ಸಾಂದರ್ಭಿಕ ಚಿತ್ರ 
ಜಿಲ್ಲಾ ಸುದ್ದಿ

ಕ್ರೂಸರ್‌- ಟ್ಯ್ರಾಕ್ಟರ್ ಮುಖಾಮುಖಿ ಡಿಕ್ಕಿ: 4 ಸಾವು

ಟ್ಯ್ರಾಕ್ಟರ್ ಮತ್ತು ಕ್ರೂಸರ್‌ ವಾಹನ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ...

ಶಿವಮೊಗ್ಗ: ಟ್ಯ್ರಾಕ್ಟರ್ ಮತ್ತು ಕ್ರೂಸರ್‌ ವಾಹನ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹಾರನಹಳ್ಳಿ ರಸ್ತೆಯ ಮಲ್ಲಾಪುರದಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.

ಚಿತ್ರದುರ್ಗದಿಂದ ಸಿಗಂದೂರು ಕಡೆ ತೆರಳುತ್ತಿದ್ದ ಕ್ರೂಸರ್‌ ವಾಹನ ಶಿವಮೊಗ್ಗ ಜಿಲ್ಲೆಯ ಹಾರನಹಳ್ಳಿ ರಸ್ತೆಯ ಮಲ್ಲಾಪುರದ ಬಳಿ ಟ್ಯ್ರಾಕ್ಟರ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಟ್ಯ್ರಾಕ್ಟರ್ ಚಾಲಕ ಸೇರಿದಂತೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರನ್ನು ದೇವೇಂದ್ರಪ್ಪ( 44), ವನಜಾಕ್ಷಮ್ಮ (39), ಮಾದಮ್ಮ( 30) ಹಾಗೂ ಲಕ್ಷ್ಮೀ(4) ಎಂದು ಗುರುತಿಸಲಾಗಿದೆ.

ಕ್ರೂಸರ್‌ ವಾಹನದಲ್ಲಿದ್ದ 19 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಸಂಬಂಧ ಪೊಲೀಸ್‌ ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Strait of Hormuz: 'ಅಡ್ಡ ಬರುವ Iran ಸಣ್ಣ ಬೋಟ್ ಗಳ ಗುಂಡಿಟ್ಟು ಉಡಾಯಿಸಿ': ಅಮೆರಿಕ ಸೇನೆಗೆ Donald Trump ಆದೇಶ!

ಸ್ವಾತಂತ್ರ್ಯದ ನಂತರ ತಮಿಳುನಾಡು, ಪ.ಬಂಗಾಳದಲ್ಲಿ ದಾಖಲೆ ಪ್ರಮಾಣದ ಮತದಾನ, ಮತದಾರರಿಗೆ ಧನ್ಯವಾದ ಹೇಳಿದ ಚುನಾವಣಾ ಆಯೋಗ!

Hassan: 'ಬಡ್ಡಿ ಸಮೇತ ತೀರಿಸೋವರ್ಗೂ ರಾಜಕೀಯದಲ್ಲಿ ಇರ್ತೀನಿ': ಎಚ್ ಡಿಕೆ ಮುಂದೆಯೇ HD Revanna ಕಣ್ಣೀರಿನ ಶಪಥ

IPL 2026: ಮತ್ತೆ ಮುಗ್ಗರಿಸಿದ MI, 103 ರನ್ ಅಂತರದಲ್ಲಿ CSKಗೆ ಜಯ!

IPL 2026: MI ವಿರುದ್ಧ ಸ್ಫೋಟಕ ಬ್ಯಾಟಿಂಗ್, ಶತಕದ ಮೂಲಕ ಐತಿಹಾಸ ನಿರ್ಮಿಸಿದ Sanju Samson, ಎಲೈಟ್ ಗ್ರೂಪ್ ಸೇರ್ಪಡೆ

SCROLL FOR NEXT