ಅಂಗಡಿಗಳಿಗೆ ಬೀಗ ಜಡಿದ ಬಿಬಿಎಂಪಿ ಸಮಿತಿ 
ಜಿಲ್ಲಾ ಸುದ್ದಿ

ಬಾಡಿಗೆ ಒಪ್ಪಂದ ನವೀಕರಿಸದ ಅಂಗಡಿಗಳಿಗೆ ಬೀಗ ಜಡಿದ ಬಿಬಿಎಂಪಿ

ಕೆ ಆರ್ ಮಾರುಕಟ್ಟೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ (ಬಿಬಿಎಂಪಿ) ಅಂಗಡಿಗಳನ್ನು ತಿಂಗಳಿಗೆ

ಬೆಂಗಳೂರು: ಕೆ ಆರ್ ಮಾರುಕಟ್ಟೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ  (ಬಿಬಿಎಂಪಿ) ಅಂಗಡಿಗಳನ್ನು ತಿಂಗಳಿಗೆ ೪೦೦ರೂಗಳಿಗೆ ಬಾಡಿಗೆಗೆ ಪಡೆದು ಅದನ್ನು ಮತ್ತೊಬ್ಬನ್ನಿಗೆ ೫೦೦೦೦ರೂ ಬಾಡಿಗೆಗೆ ಕೊಟ್ಟಿದ್ದರು ಎಂದಿದ್ದಾರೆ ಬಿಬಿಎಂಪಿ ಅಧಿಕಾರಿ ಬಿ ಆರ್ ನಂಜುಂಡಪ್ಪ.

ಮಾರುಕಟ್ಟೆಗೆ ಸಂಬಂಧಿಸಿದ ಬಿಬಿಎಂಪಿ ಸಮಿತಿ, ಕೆ ಆರ್ ಮಾರ್ಕೆಟ್ ನಲ್ಲಿ, ಹಲವಾರು ವರ್ಷಗಳಿಂದ ಬಾಡಿಗೆ ಒಪ್ಪಂದವನ್ನು ನವೀಕರಿಸದ ಆರು ಅಂಗಡಿಗಳನ್ನು ವಶಪಡಿಸಿಕೊಂಡು ಬೀಗ ಜಡಿದಿದ್ದಾರೆ. ಕಳೆದ ನವೆಂಬರ್ ನಲ್ಲೆ ಈ ಅಂಗಡಿ ಮಾಲೀಕರಿಗೆ ನೋಟಿಸ್ ಕಳುಹಿಸಲಾಗಿತ್ತು. ಈ ವಿಚಾರಣೆಯ ವೇಳೆಯಲ್ಲಿ ಅಂಗಡಿಯನ್ನು ಬೇರೆಯವರಿಗೆ ಬಾಡಿಗೆಗೆ ನೀಡಿರುವ ವಿಷಯ ಕೂಡ ತಿಳಿದು ಬಂದಿದೆ.

ನಂಜಪ್ಪ ಎಂಬುವವರಿಗೆ ೧೫x೧೨ ಚದರ ಅಡಿ ಅಂಗಡಿಯನ್ನು ಬಿಬಿಎಂಪಿ ೪೦೦ ರೂ ತಿಂಗಳ ಬಾಡಿಗೆಗೆ ಒಪ್ಪಂದವಾಗಿತ್ತು. ಆದರೆ ನಂಜಪ್ಪ ಮತ್ತೊಬ್ಬರಿಗೆ ಐವತ್ತು ಸಾವಿರ ರೂ ತಿಂಗಳ ಬಾಡಿಗೆಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ನಂಜುಡಪ್ಪ ತಿಳಿಸಿದ್ದಾರೆ. "ನಾವು ಅಂಗಡಿಗೆ ಬೀಗ ಜಡಿಯಲು ಹೊರಟಾಗ ಅಲ್ಲಿನ ಹೊಸ ಮಾಲೀಕ ತಾನು ಐವತ್ತು ಸಾವಿರ ಬಾಡಿಗೆ ನೀಡುತ್ತಿದ್ದು ಅಂಗಡಿಯನ್ನು ಮುಚ್ಚಲು ಸಾಧ್ಯವಿಲ್ಲ ಎಂದರು. ಕರ್ನಾಟಕ ಮುನ್ಸಿಪಾಲ್ ಕಾರ್ಪೋರೇಶನ್ ನೀತಿಯ ಪ್ರಕಾರ, ಬಾಡಿಗೆದಾರ ಮತ್ತೊಬ್ಬರಿಗೆ ಅಂಗಡಿಗಳನ್ನು ಬಾಡಿಗೆ ನೀಡಲು ಸಾಧ್ಯವಿಲ್ಲ. ಆದುದರಿಂದ ನಾವು ಅಂಗಡಿಗೆ ಬೀಗ ಹಾಕಿದ್ದೇವೆ" ಎಂದು ಅವರು ತಿಳಿಸಿದ್ದಾರೆ.

ಉಳಿದ ಅಂಗಡಿ ಮಾಲೀಕರು ತಮ್ಮ ಬಾಡಿಗೆ ಒಪ್ಪಂದವನ್ನು ಮುಂದಿನ ೧೫ ದಿನಗಳಲ್ಲಿ ನವೀಕರಿಸುವಂತೆ ಸಮಿತಿ ಸೂಚಿಸಿದೆ. ಇಲ್ಲದಿದ್ದರೆ ಬಾಡಿಗೆ ಒಪ್ಪಂದ ನವೀಕರಿಸದ ಎಲ್ಲ ಅಂಗಡಿಗಳನ್ನೂ ವಶಪಡಿಸಿಕೊಳ್ಳಲಾಗುತ್ತದೆ ಎಂದಿದ್ದಾರೆ.

"ಸದ್ಯಕ್ಕೆ ೬ ಅಂಗಡಿಗಳನ್ನು ವಶಪಡಿಸಿಕೊಂಡು ಬೀಗ ಹಾಕಿದ್ದೇವೆ. ಮುಂದಿನ ಏಳು ದಿನಗಳಲ್ಲಿ ಬಿಬಿಎಂಪಿ ಮಹಾನಿರ್ದೇಶಕ ಲಕ್ಷ್ಮಿನಾರಾಯಣ ಅವರ ಅನುಮತಿಯೊಂದಿಗೆ ಈ ಅಂಗಡಿಗಳನ್ನು ಇತರರಿಗೆ ವಹಿಸಿಕೊಡಲಾಗುತ್ತದೆ" ಎಂದು ನಂಜುಂಡಪ್ಪ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬೆಳಗಾವಿ: ಬೀದಿ ನಾಯಿಗಳ ಅಟ್ಟಹಾಸ, 2 ವರ್ಷದ ಬಾಲಕಿ ಮೇಲೆ ಭೀಕರ ದಾಳಿ

SCROLL FOR NEXT