ಜಿಲ್ಲಾ ಸುದ್ದಿ

ತುಂಟಾಟ ಮಾಡಿದ್ದಕ್ಕೆ ಮೂರು ವರ್ಷದ ಬಾಲಕನನ್ನು ಕೊಂದ 16 ಬಾಲಕ

ಸುಮಾರು 16 ವರ್ಷದ ಬಾಲಕನೊಬ್ಬ ಲಟ್ಟಣಿಗೆಯಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಬೇಗೂರಿನಲ್ಲಿ ನಡೆದಿದೆ.

ಬೆಂಗಳೂರು: ಮನೆಯಲ್ಲಿ ವಸ್ತುಗಳನ್ನು ಬೀಳಿಸುವುದು ಚಪ್ಪಲಿ ಎಸೆಯುವ ತುಂಟಾಟ ಮಾಡುತ್ತಿದ್ದ ಮೂರುವರೆ ವರ್ಷದ ಬಾಲಕನನ್ನು ಸುಮಾರು 16 ವರ್ಷದ ಬಾಲಕನೊಬ್ಬ ಲಟ್ಟಣಿಗೆಯಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಬೇಗೂರಿನಲ್ಲಿ ನಡೆದಿದೆ.

ಬೇಗೂರು ಸಮೀಪದ ಲಕ್ಕಪ್ಪ ಬಡಾವಣೆ ನ್ಯಾನಪನಹಳ್ಳಿ ನಿವಾಸಿ ರವಿ ಮತ್ತು ಶಿವಮ್ಮ ದಂಪತಿಯ ಪುತ್ರ ಪ್ರೀತಮ್ ಕೊಲೆಯಾದ ಬಾಲಕ. ಕೃತ್ಯ ಎಸಗಿದ ಮೈಸೂರು ಜಿಲ್ಲೆ ಕೆ.ಆರ್ ನಗರದ ಸುಮಾರು 16 ವರ್ಷದ ಅಪ್ರಾಪ್ತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಗರದಲ್ಲಿ ಎಲೆಕ್ಟ್ರೀಷಿಯನ್ ಕೆಲಸ ಮಾಡುತ್ತಿರುವ ರವಿ ಮತ್ತು ಶಿವಮ್ಮ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಹಾಸನ ಮೂಲದ ಇವರು ಮಕ್ಕಳ ವಿದ್ಯಾಭ್ಯಾಸಕ್ಕೆಂದು ನಗರಕ್ಕೆ ಬಂದು ನೆಲೆಸಿದ್ದರು. ಇವರ ದೂರದ ಸಂಬಧಿ ಪ್ರೌಢಶಾಲೆ ಹಂತದಲ್ಲಿ ವ್ಯಾಸಂಗ ನಿಲ್ಲಿಸಿರುವ ಆರೋಪಿ ಬಾಲಕ ಕೂಡಾ ಮೂರು ತಿಂಗಳ ಹಿಂದೆ ನಗರಕ್ಕೆ ಬಂದು ಹೊಟೆಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಸ್ನೇಹಿತರ ಜತೆ ನ್ಯಾನಪ್ಪನಹಳ್ಳಿಯಲ್ಲೇ ಮನೆಯೊಂದರಲ್ಲಿ ವಾಸವಿದ್ದ. ಶಿವಮ್ಮ ಅವರಿಗೆ ಸಂಬಂಧಿಯಾದ ಆರೋಪಿ ಬಾಲಕ ಆಗಾಗ್ಗೆ ಅವರ ಮನೆಗೆ ಬಂದು ಪ್ರೀತಮ್ ಗೆ ಪಾಠ ಹೇಳಿಕೊಡುವುದು ಆಟವಾಡಿಸುವುದು ಮಾಡುತ್ತಿದ್ದ.

ಪ್ರೀತಮ್ ತಂದೆ ರವಿ ಕೆಲಸದ ಮೇಲೆ ಹೋಗಿದ್ದರು. ಮಧ್ಯಾಹ್ನ 2 ಗಂಟೆಯಲ್ಲಿ ಮನೆಗೆ ಬಂದ ಆರೋಪಿ ಬಾಲಕ ಪಾಠ ಹೇಳಿಕೊಡುವುದಾಗಿ ತಾಯಿ ಶಿವಮ್ಮಗೆ ಹೇಳಿ ಪ್ರೀತಮ್ ನನ್ನು ತನ್ನ ಮನೆಗೆ ಕರೆದೊಯ್ದಿದ್ದಾನೆ ಮಧ್ಯಾಹ್ನ 3 ಗಂಟೆಗೆ ಶಿವಮ್ಮ ಅವರು ಮಗನನ್ನು ಕರೆದುಕೊಂಡು ಬರುವಂತೆ ಮಗಳು ಪೃಥ್ವಿಗೆ  ಹೇಳಿದ್ದರು. ಆರೋಪಿಯ ಮನೆಗೆ ಸಹೋದರಿ ಹೋದಾಗ ಆಟ ಲಟ್ಟಣಿಗೆಯಿಂದ ಪ್ರೀತಮ್ ಗೆ ಹೊಡೆಯುತ್ತಿರುವುದು ಕಂಡುಬಂದಿದೆ. ಇದನ್ನು ಗಮನಿಸಿ ಭಯಗೊಂಡ ಪೃಥ್ವಿ ಮನೆಗೆ ಹೋಗಿ ತಾಯಿಗೆ ವಿಷಯ ತಿಳಿಸಿದ್ದಳು. ಶಿವಮ್ಮ ತಮ್ಮ ಮಗನನ್ನು ಕರೆತರಲು ಆರೋಪಿ ಮನೆಗೆ ಹೋಗಿದ್ದರು. ಈ ವೇಳೆ ಆತ ಪ್ರೀತಮ್ ಓದಿಕೊಳ್ಳುತಿದ್ದಾನೆ. ಸಂಜೆ ತಾನೇ ಮನೆಗೆ ಕರೆದುಕೊಂಡು ಬರುತ್ತೇನೆ ಎಂದು ಹೇಳಿ ಕಳಿಸಿದ್ದ.

ಸಂಜೆ 5 ಗಂಟೆಯಾದರೂ ಮಗ ಪ್ರೀತಮ್ ಮನೆಗೆ ವಾಪಸ್ಸಾಗದೇ ಇದ್ದರಿಂದ ಪೋಷಕರು ಮತ್ತೆ ಆರೋಪಿಯ ಮನೆಗೆ ಹೋಗಿದ್ದಾರೆ. ಈ ವೇಳೆ ಪ್ರೀತಮ್ ಅಸ್ವಸ್ಥನಾಗಿ ಬಿದ್ದಿದ್ದು ಮೈಮೇಲೆ ಚುಚ್ಚಿದ ಗಾಯಗಳಾಗಿದ್ದವು. ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆತ ಬದುಕುಳಿಯಲಿಲ್ಲ. ಹಲ್ಲೆ ನಡೆಸಿದ್ದ ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಅತಿಯಾಗಿ ತುಂಟಾಟ ಮಾಡುತ್ತಿದ್ದ ಕಾರಣ ಹಲ್ಲೆ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾನೆಂದು ಹುಳಿಮಾವು ಪೊಲೀಸರು ತಿಳಿಸಿದ್ದಾರೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಶೀಘ್ರದಲ್ಲೇ ನಂದಿನಿ ಹಾಲಿನ ದರ ಏರಿಕೆ? ಸುಳಿವು ಕೊಟ್ಟ ಸಿಎಂ ಡಿಕೆ ಶಿವಕುಮಾರ್!

ವ್ಯವಸ್ಥೆ ಪ್ರಶ್ನೆ ಮಾಡದ 'ಅಂಧಭಕ್ತ'ರ ಬಯಸುತ್ತದೆ, ವಿದ್ಯಾರ್ಥಿಗಳಿಗೆ ಅವರು ವಿರುದ್ಧ: Rahul Gandhi

'UPI ಪಾವತಿ ಸ್ವೀಕರಿಸಲ್ಲ.. ಕ್ಯಾಶ್‌ ಕೊಡಿ': ಅಂಗಡಿಗಳ ಮುಂದೆ ಬೋರ್ಡ್ ಹಾಕಿದ ವ್ಯಾಪಾರಿಗಳು!

ವಂದೇ ಮಾತರಂ ಜಟಾಪಟಿ: ಎರಡೇ ಚರಣ ಗಾಯನಕ್ಕೆ ಶಾಸಕ ಚನ್ನಬಸಪ್ಪ ಆಕ್ಷೇಪ, ಸಿಎಂ ಡಿಕೆ ಶಿವಕುಮಾರ್ ತಿರುಗೇಟು!

ಪತಿಯೊಂದಿಗೆ ಜಗಳ: ಮಗಳು ಸೇರಿದಂತೆ ಇಬ್ಬರು ಮಕ್ಕಳನ್ನು ಬಾವಿಗೆಸದ ಪತ್ನಿ, ಸೋದರಳಿಯ ಸಾವು!