ಬೆಂಗಳೂರು: ಬಾಲಾಪರಾಧಿ ಮಸೂದೆಗೆ ಅಂಗೀಕಾರ ನೀಡಿರುವ ಕೇಂದ್ರ ಸರ್ಕಾರದ ಕ್ರಮ ಖಂಡ ನೀಯವಾಗಿದ್ದು, ಮಕ್ಕಳ ವಿರೋಧಿಯಾ ಗಿರುವ ಈ ಮಸೂದೆಯನ್ನು
ರಾಷ್ಟ್ರಪತಿಗಳು ಮರುಪರಿಶೀಲಿಸಲು ವಾಪಸ್ ಕಳುಹಿಸಬೇಕು ಎಂದು ಕ್ರಿಸ್ಪ್ ಸಂಸ್ಥೆ ಒತ್ತಾಯಿಸಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಕೀಲೆ ರಾಜಲಕ್ಷ್ಮಿ, ಲೈಂಗಿಕ ದೌರ್ಜನ್ಯ ಮತ್ತು ಅಪರಾಧಗಳಿಂದ ಗಂಡು ಮತ್ತು ಹೆಣ್ಣು ಮಕ್ಕಳನ್ನು ರಕ್ಷಿಸಲು ಜಾರಿಗೆ ತಂದಿರುವ ಪೋಸ್ಕೋ 2012ಕ್ಕೆ, ಸಂಸತ್ತಿನಲ್ಲಿ ಅಂಗೀಕಾರವಾಗಿರುವ ಬಾಲಾಪರಾಧಿ ಮಸೂದೆ 2015 ವಿರುದ್ಧವಾಗಿದೆ ಎಂದರು.
ಒಬ್ಬ ವ್ಯಕ್ತಿ ಯಾವಾಗ ವಯಸ್ಕನಾಗುತ್ತಾನೆ ಎಂದು ಹೇಳಲು ಸಾಧ್ಯವಿಲ್ಲವೆಂದು ಮಾನಸಿಕ ತಜ್ಞರು ಹೇಳುತ್ತಾರೆ. ಭಾರತ ಸೇರಿದಂತೆ ಹಲವು ದೇಶಗಳಲ್ಲಿ ವಯಸ್ಕರನ್ನು ಗುರುತಿಸಲು ಅವರ ವಯಸ್ಸು 18 ಆಗಿರಬೇಕು ಎಂದು ಒಪ್ಪಿದ್ದು, ಇದಕ್ಕೆ ವೈಜ್ಞಾನಿಕ ಪುರಾವೆಗಳ ಬೆಂಬಲವಿದೆ. ಆದರೆ ಬಾಲಾಪರಾಧಿಗಳ ವಯಸ್ಸನ್ನು 18 ರಿಂದ 16ಕ್ಕೆ ಇಳಿಸಿರುವ ಈ ಮಸೂದೆಯಿಂದ ಬಹುಸಂಖಅಯಾತ ಅಮಾಯಕ ಮಕ್ಕಳು ತೊಂದರೆಗೆ ಒಳಗಾಗಲಿದ್ದಾರೆ.
18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಮತದಾರರಲ್ಲದ ಕಾರಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅವರ ಹಕ್ಕುಗಳನ್ನು ಕಡೆಗಣಿಸುತ್ತಿದೆ. 16 ರಿಂದ 18 ವರ್ಷದೊಳಗಿನವರನ್ನು ಅಪರಾಧಿಗಳಂತೆ ನಡೆಸಿಕೊಳ್ಳುವುದು ಮಕ್ಕಳ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. 16 ವರ್ಷದ ಮಕ್ಕಳನ್ನು ಜೈಲಿಗೆ ಕಳುಹಿಸುವುದರಿಂದ ಅವರು ಜೈಲಿನಲ್ಲಿನ ಅಪರಾಧಿಗಳಿಂದ ಪ್ರೇರೇಪಿತರಾಗಿ ಮುಂದೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಅಪಾಯವಿದೆ ಎಂದು ಹೇಳಿದರು.
ನಂತರ ಮಾತನಾಡಿದ ಸಮಾಜ ಸೇವಕ ಮನೋಜ್ ಡೇವಿಡ್, ರಾಷ್ಟ್ರಪತಿಗಳು ವೈಜ್ಞಾನಿಕ ಚಿಂತನೆ ಮೂಲಕ ಮಕ್ಕಳ ವಿರೋಧಿಯಾಗಿರುವ ಬಾಲಾಪರಾಧಿ ಮಸೂದೆಯನ್ನು ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.