ಜಿಲ್ಲಾ ಸುದ್ದಿ

ತ್ಯಾಜ್ಯ ವಿಲೇವಾರಿ ಘಟಕ ಸ್ಥಗಿತಕ್ಕೆ ಆಗ್ರಹಿಸಿ ಪ್ರತಿಭಟನೆ

Manjula VN

ಬೆಂಗಳೂರು: `ನಮ್ಮ ಹಳ್ಳಿಗಳನ್ನೇನು ತಿಪ್ಪೆಗುಂಡಿ ಎಂದು ತಿಳಿದಿದ್ದಿರಾ? ನಿಮ್ಮ ನಗರದ ಕಸ ತಂದು ನಮ್ಮ ಗ್ರಾಮಗಳಲ್ಲಿ ಯಾಕೆ ಸುರಿತಿರಿ? ದಯವಿಟ್ಟು ನಮ್ಮನ್ನು ನಮ್ಮ ಪಾಡಿಗೆ ಆರೋಗ್ಯದಿಂದ ಬದುಕಲು ಬಿಡಿ. ನಿಮಗೆ ದಮ್ಮಯ್ಯ ಅಂತೀವಿ.' ಬೆಂಗಳೂರು ಉತ್ತರ ತಾಲೂಕು, ಯಶವಂತಪುರ ಹೋಬಳಿಗೆ ಸೇರಿದ ಕನ್ನಹಳ್ಳಿ ಮತ್ತು ಸೀಗೇಹಳ್ಳಿ ಗ್ರಾಮಗಳ ಜನರ ಒಡಲ ನುಡಿಗಳಿವು. ಈ ಗ್ರಾಮಗಳಲ್ಲಿ ಸ್ಥಾಪಿಸಲಾಗಿರುವ ತಾಜ್ಯ ವಿಲೇವಾರಿ ಘಟಕಗಳನ್ನು ಕೂಡಲೇ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಸುತ್ತಮುತ್ತಲ ಗ್ರಾಮಸ್ಥರು ಸೋಮವಾರ ಪ್ರತಿಭಟಿಸಿದರು.

ಬಿಬಿಎಂಪಿಯ ಸುಮಾರು 100 ವಾರ್ಡ್ ಗಳ ಹೋಟೆಲ್ ತಾಜ್ಯ ವಿಲೇವಾರಿಗೆ ಕನ್ನಹಳ್ಳಿ ಮತ್ತು ಸೀಗೇಹಳ್ಳಿಯಲ್ಲಿ ಸುಮಾರು 30 ಎಕರೆ ಪ್ರದೇಶದಲ್ಲಿ ಘಟಕಗಳನ್ನು ನಿರ್ಮಿಸಲಾಗಿತ್ತು. ಆದರೆ, ಕಸ ಸಮರ್ಪಕವಾಗಿ ವಿಲೇವಾರಿ ಯಾಗದೆ ಒಂದು ವಾರದಿಂದ ಕೊಳೆತುದುರ್ನಾತ ಬೀರುತ್ತಿದೆ. ಇದರಿಂದ ಕೋಡಿಗೆಹಳ್ಳಿ, ಸೂಲಿ ಕೆರೆ, ಚನ್ನೇನಹಳ್ಳಿ, ಕಡಬಗೆರೆ, ಮಾಚೋಹಳ್ಳಿ, ಕಾಚೋಹಳ್ಳಿ ಸೇರಿದಂತೆ ಸಮೀಪದ ಗ್ರಾಮಸ್ಥರು ದುರ್ವಾಸನೆಯಲ್ಲೆ ಕಾಲ ಕಳೆಯಬೇಕಾಗಿದೆ. ಅಲ್ಲದೆ, ಸೊಳ್ಳೆ ಹಾಗೂ ನೊಣದ ಕಾಟ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗದ ಭಿೀತಿ ಎದುರಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಘಟಕಗಳ ಸಮೀಪ 10ಕ್ಕೂ ಹೆಚ್ಚು ಖಾಸಗಿ ಶಾಲಾ-ಕಾಲೇಜುಗಳಿವೆ. ಬಿಡಿಎಯಿಂದ ಏಷ್ಯಾದಲ್ಲೇ ದೊಡ್ಡದಾದ 4 ಸಾವಿರ ಎಕರೆ ಪ್ರದೇಶದಲ್ಲಿ ನಾಡಪ್ರಭ ಕೆಂಪೇಗೌಡ ಬಡಾವಣೆ ನಿರ್ಮಿಸುತ್ತಿ- ದ್ದಾರೆ. ವಿವಿಧ ಖಾಸಗಿ ಕಂಪನಿಗಳಲ್ಲಿ ಸುಮಾರು 3 ಸಾವಿರ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದು, ಈ ಕಸದಿಂದಾಗಿ ಈ ಉದ್ಯೋಗಿಗಳ ಆರೋಗ್ಯದಲ್ಲೂ ಏರುಪೇರಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದರು.

ಕನ್ನಹಳ್ಳಿ, ಸೀಗೇಹಳ್ಳಿ ಕಸ ವಿಲೇವಾರಿ ಘಟಕ ವಿರೋಧಿ ಹೋರಾಟ ಸಮಿತಿ ಗೌರವಾಧ್ಯಕ್ಷ ರಾಮಚಂದ್ರ ಭಟ್, ಕಾರ್ಯದರ್ಶಿ ಮೋಹನ್‍ರಾಜ್, ಅಧ್ಯಕ್ಷ ಚನ್ನಪ್ಪ, ಶಾಂತರಾಜ್ ಇದ್ದರು.
ಹುಸಿಯಾದ ಭರವಸೆ: ಈಗಾಗಲೇ ಒಮ್ಮೆ ಬೃಹತ್ ಪ್ರತಿಭಟನೆ ನಡೆಸಿ ಪಾಲಿಕೆ ಮೇಯರ್, ಉಪ ಉಮೇ- ಯರ್, ಆಯುಕ್ತರು, ಸಂಬಂಧಪಟ್ಟ ಶಾಸಕರಿಗೆ ಮನವಿ ಸಲ್ಲಿಸಲಾಗಿತ್ತು.
ಮೂಗು ಮುಚ್ಚಿಕೊಂಡು ಗ್ರಾಮಕ್ಕೆ ಬಂದಿದ್ದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಕಸ ಮಾತ್ರ ಹಾಗೆ ಇದ್ದು
ದುರ್ನಾತ ಬಿರುತ್ತಿದೆ. ಜನಪ್ರತಿನಿಧಿಗಳ ಭರವಸೆ ಹುಸಿಯಾಗಿದೆ ಎಂದು ದೂರಿದರು.

SCROLL FOR NEXT