ಸಾಂದರ್ಭಿಕ ಚಿತ್ರ 
ಜಿಲ್ಲಾ ಸುದ್ದಿ

ಕಲ್ಲಿನಿಂದ ಜಜ್ಜಿ ಬಾಲಕನ ಕೊಲೆ

ಡಿ.ಜೆ ಹಳ್ಳಿ ರೋಷನ್ ನಗರದಲ್ಲಿ ಬಾಲಕ ಗೌಸ್(16) ಎಂಬಾತನನ್ನು ದುಷ್ಕರ್ಮಿಗಳು ಕಲ್ಲಿನಿಂದ ಜಜ್ಜಿ...

ಬೆಂಗಳೂರು: ಡಿ.ಜೆ ಹಳ್ಳಿ ರೋಷನ್ ನಗರದಲ್ಲಿ ಬಾಲಕ ಗೌಸ್(16) ಎಂಬಾತನನ್ನು ದುಷ್ಕರ್ಮಿಗಳು ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆಗೈದಿದ್ದಾರೆ. ಬುಧವಾರ ಬೆಳಗ್ಗೆ ರೋಷನ್ ನಗರ ಸಮೀಪದಲ್ಲೇ ಕಸ ಹಾಗೂ ಇತರ ತ್ಯಾಜ್ಯ ಬಿಸಾಡುವ ಹಳ್ಳದಂಥ ಜಾಗದಲ್ಲಿ ಶವ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಕಲ್ಲಿನಿಂದ ತಲೆ ಹಾಗೂ ಮುಖ ಕ್ಕೆ ಜಜ್ಜಿ ಕೊಲೆಗೈದಿದ್ದಾರೆ. ಶವ ಪತ್ತೆಯಾದ ಜಾಗದಲ್ಲೇ ಕೊಲೆ ನಡೆದಿರುವ ಸಾಧ್ಯತೆ ಯಿದ್ದು, ಜಗಳವಾಗಿರುವ ಸುಳಿವು ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಡಿ.ಜೆ ಹಳ್ಳಿಯಲ್ಲಿರುವ ಸರ್ಕಾರಿ ಶಾಲೆಯಲ್ಲಿ ಗೌಸ್ 9ನೇ ತರಗತಿ ಓದುತ್ತಿದ್ದ. ಶಾಲೆಗೆ ಸರಿಯಾಗಿ ಹೋಗುತ್ತಿರಲಿಲ್ಲ. ಆದರೆ, ಆಗಾಗ ಅಡುಗೆ ಕೆಲಸಕ್ಕೆ ಹೋಗುತ್ತಿದ್ದ.

ಹೊರಗೆ ಹೋದರೆ ಒಂದು ದಿನ, ಎರಡು ದಿನ ಬಿಟ್ಟು ವಾಪಸ್ ಬರುತ್ತಿದ್ದ. ಮಂಗಳವಾರ ರಾತ್ರಿಯೂ ಅಡುಗೆ ಕೆಲಸ ಇದೆ ಎಂದು ಹೇಳಿ ಹೋಗಿದ್ದ ಎಂದು ಪಾಲಕರು ತಿಳಿಸಿದ್ದಾರೆ. ಆದರೆ, ಬೆಳಗ್ಗೆ ಸಾರ್ವಜನಿಕರು ಶವ ಗಮನಿಸಿದ ನಂತರವೇ ಕೊಲೆ ನಡೆದಿರುವುದು ಗೊತ್ತಾಗಿದೆ. ಕೊಲೆ ನಡೆದ ಜಾಗಕ್ಕೂ, ಮನೆಗೂ ಕೇವಲ 500 ಮೀಟರ್ ಅಂತರವಿದೆ. ಆದರೆ, ಘಟನೆ ನಡೆದ ಜಾಗದಲ್ಲಿ ಬೀದಿದೀಪ ಇಲ್ಲ. ಮೋರಿ ಹರಿಯುತ್ತಿರುವುದರಿಂದ ಸಾರ್ವಜನಿಕರ ಓಡಾಟವೂ ಇರುವುದಿಲ್ಲ. ಹೀಗಾಗಿ ರಾತ್ರಿ ಜಗಳವಾಗಿರುವುದು ಯಾರ ಗಮನಕ್ಕೂ ಬಂದಿಲ್ಲ. ಗೌಸ್‍ನ ಸ್ನೇಹಿತರು ಅಥವಾ ಪರಿಚಿತರು ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಮೀಟಿಂಗ್; ಸಿಎಂ ಸ್ಥಾನಕ್ಕೆ ರಾಜೀನಾಮೆ?, ದಿಢೀರ್ ಮುಂಬೈಗೆ ತೆರಳಿದ ರಾಜ್ಯಪಾಲ ಗೆಹ್ಲೋಟ್..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

SCROLL FOR NEXT