ಜಿಲ್ಲಾ ಸುದ್ದಿ

ಬಹಮನಿ ಸುಲ್ತಾನರ ಕಾಲದ ನಾಣ್ಯ ಪತ್ತೆ

ಸಮೀಪದ ಬಂಡ್ರಾಳ ಗ್ರಾಮದ ಹೊಲದಲ್ಲಿ ಬಹಮನಿ ಸುಲ್ತಾನರ ಕಾಲದ 245 ತಾಮ್ರದ ನಾಣ್ಯಗಳು ಪತ್ತೆಯಾಗಿವೆ. ಅವುಗಳನ್ನು ರೈತ ತಹಸೀಲ್ದಾರ್ ಗೆ ವಶಕ್ಕೆ...

ಗಂಗಾವತಿ: ಸಮೀಪದ ಬಂಡ್ರಾಳ ಗ್ರಾಮದ ಹೊಲದಲ್ಲಿ ಬಹಮನಿ ಸುಲ್ತಾನರ ಕಾಲದ 245 ತಾಮ್ರದ ನಾಣ್ಯಗಳು ಪತ್ತೆಯಾಗಿವೆ. ಅವುಗಳನ್ನು ರೈತ ತಹಸೀಲ್ದಾರ್ ಗೆ ವಶಕ್ಕೆ ಒಪ್ಪಿಸಿದ್ದಾರೆ.

ಡಿವೈಎಸ್ಪಿ ಕಚೇರಿಯಲ್ಲಿ ಇತಿಹಾಸ ತಜ್ಞ ಡಾ. ಶರಣಬಸಪ್ಪ ಕೋಲ್ಕಾರ ನಾಣ್ಯಗಳ ಪರಿಶೀಲನೆ ನಡೆಸಿ, ಮಾಹಿತಿ ನೀಡಿದರು. 245 ಚಿಕ್ಕ ನಾಣ್ಯಗಳ ಮುಖ ಮತ್ತು ಹಿಂಬದಿಯಲ್ಲಿ ಕಣ್ಣುಗಳು, ನಿಂತ ವ್ಯಕ್ತಿ, ವೃತ್ತಕಾರದಲ್ಲಿ ಚುಕ್ಕೆಗಳು ಇವೆ.

ಈ ನಾಣ್ಯಗಳು 15 ಮತ್ತು 16ನೇ ಶತಮಾನದ ಬಹಮನಿ ಸುಲ್ತಾನರು ಅಥವಾ ವಿಜಯಪುರ ಅದಿಲ್ ಶಾಗಳ ಜಿತಾಲ್ ಗಳನ್ನು ಹೋಲುತ್ತವೆ ಎಂದು ಡಾ.ಕೋಲ್ಕಾರ ತಿಳಿಸಿದ್ದಾರೆ.

ಬಂಡ್ರಾಳ ಮತ್ತು ವೆಂಕಟಗಿರಿ ಗ್ರಾಮದ ಸುತ್ತಲೂ ಕೋಟೆ, ಮಹಾದ್ವಾರಗಳು ಇವೆ. ಶಿಲಾ ಶಾಸನ ಗಳಿವೆ. ಈ ಗ್ರಾಮದ 30 ಕಿ.ಮೀ. ಅಂತರದಲ್ಲಿ ಹೇಮಗುಡ್ಡ ಮತ್ತು ಕುಮ್ಮಟ ದುರ್ಗಾ ಕನಕಗಿರಿ ಹಾಗೂ ಆನೆಗೊಂದಿ ವಿಜಯನಗರ ಸಾಮ್ರಾಜ್ಯಕ್ಕೆ ಒಳಪಟ್ಟಿತ್ತು.

ವಿಜಯಪುರದ ಸೇನಾಪತಿ - ಕನಕಗಿರಿ ಉಡಚಪ್ಪನಾಯಕರ ಮಧ್ಯೆ ಯುದ್ಧವಾಗಿತ್ತು ಆಗ ಕನಕಗಿರಿಯನ್ನು ವಿಜಯಪುರದ ಸೇಮಾಧಿಪತಿಗಳು ವಶಪಡಿಸಿಕೊಂಡಿದ್ದರು. ಬಂಡ್ರಾಳ ಮತ್ತು ವೆಂಕಟ ಗಿರಿ ಗ್ರಾಮಗಳು ಕನಕಗಿರಿ ವ್ಯಾಪ್ತಿಯಲ್ಲೇ ಇದ್ದು, ಇಲ್ಲಿ ಆ ನಾಣ್ಯಗಳು ಚಲಾವಣೆಆಗಿರದ್ದಿರಬಹುದು ಎಂದು ಕೋಲ್ಕಾರ ಅಭಿಪ್ರಾಯಪಟ್ಟಿದ್ದಾರೆ.

ಅಧ್ಯಯನಕ್ಕಾಗಿಪುರಾತತ್ವ ಇಲಾಖೆಗೆ: ಬಂಡ್ರಾಳಗ್ರಾಮದಲ್ಲಿ ಸಿಕ್ಕ 245 ತಾಮ್ರದ ನಾಣ್ಯಗಳಬಗ್ಗೆ ತಿಳಿದುಕೊಳ್ಳಲು ರಾಜ್ಯ ಪುರಾತತ್ವ, ಪರಂಪರೆ ಮತ್ತು ರಾಜ್ಯ ಪ್ರಾಚ್ಯವಸ್ತು ಇಲಾಖೆಗೆ ಕಳಿಸಿ ಕೊಡಲಾಗುತ್ತದೆ ಎಂದುಇತಿಹಾಸ ತಜ್ಞ ಡಾ. ಶರಣಬಸಪ್ಪ ಕೋಲ್ಕಾರತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

2030 Commonwealth Games: ಭಾರತದ ಬಿಡ್‌ಗೆ ಕ್ಯಾಬಿನೆಟ್ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

SCROLL FOR NEXT