ಜಿಲ್ಲಾ ಸುದ್ದಿ

ಎಟಿಎಂ ಹಲ್ಲೆ ಪ್ರಕರಣ ವೃತ್ತಿ ಜೀವನದ ಸವಾಲು: ಪಚಾವೋ

ಬೆಂಗಳೂರು: ಎಟಿಎಂ ಕೇಂದ್ರದಲ್ಲಿ ಬ್ಯಾಂಕ್ ಅಧಿಕಾರಿ ಮೇಲಿನ ಹಲ್ಲೆ ಪ್ರಕರಣ ಪತ್ತೆಯಾಗದಿರುವುದು ಹಾಗೂ ಅತ್ಯಾಚಾರ ಪ್ರಕರಣಗಳ ನಿಯಂತ್ರಣ ನನ್ನ ಸೇವಾವಧಿಯಲ್ಲಿ ಅತ್ಯಂತ ಸವಾಲಿನದ್ದು ಎನಿಸಿವೆ ಎಂದು ನಿವೃತ್ತಿಯಾಗುತ್ತಿರುವ ಪೊಲೀಸ್ ಮಹಾನಿರ್ದೇಶಕ ಲಾಲ್ ರುಖಾಮ್ ಪಚಾವೋ ಹೇಳಿದರು.

ಶುಕ್ರವಾರ ಕೋರಮಂಗಲ ಕವಾಯತು ಮೈದಾನದಲ್ಲಿ ಸೇವಾ ಬೀಳ್ಕೊಡುಗೆ ಕವಾಯತಿನಲ್ಲಿ ಅವರಿಗೆ ಗೌರವ ವಂದನೆ ಸಲ್ಲಿಸಲಾಯಿತು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪೊಲೀಸ್ ಮುಖ್ಯಸ್ಥನಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ಅಪರಾಧ ಕೃತ್ಯಗಳ ನಿಯಂತ್ರಣ ಪ್ರಮುಖ ಜವಾಬ್ದಾರಿ. 2.9 ವರ್ಷದ ನನ್ನ ಸೇವಾವ„ ತೃಪ್ತಿ ತಂದಿದೆ ಎಂದರು. ವಿಧಾನಸಭೆ, ಲೋಕಸಭೆ ಚುನಾವಣೆಗಳು ಶಾಂತಿಯುತವಾಗಿ ನಡೆದಿವೆ. ಆದರೆ, ಸಾಮೂಹಿಕ ಅತ್ಯಾಚಾರ ಹಾಗೂ ಶಾಲೆ ಆವರಣದಲ್ಲಿ ಮಕ್ಕಳ ಮೇಲೆ ನಡೆದ ಅತ್ಯಾಚಾರ ಪ್ರಕರಣಗಳು ಅತ್ಯಂತ ಹೀನ ಕೃತ್ಯಗಳು ಇವುಗಳನ್ನು ತಡೆಯುವುದು ಪ್ರಮುಖ ಸವಾಲಾಗಿತ್ತು.

ಜತೆಗೆ ನೈತಿಕ ಪೊಲೀಸ್ ಗಿರಿ ನಿಯಂತ್ರಣ, ಭೂಗತ ಲೋಕದ ಚಟುವಟಿಕೆಗಳು ಹಾಗೂ ದಾಳಿ ಪ್ರಕರಣಗಳು ಪೊಲೀಸರು ಎಚ್ಚರದಿಂದ ಇರುವಂತೆ ಮಾಡಿವೆ ಎಂದರು. ಮಲ್ಲೇಶ್ವರದಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಆರೋಪಿಗಳನ್ನು ಬಂ„ಸಲಾಗಿದೆ. ಆದರೆ, ಚರ್ಚ್ ಸ್ಟ್ರೀಟ್ ಸ್ಫೋಟ ಪ್ರಕರಣದಲ್ಲಿ ಬಂಧನವಾಗಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಅದೇ ರೀತಿ ಎಟಿಎಂ ಕೇಂದ್ರದಲ್ಲಿ ಮಹಿಳೆ ಮೇಲೆ ನಡೆದ ಹಲ್ಲೆ ಪ್ರಕರಣವೂ ಅತ್ಯಂತ ಸವಾಲಿನದ್ದು. ಎರಡು ಪ್ರಕರಣಗಳನ್ನು ನಮ್ಮ ಪೊಲೀಸರು ಪತ್ತೆ ಹಚ್ಚುವ ವಿಶ್ವಾಸವಿದೆ ಎಂದು ಪಚಾವೋ ಹೇಳಿದರು.

ಮುಖ್ಯಮಂತ್ರಿ, ಗೃಹಸಚಿವರು ಹಾಗೂ ಮುಖ್ಯ ಕಾರ್ಯದರ್ಶಿಗಳು ನಮ್ಮ ಕೆಲಸಕ್ಕೆ ಬೆಂಬಲವಾಗಿದ್ದರು. ಇಲಾಖೆ ಹಾಗೂ ಅಧಿಕಾರಿಗಳು ಕೆಲಸ ನಿರ್ವಹಿಸಲು ಉತ್ತಮವಾಗಿ ಸಹಕರಿಸಿದ್ದಾರೆ. ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ. ರಾಜ್ಯ ಪೊಲೀಸ್ ಇಲಾಖೆ ಉತ್ತಮ ಸ್ಥಿತಿಯಲ್ಲಿದ್ದು ನೂತನ ಡಿಜಿ ಅವರ ನೇತೃತ್ವದಲ್ಲಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿದ್ದಾರೆ ಎಂದರು. ನಿವೃತ್ತಿ ಬಳಿಕ ಬೆಂಗಳೂರಿನಲ್ಲೇ ಉಳಿದುಕೊಳ್ಳುವ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದು ಪಚಾವೋ ಹೇಳಿದರು. ಹಿರಿಯ ಅಧಿಕಾರಿಗಳು ಹಾಜರಿದ್ದರು.

SCROLL FOR NEXT