ಜಿಲ್ಲಾ ಸುದ್ದಿ

ಮಾರ್ಕೆಟ್ ಹೂ ಮಳಿಗೆ ನೆಲಸಮ ತಡೆ ಮುಂದುವರಿಕೆ

Sumana Upadhyaya

ಬೆಂಗಳೂರು: ಕೆ.ಆರ್.ಮಾರುಕಟ್ಟೆಯಲ್ಲಿನ ಕೆಲವು ಹೂ ಮಳಿಗೆ ನೆಲಸಮಗೊಳಿಸುವುದಾಗಿ ಬಿಬಿಎಂಪಿ ಆಯುಕ್ತರು ಹೊರಡಿಸಿದ ಆದೇಶಕ್ಕೆ ಈ ಹಿಂದೆ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ಮುಂದುವರಿಸಿದೆ.

ಮಾರುಕಟ್ಟೆಯಲ್ಲಿ ಪಾಲಿಕೆ ನಿರ್ಮಿಸಿರುವ 17 ಮಳಿಗೆ ಕಾನೂನುಬಾಹಿರವಾಗಿದ್ದು, ಅದನ್ನು ನೆಲಸಮಗೊಳಿಸುವಂತೆ ತೀರ್ಮಾನಿಸಿ ಪಾಲಿಕೆ ಆಯುಕ್ತರೇ ಆದೇಶ ಹೊರಡಿಸಿದ್ದರು. ಇದನ್ನು ಪ್ರಶ್ನಿಸಿ ವರ್ತಕರಾದ ಶಾಂತಗೌರಿ ಸೇರಿ ಐವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ನಡೆಸಿದ ನ್ಯಾ. ಆರ್.ಎಸ್.ಚೌಹಾಣ್ ಅವರಿದ್ದ ಏಕ ಸದಸ್ಯ ಪೀಠ, ಮುಂದಿನ ವಿಚಾರಣೆ ವೇಳೆಗೆ ಬಿಬಿಎಂಪಿ ಈ ಕುರಿತು ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿದೆ.

ಈ ರೀತಿ ನಿರ್ಧಾರ ತೆಗೆದುಕೊಳ್ಳುವ ಮುನ್ನ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಪಾಲಿಕೆ ಕರ್ತವ್ಯ ಎಂದು ಪೀಠ ಪಾಲಿಕೆ ಪಜ ವಕೀಲರಿಗೆ ಸಲಹೆ ನೀಡಿ, 2 ವಾರಗಳ ಕಾಲ ವಿಚಾರಣೆ ಮುಂದೂಡಿತು.

SCROLL FOR NEXT