ಜಿಲ್ಲಾ ಸುದ್ದಿ

ಮೂರು ತಿಂಗಳು ಮುಂಚಿತವಾಗಿ ಗುತ್ತಿಗೆದಾರರಿಗೆ ಹಣ

ಮೂರು ತಿಂಗಳು ಮುಂಚಿತವಾಗಿ ಗುತ್ತಿಗೆದಾರರ ಹಣ ಬಿಡುಗಡೆ ಮಾಡಿ ಸಮಯಕ್ಕೆ ಸರಿಯಾಗಿ ಪೌರಕಾರ್ಮಿಕರ ವೇತನ ಪಾವತಿಸಲಾಗುವುದು-ಬಿಬಿಎಂಪಿ ಆಡಳಿತಾಧಿಕಾರಿ ಟಿ.ಎಂ ವಿಜಯಭಾಸ್ಕರ್

ಬೆಂಗಳೂರು: ಮೂರು ತಿಂಗಳು ಮುಂಚಿತವಾಗಿ ಗುತ್ತಿಗೆದಾರರ ಹಣ ಬಿಡುಗಡೆ ಮಾಡಿ ಸಮಯಕ್ಕೆ ಸರಿಯಾಗಿ ಪೌರಕಾರ್ಮಿಕರ ವೇತನ ಪಾವತಿಸಲಾಗುವುದು ಎಂದು ಬಿಬಿಎಂಪಿ ಆಡಳಿತಾಧಿಕಾರಿ ಟಿ.ಎಂ ವಿಜಯಭಾಸ್ಕರ್ ತಿಳಿಸಿದ್ದಾರೆ.

ಘನತ್ಯಾಜ್ಯ ವಿಲೇವಾರಿ ವಿಭಾಗದ ಅಧಿಕಾರಿಗಳೊಂದಿಗೆ ಮಂಗಳವಾರ ಸಭೆ ನಡೆಸಿ ನಂತರ ಮಾತನಾಡಿ, ಗುತ್ತಿಗೆದಾರರ ಹಣವನ್ನೇ 3 ತಿಂಗಳ ಮುಂಚಿತವಾಗಿ ಪಾವತಿಸಲಾಗುತ್ತದೆ. ವಲಯಾಧಿಕಾರಿಗಳು ಪೌರಕಾರ್ಮಿಕರಿಗೆ ಪ್ರತಿ ತಿಂಗಳು ತಡವಾಗಂದತೆ ವೇತನ ನೀಡಲು ಇದರಿಂದ ಸಾಧ್ಯವಾಗುತ್ತದೆ. ಚೆಕ್, ನಗದು ಪಾವತಿ ನಿಷೇಧಿಸಲಾಗಿದ್ದು, ವೇತನವನ್ನು ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.    ಬೊಮ್ಮನಹಳ್ಳಿಯಲ್ಲಿ ಸಹಾಯಕ ಹಣಕಾಸು ಅಧಿಕಾರಿ ಪ್ರಸನ್ನ ಹಣ ಪಾವತಿಸಲು ಲಂಚ ಬೆಡಿಕೆಯಿಟ್ಟಿದ್ದಾರೆ ಎಂದು ಗುತ್ತಿಗೆದಾರರು ಆರೋಪಿಸಿದ್ದು ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಟೆರ್ರಾಫಾರ್ಮ ಹಾಗೂ ಎಂ.ಎಸ್.ಜಿ ಪಿ ಘಟಕಗಳಲ್ಲಿ ಕಸ ಹೊತ್ತೊಯ್ಯುವ ಲಾರಿ ಚಾಲಕರಿಗೆ ಊಟದ ಭತ್ಯೆ ನೀಡಲು ನಿರ್ಧರಿಸಲಾಗಿದೆ. ನ.14 ರ ನಂತರ ಮಂಡೂರಿಗೆ ಹೋಗುತ್ತಿದ್ದ ಕಸದ ಲಾರಿಗಳನ್ನು ಟೆರ್ರಾಫಾರ್ಮಾ ಹಾಗೂ ಎಂ.ಎಸ್.ಜಿ.ಪಿ  ಘಟಕಗಳಿಗೆ ಕಳುಹಿಸಲಾಗುತ್ತಿದೆ. ಘಟಕಗಳು ನಗರದಿಂದ ದೂರವಿದ್ದು ಕಸ ವಿಲೇವಾರಿ ಮಾಡುವ ವೇಳೆ ಲಾರಿ ಚಾಲಕರು ಘಟಕದಲ್ಲೇ ನಿಂತು ಕಾಯಬೇಕಾಗುತ್ತದೆ. ಹೀಗಾಗಿ ಚಾಲಕರಿಗೆ ದಿನಕ್ಕೆ ರೂ. 200  ಊಟದ ಭತ್ಯೆ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ. ಅನಧಿಕೃತ ಒ.ಎಫ್.ಸಿ  ಪರಿಶೀಲನೆಗೆ ಅಧಿಕಾರಿಗಳ ತಂಡ ರಚಿಸಲಾಗಿದ್ದು, ಶೀಘ್ರದಲ್ಲೇ ಪರಿಶೀಲನೆ ನಡೆಯಲಿದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT