ಜಿಲ್ಲಾ ಸುದ್ದಿ

ಇಂದು ಪತ್ರಿಕಾ ದಿನಾಚರಣೆ

ಬೆಂಗಳೂರು: ಕರ್ನಾಟಕ ರಾಜ್ಯ ಪತ್ರಕರ್ತರ ಅಧ್ಯಯನ ಕೇಂದ್ರವು ಶನಿವಾರ ಪತ್ರಿಕಾ ದಿನಾಚರಣೆಯನ್ನು ಆಚರಿಸುತ್ತಿದೆ.

ಬೆಂಗಳೂರಿನ ಯವನಿಕಾ ಸಭಾಂಗಣದಲ್ಲಿ ಬೆಳಗ್ಗೆ 10ಗಂಚೆಗೆ ನಡೆಯುವ ಕಾರ್ಯಕ್ರಮವನ್ನು ಕರ್ನಾಟಕ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಉದ್ಗಾಟಿಸಲಿದ್ದಾರೆ. ಐಐಜೆಎನ್ ಎಂ ನ ಪ್ರಾಧ್ಯಾಪಕರಾಗಿರುವ ಪತ್ರಕರ್ತೆ ಕಂಚನ್ ಕೌರ್, ನಟ ಚೇತನ್ ಮುಖ್ಯ ಅತಿಥಿಗಳಾಗಿರುವ ಕಾರ್ಯಕ್ರಮದ ಅಧ್ಯಕ್ಷತೆ ಕೇರಳದ ಖ್ಯಾತ ಪತ್ರಕರ್ತೆ ಕೆ. ಶಾಹಿನಾ ಅವರದು.

ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಪತ್ರಕರ್ತರು ಆಗಮಿಸಲಿದ್ದು, ಹಲವು ಕಾಲೇಜುಗಳ ಪತ್ರಿಕೋದ್ಯಮ ವಿದ್ಯಾರ್ಥಿಗಳೂ ಭಾಗವಹಿಸಲಿದ್ದಾರೆ. ಮಕ್ಕಳ ಹಕ್ಕುಗಳಿಗೆ ತೊಡಕಾಗಿರುವ ಧಾರ್ಮಿಕ ಮೂಲಭೂತವಾದದ ಕುರಿತು ಮಂಗಳೂರಿನ ಇರ್ಷಾದ್ ಉಪ್ಪಿನಂಗಡಿ ರಚಿಸಿರುವ ಸ್ವರ್ಗದ ಹಾದಿಯಲ್ಲಿ ಕಮರುತ್ತಿರುವ ಕನಸುಗಳು ಸಾಕ್ಷ್ಯ ಚಿತ್ರ ಬಿಡುಗಡೆ ಮತ್ತು ಪ್ರದರ್ಶನವೂ ನಡೆಯಲಿದೆ. ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾಗಿರುವ ಡಾ.ಕೃಪಾ ಆಳ್ವ, ಮಕ್ಕಳ ಹಕ್ಕುಗಳ ಕಾರ್ಯಕರ್ತರಾಗಿರುವ ದಿನೇಶ್ ಹೆಗ್ಡೆ ಉಳೆಪಾಡಿ ಭಾಗವಹಿಸಲಿದ್ದಾರೆ.

ಜಾತಿ-ಲಿಂಗ ತಾರತಮ್ಯ ಮತ್ತು ಮಾಧ್ಯಮಗಳ ಹೊಣೆಗಾರಿಕೆ ಎಂಬ ವಿಷಯದ ಕುರಿತು ವಿಚಾರ ಸಂಕಿರಣ, ಜಾತಿ ತಾರತಮ್ಯ ಮತ್ತು ಮಾಧ್ಯಮಗಳ ಹೊಮೆಗಾರಿಕೆಯ ಬಗ್ಗೆ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಭಾಷಣ, ಲಿಂಗ ತಾರತಮ್ಯ ಮತ್ತು ಸಾಮಾಜಿಕ ಹೊಣೆಗಾರಿಕೆಯ ಬಗ್ಗೆ ಸಾಹಿತಿ ಎಂ.ಎಸ್ ಆಶಾದೇವಿ ವಿಷಯ ಮಂಡಿಸಲಿದ್ದಾರೆ. ಪತ್ರಕರ್ತ ಲಕ್ಷ್ಮ ಹೂಗಾರ್ ವಿಚಾರಣ ಸಂಕಿರಣದ ಅಧ್ಯಕ್ಷತೆ ವಹಿಸಲಿದ್ದಾರೆ.

ಪತ್ರಕರ್ತ ಇಂದೂಧರ ಹೊನ್ನಾಪುರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರೋಪದಲ್ಲಿ ಪತ್ರಕರ್ತರಾದ ಅಬ್ದುಸ್ಸಾಲಂ ಪುತ್ತಿಗೆ ಹಾಗೂ ನಾಗಣ್ಣ ತುಮಕೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

SCROLL FOR NEXT