ಬೆಂಗಳೂರು: ನಗರದಲ್ಲಿನ ಕೇಂದ್ರೀಯ ಆಡಳಿತಾತ್ಮಕ ನ್ಯಾಯಾಧಿಕಾರಣ (ಸಿಎಟಿ)ದಲ್ಲಿ ಮೂರನೇ ನ್ಯಾಯಪೀಠ ಆರಂಭಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ನ್ಯಾಯಾಧೀಕರಣದ ನ್ಯಾಯಾಂಗ ಸದಸ್ಯ ಡಾ.ಕೆ.ಬಿ.ಸುರೇಶ್ ತಿಳಿಸಿದ್ದಾರೆ.
ಸೋಮವಾರ ತಮ್ಮ ಕಚೇರಿಯಲ್ಲಿ ಪತ್ರಕತ್ರ ಸಂವಾದದಲ್ಲಿ ಮಾತನಾಡಿದ ಅವರು, ಸದ್ಯ ನಗರದಲ್ಲಿ ಎರಡು ಸಿಎಟಿ ಪೀಠಗಳು ಕಾರ್ಯನಿರ್ವಹಿಸುತ್ತಿದೆ. ಪ್ರತಿ ವರ್ಷ 2 ಸಾವಿರಕ್ಕೂ ಹೆಚ್ಚು ಅರ್ಜಿಗಳು ಸಿಎಟಿಗೆ ದಾಖಲಾಗುವುದರಿಂದ ತ್ವರಿತ ವಿಲೇವಾರಿಗೆ ಅನುಕೂಲವಾಗುವಂತೆ ಮೂರನೇ ಪೀಠ ಆರಂಭಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಆ ಮನವಿ ಕೇಂದ್ರ ಸರ್ಕಾರದ ಅವಗಾಹನೆಯಲ್ಲಿ ಎದೆ ಎಂದರು.