ಜಿಲ್ಲಾ ಸುದ್ದಿ

ಕಸ ಹೆಕ್ಕಲು ಸರಳ ಯಂತ್ರ

Sumana Upadhyaya

ಬೆಂಗಳೂರು: ರಸ್ತೆಯಲ್ಲಿ ಬಿದ್ದಿರುವ ಕಸವನ್ನು ಹೆಕ್ಕುವಂತಹ ಸೈಕಲ್ ಮಾದರಿಯ ಸರಳ ಯಂತ್ರವನ್ನು ನಗರದ ಗೋಪಾಲನ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ ಮೆಂಟ್ ಕಾಲೇಜಿನ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ.

ಈ ಸೈಕಲ್ ಯಂತ್ರ ರಸ್ತೆಯ ಮೇಲೆ ಬಿದ್ದಿರುವ ತ್ಯಾಜ್ಯವನ್ನು ಸಂಗ್ರಹಿಸಿ ಸೈಕಲ್  ಹಿಂಭಾಗದಲ್ಲಿರುವ ಡಬ್ಬಕ್ಕೆ ಸುರಿಯುತ್ತದೆ. ಯಂತ್ರಕ್ಕೆ ಅಳವಡಿಸಿರುವ ಕನ್ವೆಯರ್  ಬೆಲ್ಟ್ ವಾಹನಕ್ಕೆ ಅಳವಡಿಸಿರುವ ತ್ಯಾಜ್ಯ ಸಂಗ್ರಹ ಬುಟ್ಟಿಗೆ ತ್ಯಾಜ್ಯವನ್ನು ಹಾಕುತ್ತದೆ. ಸಾಮಾನ್ಯ ಸೈಕಲ್ ತುಳಿಯುವಂತೆ ಈ ವಾಹನವನ್ನು ಚಲಾಯಿಸಿ ರಸ್ತೆಯಲ್ಲಿ ಬಿದ್ದಿರುವ ಕಸವನ್ನು ಸಂಗ್ರಹಿಸಬಹುದು ಎಂದು ವಾಹನವನ್ನು ಅಭಿವೃದ್ಧಿಪಡಿಸಿರುವ ವಿದ್ಯಾರ್ಥಿ ಗಿರೀಶ್ ತಿಳಿಸಿದ್ದಾರೆ.

ಕಾಲೇಜಿನ ಪ್ರೊ.ರಾಜ ಮಾತನಾಡಿ, 3 ತಿಂಗಳಲ್ಲಿ ಈ ಯಂತ್ರವನ್ನು ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ. ಕಸ ಹೆಕ್ಕುವವರು ಕೈಯಿಂದ ಅದನ್ನು ಮುಟ್ಟಬಾರದು ಎಂಬ ಕಾಳಜಿ ಈ ಯಂತ್ರ ತಯಾರಿಕೆಯ ಹಿಂದಿರುವ ಉದ್ದೇಶವಾಗಿತ್ತು. ಇದಕ್ಕೆ 15ರಿಂದ 35 ಸಾವಿರ ರೂಪಾಯಿ ಖರ್ಚು ತಗುಲುತ್ತದೆ. ಶೀಘ್ರವೇ ಇದನ್ನು ಬಿಬಿಎಂಪಿ ಆಯುಕ್ತರ ಮುಂದೆ ಪ್ರದರ್ಶಿಸಿ ಅದನ್ನು ಖರೀದಿಸುವಂತೆ ಮನವಿ ಮಾಡುವುದಾಗಿ ತಿಳಿಸಿದರು.

SCROLL FOR NEXT