ಜಿಲ್ಲಾ ಸುದ್ದಿ

ಜಯಾ ಪ್ರಕರಣ: ಎಸ್‍ಪಿಪಿ ಮುಂದುವರಿಕೆ ಪ್ರಶ್ನಿಸಿದ್ದ ಅರ್ಜಿ ವಜಾ

ಬೆಂಗಳೂರು: ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪರ ವಿಶೇಷ ವಕೀಲ (ಎಸ್‍ಪಿಪಿ) ಭವಾನಿ ಸಿಂಗ್ ಅವರ ಮುಂದುವರಿಕೆ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಎಸ್‍ಪಿಪಿ ಭವಾನಿ ಸಿಂಗ್ ಅವರ ನ್ನು ಮುಂದುವರಿಸದಂತೆ ಕೋರಿ ಡಿಎಂಕೆ ಕಾರ್ಯದರ್ಶಿ ಅನ್ಬಳಗನ್ ಮೇಲ್ಮನವಿ ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾ.ಎನ್.ಕುಮಾರ್ ಮತ್ತು ನ್ಯಾ.ಬಿ.ವೀರಪ್ಪ ಅವರಿದ್ದ ವಿಭಾಗೀಯ ಪೀಠ, ಸುಪ್ರೀಂ ಕೋರ್ಟ್‍ನ ನಿರ್ದೇಶನದ ಮೇರೆಗೆ ಮೇಲ್ಮನವಿ ವಿಚಾರಣೆಗೆ ರಾಜ್ಯ ಹೈಕೋರ್ಟ್ ವಿಶೇಷ ನ್ಯಾಯಪೀಠ ರಚಿಸಿ ವಿಚಾರಣೆ ನಡೆಸುತ್ತಿದೆ.

ಸುಪ್ರೀಂ ಈ ಕುರಿತು ಮೂರು ತಿಂಗಳ ಒಳಗಾಗಿ ವಿಚಾರಣೆ ಪೂರ್ಣಗೊಳಿಸುವಂತೆ ಆದೇಶಿಸಿದೆ. ಆದ್ದರಿಂದ ಈ ಹಂತಲ್ಲಿ ಇದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿ ಪುರಸ್ಕರಿಸಲು ಸಾಧ್ಯವಿಲ್ಲ . ಸಿಆರ್‍ಪಿಸಿ 301ರ ಪ್ರಕಾರ ಭವಾನಿ ಸಿಂಗ್ ಅವರು ಮುಂದುವರಿಯಬಹುದು. ಅಲ್ಲದೇ ಎಸ್‍ಪಿಪಿ ನೇಮಕ ಸಂಬಂಧ ಹಾಗೂ ಮುಂದುವರಿಕೆ ಕುರಿತು ಕರ್ನಾಟಕ ಸರ್ಕಾರ ನಿರ್ಧಾರಿಸಬೇಕಿದೆ. ಈ ಕುರಿತು ತಮಿಳುನಾಡಿನ ಸರ್ಕಾರದ ಪಾತ್ರವಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.

SCROLL FOR NEXT