ಜಿಲ್ಲಾ ಸುದ್ದಿ

ವಾಯುಮಾಲಿನ್ಯ: ಮಕ್ಕಳಲ್ಲಿ ಹೆಚ್ಚಾಗುತ್ತಿವೆ ಕಾಯಿಲೆಗಳು

Sumana Upadhyaya

ಬೆಂಗಳೂರು: ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ವಾಸಿಸುತ್ತಿರುವ ಮಕ್ಕಳು ಎಷ್ಟು  ಸುರಕ್ಷಿತರು? ವಾಯುಮಾಲಿನ್ಯ ಇವರ ಆರೋಗ್ಯದ ಮೇಲೆ ಏನೆಲ್ಲಾ ಪರಿಣಾಮ ಉಂಟು      ಮಾಡುತ್ತಿದೆ ಎಂಬುದರ ಸೆಂಟರ್ ಫಾರ್ ಸೈನ್ಸ್ ಆಂಡ್ ಎನ್ವೈರ್ ಮೆಂಟ್ (ಸಿಎಸ್ ಇ) ವರದಿ ಬೆಳಕು ಚೆಲ್ಲಿದೆ.

ನಗರದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ ಮತ್ತು ಶಬ್ದಮಾಲಿನ್ಯದ ವಿರಾಟ ರೂಪ ದರ್ಶನವಾಗಿದೆ.ಲೇಕ್ ಸೈಡ್ ಆಸ್ಪತ್ರೆ ಮತ್ತು ವೈದ್ಯಕೀಯ ಕೇಂದ್ರದ ಶಿಶುತಜ್ಞ ಡಾ.ಎಚ್. ಪರಮೇಶ್ವರ್ ಅವರು ವಾಯುಮಾಲಿನ್ಯದಿಂದ ಆರೋಗ್ಯದ ಮೇಲೆ ಬೀರುತ್ತಿರುವ  ದುಷ್ಪರಿಣಾಮಗಳ ಬಗ್ಗೆ 18 ವರ್ಷದೊಳಗಿನ 20 ಸಾವಿರ ಮಕ್ಕಳನ್ನು ಅಧ್ಯಯನ  ನಡೆಸಿದ್ದಾರೆ.ಇವರಿಂದ ತಿಳಿದು ಬಂದ ಮಾಹಿತಿ  ಶೇ.9 ರಷ್ಟು ರೋಗಗಳು ಹೆಚ್ಚಾಗಿವೆ.

ಆ ಮಕ್ಕಳ ಭೌಗೋಳಿಕ ಹಿನ್ನೆಲೆ ಮತ್ತು ಶಾಲಾ ವಾತಾವರಣ ಆಧರಿಸಿ ಮೂರು ಗುಂಪುಗಳನ್ನು ರಚಿಸಲಾಯಿತು. ಒಂದನೇ ಗುಂಪಿನಲ್ಲಿ ಹೆಚ್ಚು ವಾಹನ ದಟ್ಟಣೆ ಪ್ರದೇಶದ  ಮಕ್ಕಳ ಹೆಚ್ಚು ವಾಹನ ದಟ್ಟಣೆ ಪ್ರದೇಶ ಮತ್ತು ಸಾಮಾಜಿಕ-ಆರ್ಥಿಕವಾಗಿ ಹಿಂದುಳಿದ  ಪ್ರದೇಶದ ಮಕ್ಕಳ ಅನಾರೋಗ್ಯ ಶೇ.31.14ರಷ್ಟು ಹೆಚ್ಚಿದೆ. 1994ರಿಂದ 99 ವರ್ಷದೊಳಗೆ    ಈ ಎಲ್ಲ ಮಕ್ಕಳಲ್ಲಿ ಅಸ್ತಮಾ ಕಾಯಿಲೆಯು ಶೇ 20ರಿಂದ 27.5 ರಷ್ಟು ಹಾಗೂ  ತೀವ್ರತರವಾದ ಅಸ್ತಮಾದ ಪ್ರಮಾಣ ಪ್ರದೇಶದ ಮಕ್ಕಳ ಅನಾರೋಗ್ಯ ಶೇ.11.15 ರಷ್ಟು   ಹೆಚ್ಚಿದೆ. ಗ್ರಾಮಾಂತರ ಪ್ರದೇಶದ   ಮಕ್ಕಳ ಅನಾರೋಗ್ಯ ಶೇ.5.7 ರಷ್ಟು ಹೆಚ್ಚಿದೆ. 20 ರಿಂದ  60 ವರ್ಷದೊಳಗಿನ 292 ಆರೋಗ್ಯವಂತ ಪುರುಷರನ್ನು ಬೆಂಗಳೂರು ಗ್ರಾಮಾಂತರದ   ನಿಯಂತ್ರಿತ  ಗುಂಪುಗಳಿಂದ 148 ಮಂದಿ ಹಾಗೂ ನಗರದ ಪ್ರದೇಶದ  144 ಮಂದಿಯನ್ನು ಆಯ್ಕೆ  ಮಾಡಿಕೊಳ್ಳಲಾಗಿತ್ತು) ಅಧ್ಯಯನಕ್ಕೆ ಒಳಪಡಿಸಿದಾಗ ಅವರ ಉಸಿರಾಟ  ವಿಧಾನವನ್ನು   ಬೆಂಗಳೂರು ವಾಯುಮಾಲಿನ್ಯ ನಿಯಂತ್ರಿಸುತ್ತಿರುವುದು ಕಂಡು ಬಂತು.

SCROLL FOR NEXT