ಜಿಲ್ಲಾ ಸುದ್ದಿ

ಹಣ ವಸೂಲಿ: ನಾಲ್ವರು ಮಂಗಳಮುಖಿ ಸೆರೆ

ದಾರಿಹೋಕರನ್ನು ತಡೆದು ಹಣ ವಸೂಲಿ ಮಾಡುತ್ತಿದ್ದ ನಾಲ್ವರು ಮಂಗಳಮುಖಿ ಯರನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ...

ಬೆಂಗಳೂರು: ದಾರಿಹೋಕರನ್ನು ತಡೆದು ಹಣ ವಸೂಲಿ ಮಾಡುತ್ತಿದ್ದ ನಾಲ್ವರು ಮಂಗಳಮುಖಿಯರನ್ನು ವಿಜಯನಗರಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಾಪೂಜಿನಗರ ನಿವಾಸಿಗಳಾದ ಪ್ರಿಯಾ, ಅವಿಷ್ಕ, ಸ್ನೇಹ, ಭುವನ ಬಂಧಿತರು. ಆರೋಪಿಗಳು ಹಣ ಇರುವ ಅಥವಾ ಶ್ರೀಮಂತ ವ್ಯಕ್ತಿಗಳನ್ನು ಕಂಡ ತಕ್ಷಣ ಅವರ ಬಳಿ ಹೋಗಿ ವಿಚಿತ್ರವಾಗಿ ವರ್ತಿಸುತ್ತಿದ್ದರು. ಬಲವಂತವಾಗಿ ಅವರ ಕೈಗಳನ್ನು ಇಬ್ಬರು ಹಿಡಿದು ಉಳಿದಿಬ್ಬರು ತಾವೇ ಶರ್ಟ್ ಮತ್ತು ಪ್ಯಾಂಟ್ ಜೇಬಿಗೆ ಕೈ ಹಾಕಿ ಇರುವ ಹಣ, ಆಭರಣ ದೋಚುತ್ತಿದ್ದರು.

ಜನವರಿ 24ರಂದು ಬಸವರಾಜು ಎಂಬುವರನ್ನು ಅಡ್ಡಗಟ್ಟಿ ಹಣ ನೀಡುವಂತೆ ಕೇಳಿದ್ದಾರೆ. ಚಿಲ್ಲರೆ ಇಲ್ಲ ಎಂದು ಅವರು ನಿರಾಕರಿಸಿದ ಕಾರಣ, ಚಿಲ್ಲರೆ ಕೊಡುವ ನೆಪದಲ್ಲಿ ರು.50 ಪಡೆದು ನಂತರ ಬಲವಂತವಾಗಿ ಜೇಬಿನಲ್ಲಿದ್ದ ಸಾವಿರಾರು ರುಪಾಯಿ ಹಣ ದೋಚಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ವಿಜಯನಗರ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ, ಆರೋಪಿಗಳು ನಗರದ ಹಲವೆಡೆ ಈ ರೀತಿ ಬಲವಂತವಾಗಿ ಸುಲಿಗೆ ಮಾಡಿರುವುದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT