- ಲೋಕಾಯುಕ್ತರಾಗಿ ನೇಮಕಗೊಳ್ಳುವವರು ಯಾವುದಾದರೂ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶನಾಗಿ ಕರ್ತವ್ಯ ನಿರ್ವಹಣೆ ಮಾಡಿರಬೇಕೆಂಬುದರ ಬದಲಾಗಿ ಹತ್ತು ವರ್ಷಗಳಿಗೆ ಕಡಿಮೆ ಇಲ್ಲದಂತೆ ಉಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸಬೇಕು.
- ಉಪಲೋಕಾಯುಕ್ತರಾಗುವವರು ಐದು ವರ್ಷಗಳಿಗೆ ಕಡಿಮೆ ಇಲ್ಲದಂತೆ ಉಚ್ಛ ನ್ಯಾಯಾಲಯದ ನ್ಯಾಯಾಧೀಶನಾಗಿರಬೇಕು.
- ಲೋಕಾಯುಕ್ತ ಮತ್ತು ಉಪಲೋಕಾಯುಕ್ತರು ಅಸಮರ್ಥರಾಗಿದ್ದರೆ ಅಥವಾ ದುರ್ವರ್ತನೆ ತೋರಿದರೆ ರಾಜ್ಯ ವಿಧಾನಸಭೆ ಮತ್ತು ವಿಧಾನಪರಿಷತ್‍ನ ಮೂರನೇ ಒಂದರಷ್ಟು ಸದಸ್ಯರ ಸಹಿಯೊಂದಿಗೆ ನಿರ್ಣಯ ಪ್ರಸ್ತಾಪವಾಗಬೇಕು. ಮೇಲ್ನೋಟಕ್ಕೆ ಆರೋಪ ಸಾಬೀತಾದರೆ ಉಭಯ ಸದನದ ಸಭಾಧ್ಯಕ್ಷರು ನಿರ್ಣಯವನ್ನು ಒಪ್ಪಿಕೊಳ್ಳುತ್ತಾರೆ.
- ಉಭಯ ಸದನಗಳಲ್ಲಿ ನಿರ್ಣಯ ಅಂಗೀಕಾರವಾದ ಬಳಿಕವೇ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಪ್ರಕರಣವನ್ನು ತನಿಖೆಗೆ ಉಲ್ಲೇಖಿಸುವುದು.
- ಬಳಿಕ ನ್ಯಾಯಾಧೀಶರ ವಿಚಾರಣೆ ಮಾದರಿಯಲ್ಲೇ ಆರೋಪಿತ ಲೋಕಾಯುಕ್ತ, ಉಪಲೋಕಾಯುಕ್ತರ ವಿಚಾರಣೆ ನಡೆಸಲಾಗುತ್ತದೆ.
- ಒಂದೊಮ್ಮೆ ವಿಚಾರಣೆ ಸಂದರ್ಭದಲ್ಲಿ ಲೋಕಾಯುಕ್ತ, ಉಪಲೋಕಾಯುಕ್ತರು ಅಸಾಮರ್ಥ್ಯ ಮತ್ತು ದುರ್ವರ್ತನೆ ಆರೋಪದಿಂದ ಕೂಡಿಲ್ಲ ಎಂಬುದು ಸಾಬೀತಾದರೆ ಅಂಥ ವರದಿ ಆಧಾರದ ಮೇಲೆ ವಿಧಾನಮಂಡಲದಲ್ಲಿ ಯಾವುದೇ ಕ್ರಮ ತೆಗೆದುಕೊಳ್ಳಬೇಕಾದ ಅಗತ್ಯವಿಲ್ಲ.
- ಆರೋಪ ಸಾಬೀತಾದರೆ ಲೋಕಾಯುಕ್ತ ಮತ್ತು ಉಪಲೋಕಾಯುಕ್ತರ ವಜಾಕ್ಕೆ ಕೋರಿ ಸಭಾಧ್ಯಕ್ಷರು ಮತ್ತು ಸಭಾಪತಿಗಳು ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿ ಅವರ ಒಪ್ಪಿಗೆಯೊಂದಿಗೆ ಲೋಕಾಯುಕ್ತರ ಪದಚ್ಯುತಿ ಮಾಡಬಹುದು.