ಮಂಗಳೂರು: ಹಾಡಹಗಲೇ ಮಚ್ಚಿನಿಂದ ಕೊಚ್ಚಿ ಗ್ಯಾರೇಜ್ ಮಾಲೀಕನ ಹತ್ಯೆಗೈದಿರುವ ಘಟನೆ ಮಂಗಳೂರಿನ ಸೂರಿಂಜೆ ಗ್ರಾಮದ ಬಳಿ ಮಂಗಳವಾರ ಬೆಳಗ್ಗೆ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಸೂರಿಂಜೆ ಸಮೀಪ ಬೆಳ್ಳಂಬೆಳಗ್ಗೆ ಶೆಟಲ್ ಕಾಕ್ ಆಡಲು ಆಟದ ಮೈದಾನಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಕೇಶವ್ ಶೆಟ್ಟಿ(34)ಯನ್ನು ಅಡ್ಡಗಟ್ಟಿದ್ದ ದುಷ್ಕರ್ಮಿಗಳು ಮಚ್ಚು, ಲಾಂಗುಗುಳಿಂದ ಮನಸೋ ಇಚ್ಚೆ ದಾಳಿ ಮಾಡಿ ಪರಾರಿಯಾಗಿದ್ದಾರೆ.
ದಾಳಿಯಿಂದಾಗಿ ಕೇಶವಶೆಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದು, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರಿನಲ್ಲಿ ಸಣ್ಯ ಗ್ಯಾರೇಜ್ ಇಟ್ಟುಕೊಂಡಿದ್ದ ಕೇಶವ್ ಶೆಟ್ಟಿ ಇತ್ತೀಚೆಗಷ್ಟೆ, ಸೂರತ್ಕಲ್ ಸುತ್ತಮುತ್ತ ಹೆಚ್ಚಾಗಿರುವ ಗಾಂಜಾ ಮಾರಾಟದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನಲೆಯಲ್ಲಿ ದುಷ್ಕರ್ಮಿಗಳನ್ನು ಆತನನ್ನು ಹತ್ಯೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ಕೇಶವ್ ಶೆಟ್ಟಿ ಹತ್ಯೆ ಹಿಂದೇ ಗಾಂಜಾ ಮಾಫಿಯಾದ ಕೈವಾಡವಿರುವ ಗುಮಾನಿ ಎದುರಾಗಿದೆ.
ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.