ

ಸಮಾಜದಲ್ಲಿ ಮಾಡಿದ ತಪ್ಪುಗಳಿಗೆ ಪ್ರಾಯಶ್ಚಿತ್ತ ಪಟ್ಟುಕೊಳ್ಳುವುದು ಸಹಜ. ಆದರೆ ಪ್ರಕಾಶನವೊಂದು ನೂರಾರು ಪುಸ್ತಕಗಳನ್ನು ಮುದ್ರಿಸಿದ್ದಕ್ಕಾಗಿ ಪ್ರಾಯಶ್ಚಿತ್ತ ಮಾಡಿಕೊಂಡ ಘಟಯನೆಯನ್ನು ಎಲ್ಲಾದರು ನೋಡಿದ್ದೀರಾ? ಹೌದು. ಇಂತಹದ್ದೊಂದು ವಿಶೇಷ...

ಬೆಂಗಳೂರು: ಸಮಾಜದಲ್ಲಿ ಮಾಡಿದ ತಪ್ಪುಗಳಿಗೆ ಪ್ರಾಯಶ್ಚಿತ್ತ ಪಟ್ಟುಕೊಳ್ಳುವುದು ಸಹಜ. ಆದರೆ ಪ್ರಕಾಶನವೊಂದು ನೂರಾರು ಪುಸ್ತಕಗಳನ್ನು ಮುದ್ರಿಸಿದ್ದಕ್ಕಾಗಿ ಪ್ರಾಯಶ್ಚಿತ್ತ ಮಾಡಿಕೊಂಡ ಘಟಯನೆಯನ್ನು ಎಲ್ಲಾದರು ನೋಡಿದ್ದೀರಾ? ಹೌದು. ಇಂತಹದ್ದೊಂದು ವಿಶೇಷ  ಸಂಪ್ರದಾಯಕ್ಕೆ ನಗರದ ಗಿರಿನಗರದಲ್ಲಿರುವ ಶ್ರೀ ರಾಮಚಂದ್ರಾಪುರ ಮಠ ಚಾಲನೆ ನೀಡಿದೆ.

ಶನಿವಾರ ಮಠದ ಪ್ರಾಂಗಣದಲ್ಲಿ ಆಯೋಜಿಸಿದ್ದ ಪ್ರಕಾಶ ನಾಮಾ ನೋತ್ಸವ ಕಾರ್ಯಕ್ರಮದಲ್ಲಿ `ಪ್ರಕಾಶನ ಪ್ರಾಯಶ್ಚಿತ್ತ' ಎಂಬ ವಿಶಿಷ್ಟ ಪರಿಕಲ್ಪನೆಯನ್ನು ಭಕ್ತರಿಗೆ ಪರಿಚಯಿಸಲಾಯಿತು. ಕಾಗದ ತಯಾರಿಕೆಗೆ ಜಗತ್ತಿನಾದ್ಯಂತ ಮರಗಳನ್ನು ಕಡಿಯಲಾಗುತ್ತಿದೆ. ಆದ್ದರಿಂದ ಪುಸ್ತಕಗಳ ಉಪಯೋಗ ಪಡೆದುಕೊಳ್ಳುವ ಓದುಗ ಮತ್ತು ಪೂರೈಸುವ ಪ್ರಕಾಶನ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು.

ಇದಕ್ಕೆ ಪರಿಹಾರವಾಗಿ ಕೈಲಾದಷ್ಟು ಮರಗಳನ್ನು ಬೆಳೆಸುವ ಯೋಜನೆ ಹಮ್ಮಿಕೊಳ್ಳಬೇಕು ಎಂಬುದೇ ಈ ಕಾರ್ಯಕ್ರಮದ ತಿರುಳು ಮತ್ತು ಮಠದ ನಿಲುವು. ಪ್ರಸಕ್ತ ವರ್ಷದಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭಾನ್ಕುಳಿ ಪರಿಸರದಲ್ಲಿ ಭಾರತೀ ಪ್ರಕಾಶನದ ವತಿಯಿಂದ ಮೊದಲ ಹಂತವಾಗಿ ಸಾವಿರ ಸಸಿಗಳನ್ನು ನೆಡಲಾಗುತ್ತದೆ.

ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ಸಸಿಗೆ ನೀರೆರೆದು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಸಾಹಿತಿ ಗಜಾನನ ಶರ್ಮ ಮಾತನಾಡಿ, ಪ್ರಪಂಚದಲ್ಲಿ 40 ಲಕ್ಷ ಟನ್ ಕಾಗದ ತಯಾರಾಗುತ್ತಿದೆ. ದಿನಕ್ಕೆ ಎರಡೂವರೆ ಕೋಟಿ ಮರಗಳನ್ನು ಕಡಿಯಲಾಗುತ್ತಿದೆ. ಅಂದರೆ ಪ್ರತಿ ಸೆಕೆಂಡ್‍ಗೆ 289 ಮರಗಳು ನಾಶವಾಗುತ್ತಿವೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT