ಭಟ್ಕಳ: ಭಟ್ಕಳ ಚಿನ್ನದ ವ್ಯಾಪಾರಿಯೊಬ್ಬರ ಕೊಟಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬಯಿನ ಇಬ್ಬರು ಪೊಲೀಸರು ಹಾಗೂ ಇಬ್ಬರು ಸ್ಥಳೀಯರನ್ನು ಮಂಗಳವಾರ ಬಂಧಿಸಿ, ರು. 81 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಭಟ್ಕಳದ ಎಸ್.ಎಂ. ಅಲ್ತಾಫ್ , ಮಹಮದ್ ಅಕ್ತಾರ, ಮುಂಬಯಿ ಪೊಲೀಸ್ ಅಧಿಕಾರಿ ಪಂಕಜ್ ರಘುನಾಥ ಕೈಲಾರ ಹಾಗೂ ಪೊಲೀಸ್ ಪೇದೆ ಜನಾರ್ಧನ ರಾಜಿ ಬಂದಿತರು.
ಭಟ್ಕಳದ ಚಿನ್ನದ ವ್ಯಾಪಾರಿ ಮಹಮ್ಮದ್ ಸಲಿಂ ಖಾಜಿಯಾ ತಮ್ಮ ಸಂಬಂಧಿಯಿಂದ ಚಿನ್ನದ ವ್ಯಾಪಾರಕ್ಕೆ ಸಂಬಂಧಿಸಿ ರು.1 ಕೋಟಿ ತರುವಂತೆ ಡಿ. 19ರಂದು ಹೇಳಿದ್ದರು. ಅಲ್ತಾಫ್ ಆ ಹಣವನ್ನು ಭಟ್ಕಳಕ್ಕೆ ತರುತ್ತಿದ್ದಾಗ ಮುಂಬೈ ಪೊಲೀಸರು ದರೋಡೆ ಮಾಡಿದ್ದರು.