ಜಿಲ್ಲಾ ಸುದ್ದಿ

ಭಾರತದ ವಿವಿಗಳೂ ವಿಶ್ವಶ್ರೇಷ್ಠವಾಗಲಿ: ರಾಷ್ಟ್ರಪತಿ ಪ್ರಣಬ್ ಮುಖರ್ಜಿ

Shilpa D

ಕಲಬುರಗಿ: ವಿಶ್ವದ ಶ್ರೇಷ್ಠ 200 ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಭಾರತದ್ದು ಸಿಂಹಪಾಲು ಆಗೋದು ಯಾವಾಗ? ಇದು ರಾಷ್ಟ್ರಪತಿ ಕೇಂದ್ರೀಯ ಉನ್ನತ ಶಿಕ್ಷಣ ಸಂಸ್ಥೆಗಳ ಕುಲಾಧಿಪತಿಗಳೂ ಆಗಿರುವ ಪ್ರಣಬ್ ಮುಖರ್ಜಿ ಅವರ ಪ್ರಶ್ನೆ.

ಕಲಬುರಗಿ ಇಎಸ್ ಐಸಿ ಆಸ್ಪತ್ರೆ ಸಂಕೀರ್ಣದ ಸಭಾಂಗಣದಲ್ಲಿ ಮಂಗಳವಾರ ನಡೆದ ಕರ್ನಾಟಕ ಕೇಂದ್ರೀಯ ವಿವಿ 2ನೇ ವಾರ್ಷಿಕ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ದೇಶದಲ್ಲಿ 16 ಐಐಟಿಗಳು, 41 ಕೇಂದ್ರೀಯ ವಿವಿಗಳು ಕಾರ್ಯ ನಿರ್ವಹಿಸುತ್ತಿವೆ. ಆದರೆ, ಈ ಉನ್ನತ ಸಂಸ್ಥೆಗಳು ಗುಣಮಟ್ಟದ ಶಿಕ್ಷಣಕ್ಕೆ ವಿಶ್ವಮಟ್ಟದಲ್ಲಿ ಇನ್ನೂ ಯಾಕೆ ಹೆಸರು ಮಾಡಿಲ್ಲ. ನಳಂದಾ, ತಕ್ಷಶಿಲಾ, ಉಧಂಪುರಿ,  ವಿಕ್ರಮಶೀಲಾದಂಥ ವಿದ್ಯಾಲಯಗಳೊಂದಿಗೆ ಸಾವಿರ ಹಿಂದೆ ಶಿಕ್ಷಣ ರಂಗದಲ್ಲಿ ಭಾರತ ವಿಶ್ವಗುರುವಾಗಿ ಮೆರೆದಿತ್ತು.

ಆದರೆ, ಬದಲಾದ ಕಾಲಘಟ್ಟದಲ್ಲಿ ನಮ್ಮ ಉನ್ನತ ಶಿಕ್ಷಣ ಸಂಸ್ಥೆಗಳು ಟಾಪ್ ವಿವಿಗಳ ಪಟ್ಟಿಯಲ್ಲಿ ಯಾವಾಗ ಎದ್ದು ಕಾಣೋದು, ಈ ಕ್ಷೇತ್ರದಲ್ಲಿ  ನಾವೆಲ್ಲಿ ಎಡವುತ್ತಿದ್ದೇವೆ ಎಂಬುದರ ಚಿಂತನ- ಮಂತನ ನಡೆಯಬೇಕೆಂದು ತಿಳಿಸಿದರು.

SCROLL FOR NEXT