(ಸಂಗ್ರಹ ಚಿತ್ರ) 
ಜಿಲ್ಲಾ ಸುದ್ದಿ

ಮೇಕ್ ಇನ್ ಏರೋ ಇಂಡಿಯಾ

ಉಕ್ಕಿನ ಹಕ್ಕಿಗಳ ಜಾಗತಿಕ ಉತ್ಸವಕ್ಕೆ ಯಲಹಂಕ ವಾಯುನೆಲೆ ಸಿದ್ಧವಾಗಿದ್ದು, `ಮೇಕ್ ಇನ್ ಇಂಡಿಯಾ' ಮಂತ್ರ ಪಠಣೆಯೇ ಈ ಬಾರಿಯ `ಏರೋ ಇಂಡಿಯಾ' ಪ್ರದರ್ಶನದ ಆಕರ್ಷಣೆಯಾಗಿದೆ..

ಬೆಂಗಳೂರು: ಉಕ್ಕಿನ ಹಕ್ಕಿಗಳ ಜಾಗತಿಕ ಉತ್ಸವಕ್ಕೆ ಯಲಹಂಕ ವಾಯುನೆಲೆ ಸಿದ್ಧವಾಗಿದ್ದು, `ಮೇಕ್ ಇನ್ ಇಂಡಿಯಾ' ಮಂತ್ರ ಪಠಣೆಯೇ ಈ ಬಾರಿಯ `ಏರೋ ಇಂಡಿಯಾ' ಪ್ರದರ್ಶನದ ಆಕರ್ಷಣೆಯಾಗಿದೆ.

ಪ್ರಧಾನಿ ನರೇಂದ್ರ ಮೋದಿ ಸ್ವತಃ ಈ ಬಾರಿಯ ಉಕ್ಕಿನ ಹಕ್ಕಿಗಳ ಪ್ರದರ್ಶನಕ್ಕೆ ಚಾಲನೆ ನೀಡಲಿರುವುದರಿಂದ ಏರೋ ಇಂಡಿಯಾ-2015ಕ್ಕೆ ವಿಶೇಷ ಮೆರಗು ಬಂದಿದೆ. ಫೆ.18ರಿಂದ 22ರವರೆಗೆ ನಡೆಯಲಿರುವ ಏಷ್ಯಾದ ಅತಿದೊಡ್ಡ ವಿಮಾನ ಪ್ರದರ್ಶನದಲ್ಲಿ 3 ಲಕ್ಷಕ್ಕೂ ಅಧಿಕ ಜನ ಭಾಗವಹಿಸುವ ನಿರೀಕ್ಷೆಯಿದೆ. ಅಂದ ಹಾಗೆ ಬೆಂಗಳೂರಿನಲ್ಲಿ ನಡೆಯುವ ಕೊನೆಯ ಪ್ರದರ್ಶನವಾಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

`ಏರೋ ಇಂಡಿಯಾ'ದ 10ನೇ ಆವೃತ್ತಿಯು ಇವತ್ತಿನವರೆಗೆ ನಡೆದ ಪ್ರದರ್ಶನಕ್ಕಿಂತ ಅತಿ ದೊಡ್ಡ ಹಾಗೂ ಅತಿ ಹೆಚ್ಚು ಬಂಡವಾಳ ಸೆಳೆಯುವ ಪ್ರದರ್ಶನವಾಗುವ ಸಾಧ್ಯತೆ ನಿಚ್ಚಳವಾಗಿದೆ. ಇದೇ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆಗೆ ಆಗಮಿಸುತ್ತಿದ್ದಾರೆ. ಈ ಬಾರಿಯ ಏರೋ ಇಂಡಿಯಾದಲ್ಲಿ ರಕ್ಷಣೆ ಹಾಗೂ ವಿಮಾನಯಾನಕ್ಕೆ ಸಂಬಂಧಿಸಿದ 594 ಕಂಪನಿಗಳು, 300ಕ್ಕೂ ಅಧಿಕ ಸಿಇಒ ಹಾಗೂ ನಾನಾ ದೇಶಗಳ ಸೇನಾ ಪ್ರತಿನಿಧಿ ಗಳು ಭಾಗವಹಿಸುತ್ತಿದ್ದಾರೆ. ಈ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಬಂಡವಾಳ ಆಕರ್ಷಣೆಗೆ ಉತ್ತಮ ವೇದಿಕೆ ರೂಪುಗೊಂಡಿದೆ.

ಅಂದಹಾಗೆ ಕೇಂದ್ರ ಸರ್ಕಾರದ ಪ್ರತಿನಿಧಿಗಳನ್ನು ಹೊರತುಪಡಿಸಿ ಏರೋಸ್ಪೇಸ್ ಕ್ಷೇತ್ರದಲ್ಲಿ ಒಂದು ಹೆಜ್ಜೆ ಮುಂದಿರುವ ಕರ್ನಾಟಕದ ಜತೆಗೆ ಆಂಧ್ರಪ್ರದೇಶ ಹಾಗೂ ಗುಜರಾತ್ ರಾಜ್ಯಗಳು ಕೂಡ ಬಂಡವಾಳ ಆಕರ್ಷಿಸಲು ಈ ಅವಕಾಶ ಬಳಸಿಕೊಳ್ಳಲು ಮುಂದಾಗಿವೆ. ಬಹುತೇಕ ಯುದ್ಧ ವಿಮಾನಗಳು ಸೇರಿದಂತೆ `ಏರೋ ಇಂಡಿಯಾ-2015ರಲ್ಲಿ ಭಾಗವಹಿಸಲಿರುವ 72 ವಿಮಾನಗಳು ಈಗಾಗಲೇ ವಾಯು ನೆಲೆಗೆ ಬಂದಿದ್ದು, ಅಭ್ಯಾಸ ಹಾರಾಟ ನಡೆಸುತ್ತಿವೆ. ಆದರೆ ಈ ಬಾರಿ ರಷ್ಯಾದ ಯುದಟಛಿ ವಿಮಾನಗಳು ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ರಕ್ಷಣಾ ಇಲಾಖೆ ಮೂಲಗಳು ತಿಳಿಸಿವೆ.

ಪ್ರದರ್ಶನದ ಆಕರ್ಷಣೆಗಳೇನು?
ಏರೋ ಇಂಡಿಯಾದಲ್ಲಿ ಪ್ರತಿಯೊಬ್ಬರೂ ನೋಡಲು ಉತ್ಸುಕವಾಗಿರುವುದು ಉಕ್ಕಿನ ಹಕ್ಕಿಗಳ ನರ್ತನ. ಸರ್ಕಾರ ಹಾಗೂ ಕಂಪನಿಗಳು ವ್ಯವಹಾರಿಕ್ಕಾಗಿ ಏರೋ ಇಂಡಿಯಾ ಏರ್ಪಡಿಸಿದರೆ ಸಾಮಾನ್ಯ ಜನರಿಗೆ ಆಗಸದಲ್ಲಿ ಈ ಹಕ್ಕಿಗಳ ನೃತ್ಯ ನೋಡುವುದೇ ಚೆಂದ. ಎಂದಿನಂತೆ ಈ ಬಾರಿಯೂ ರೆಡ್‍ಬುಲ್ ತಂಡ ಬೆಂಗಳೂರಿಗರನ್ನು  ಮಂತ್ರಮುಗ್ಧರನ್ನಾಗಿಸಲಿದೆ. ಜತೆಗೆ ಈ ಬಾರಿಯ ಎರಡು ಹೊಸ ಆಕರ್ಷಣೆಯೆಂದರೆ ಇಂಗ್ಲೆಂಡ್‍ನ ಯಾಕೋವ್ಲೆಸ್ ಹಾಗೂ ಬ್ರೆಟ್ಲಿಂಗ್ ವಿಂಗ್ ವಾಕರ್ಸ್ ತಂಡ. ಆರು ಲಘು ವಿಮಾನಗಳೊಂದಿಗೆ ಹಾರಾಟ ನಡೆಸುವ ಯಾಕೋವ್ಲೆಸ್‍ನ ಪ್ರದರ್ಶನವು ವೀಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸುತ್ತದೆ. ಇನ್ನು ಬ್ರೆಟ್ಲಿಂಗ್ ವಿಂಗ್ ವಾಕರ್ಸ್ ತಂಡದ ಮಸ್ತಿಯನ್ನು ನೋಡಿದರೆ ಪ್ರತಿಯೊಬ್ಬರೂ ಹುಬ್ಬೇರಿಸುತ್ತಾರೆ.

ಮೂವರು ಯುವತಿಯರು ಉಕ್ಕಿನ ಹಕ್ಕಿಗಳ ರೆಕ್ಕೆಯ ಮೇಲೆ ಮುದ್ದಾದ ನಡಿಗೆ ಹಾಕುತ್ತಾರೆ. ವಿಮಾನ ಹಾರಾಟಕ್ಕೆ ಜನರು ಹೆದರುವಾಗ ಈ ಲಲನೆಯರು ವಿಮಾನಗಳ ರೆಕ್ಕೆಯ ಮೇಲೆ ನಡೆದಾಡುತ್ತಾರೆ. ಇದಲ್ಲದೇ ಧ್ರುವ, ರುದ್ರ, ಸುಖೋಯ್, ಟೈಗರ್ ಮೋತ್, ಎಫ್-15ಸಿ ಈಗಲ್, ಎಫ್-16ಸಿ, ಬೋಯಿಂಗ್ ಕೆಸಿ -135, ಬೋಯಿಂಗ್ ಸಿ-17, ರಫಾಲೆ, ಎಂಬ್ರೇಯರ್, ಇಎಂಬಿ-145ಎಲ್, ಪಿಸಿ-12ಎನ್‍ಜಿ, ಫಾಲ್ಕನ್ 2000, ಫೆನಮ್100ಇ, ಬೋಯಿಂಗ್ ಬಿ75, ಬೋಯಿಂಗ್ ಎ75, ವೈಕಿಂಗ್, ಕ್ಯಾಟ್‍ವಾಕ್, ವಾಸ್ಪ್, ಆರ್‍ಆರ್ ಜೆ 5, ಇಎಂಬಿ 505, ಕಿಂಗ್ ಏರ್ 350 ಎಆರ್ ಸೇರಿದಂತೆ ಒಟ್ಟು 72 ವಿಮಾನಗಳ ಪ್ರದರ್ಶನವಾಗಲಿದೆ.

ಮಳಿಗೆಗಳ ವಿಶೇಷವೇನು?
ಈ ಬಾರಿಯ ಏರೋ ಇಂಡಿಯಾದಲ್ಲಿ 594 ಕಂಪನಿಗಳು ಮಳಿಗೆ ಹಾಕಿವೆ. ಇದರಲ್ಲಿ 266 ಭಾರತೀಯ ಕಂಪನಿಗಳು ಸೇರಿವೆ. ಎಲ್ಲ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಈ ಮಳಿಗೆಗಳಲ್ಲಿ ಪ್ರದರ್ಶಿಸಲಿದ್ದು, ವಿಮಾನಯಾನ ಕ್ಷೇತ್ರದ ನಾನಾ ಮುಖಗಳ ಅನಾವರಣವಾಗಲಿದೆ. ಹೊಸ ತಂತ್ರಜ್ಞಾನ ಹಾಗೂ ಮಾರುಕಟ್ಟೆ ಜಗತ್ತಿಗೆ ಇದೊಂದು ಅದ್ಭುತ ಅವಕಾಶ.

ಸುಮಾರು 33 ರಾಷ್ಟ್ರಗಳ ಸಂಸ್ಥೆಗಳು ಭಾಗವಹಿಸುತ್ತಿರು ವುದರಿಂದ ನಾನಾ ಒಪ್ಪಂದಗಳಿಗೆ ಇದು ವೇದಿಕೆಯಾಗಲಿದೆ. ಈ ಮಳಿಗೆಗಳಲ್ಲಿ ಕಂಪನಿಗಳ ಉತ್ಪನ್ನಗಳ ಪ್ರದರ್ಶನ ಹಾಗೂ ಸಂಶೋಧನೆಗಳ ಮಾಹಿತಿ ಇರುತ್ತದೆ. ಸಾಮಾನ್ಯ ಜನರಿಗೆ ನೆರವಾಗುವುದಕ್ಕಿಂತ ಉದ್ಯಮಿಗಳಿಗೆ ಸಹಾಯವಾಗುವ ನಿಟ್ಟಿನಲ್ಲಿ ಈ ಮಳಿಗೆಗಳನ್ನು ರೂಪಿಸಿರುತ್ತಾರೆ. ಹಿಂದಿನ ಏರೋ ಇಂಡಿಯಾದಲ್ಲಿ 29 ದೇಶಗಳ 274 ಕಂಪನಿಗಳು ಭಾಗವಹಿಸಿದ್ದವು.

ಸಾಮಾನ್ಯ ಟಿಕೆಟ್‍ನಲ್ಲಿ ಪ್ರವೇಶ ಪಡೆದು ಮಳಿಗೆ ವೀಕ್ಷಣೆ ಸಾಧ್ಯವಿಲ್ಲ. ಮೇಕ್ ಇನ್ ಇಂಡಿಯಾ ರತ್ನಗಂಬಳಿ ರಕ್ಷಣೆ ಹಾಗೂ ವಿಮಾನಯಾನ ಕ್ಷೇತ್ರದಲ್ಲಿ ಬಂಡವಾಳ ಹೂಡಬಹುದಾದ ಸುಮಾರು 200 ಕಂಪನಿಗಳನ್ನು ಕೇಂದ್ರ ಸರ್ಕಾರ ಈಗಾಗಲೇ ಗುರುತಿಸಿದೆ. ಅವುಗಳನ್ನು ಸೇರಿಸಿದಂತೆ ಸುಮಾರು 694 ಕಂಪನಿಗಳಿಗೆ `ಏರೋ ಇಂಡಿಯಾ-2015'ರಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಆರಂಭಿಕ ದಿನಗಳಲ್ಲಿ ಈ ಕಂಪನಿಗಳು ಭಾರತದಲ್ಲಿ ರಕ್ಷಣಾ ಸಾಮಗ್ರಿಗಳ ಉತ್ಪಾದನೆ ಆರಂಭಿಸಲು ಬಂಡವಾಳ ಹೂಡುವಂತೆ ಆಕರ್ಷಿಸುವುದು ಕೇಂದ್ರ ಸರ್ಕಾರದ ಆದ್ಯತೆ. ಆ ಬಳಿಕ ಸಂಶೋಧನೆ ಹಾಗೂ ಅಬಿsವೃದಿಟಛಿಗೆ ಒತ್ತು ನೀಡಲಾಗುತ್ತದೆ.

ಪ್ರತಿ ಏರೋ ಇಂಡಿಯಾದಲ್ಲಿ ರಕ್ಷಣಾ ಸಾಮಗ್ರಿಗಳ ಮಾರಾಟವೇ ದೊಡ್ಡ ಸುದ್ದಿಯಾಗುತ್ತಿತ್ತು. ಆದರೆ ಮೊದಲ ಬಾರಿಗೆ ಮಾರಾಟಕ್ಕಿಂತ ಬಂಡವಾಳ ಹೂಡಿಕೆಗೆ ಮೊದಲ ಪ್ರಾಶಸ್ತ್ಯ ಸಿಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಈ ನಿಟ್ಟಿನಲ್ಲಿ ಬುಧವಾರ ವಿಶೇಷ ಘೋಷಣೆ ಮಾಡುವ ಸಾಧ್ಯತೆಯಿದೆ ಹಾಗೂ ರಕ್ಷಣಾ ವಿಭಾಗದ `ಮೇಕ್ ಇನ್ ಇಂಡಿಯಯಾ' ಯೋಜನೆಗೆ ನೀಲ ನಕ್ಷೆ ಹೊರಡಿಸಲಿದ್ದಾರೆ ಎಂದು ರಕ್ಷಣಾ ರಾಜ್ಯ ಸಚಿವ ರಾವ್ ಇಂದ್ರಜಿತ್ ಸಿಂಗ್ ಅವರು ನಗರದಲ್ಲಿ ಸೋಮವಾರ ತಿಳಿಸಿದ್ದಾರೆ. ಇದೇ ಕಾರಣದಿಂದ ಕೆಲ ಮಳಿಗೆಗಳಿಗೂ ಪ್ರಧಾನಿ ಮೋದಿ ಭೇಟಿ ನೀಡುವ ಸಾಧ್ಯತೆಯಿದೆ ಎಂದು ಆಯೋಜಕರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

SCROLL FOR NEXT