ಪತ್ರಿಕಾಗೋಷ್ಟಿಯಲ್ಲಿ ಕಲಾ ನಿರ್ದೇಶಕ ಅರುಣ್ ಸಾಗರ್, ಕೀಮ ಆಯೋಜಕ ವಿ.ಕೆ ಲೋಕೇಶ್ 
ಜಿಲ್ಲಾ ಸುದ್ದಿ

2015ರ ಕೀಮ ಪ್ರಶಸ್ತಿಗೆ ಅರ್ಜಿ ಆಹ್ವಾನ

ಮಾಧ್ಯಮ ನಿರ್ವಹಣಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಟಾರಿಯನ್‌ ಸಂಸ್ಥೆ ನೀಡುವ ಕೀಮ (ಕನ್ನಡ ಅಂತರರಾಷ್ಟ್ರೀಯ ಸಂಗೀತ ಪ್ರಶಸ್ತಿ) 2015ನೇ ಸಾಲಿನ...

ಬೆಂಗಳೂರು: ಮಾಧ್ಯಮ ನಿರ್ವಹಣಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಟಾರಿಯನ್‌ ಸಂಸ್ಥೆ ನೀಡುವ ಕೀಮ (ಕನ್ನಡ ಅಂತರರಾಷ್ಟ್ರೀಯ ಸಂಗೀತ ಪ್ರಶಸ್ತಿ) 2015ನೇ ಸಾಲಿನ ಪ್ರಶಸ್ತಿಗಳಿಗೆ ಸಂಗೀತ ಕ್ಷೇತ್ರದಲ್ಲಿನ ವಿವಿಧ ಸಾಧಕರಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ವಿ. ಕೆ ಲೋಕೇಶ್ ಅವರು ಒಟ್ಟು 30 ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು ಸಂಗೀತ ಹಕ್ಕು ಹೊಂದಿರುವ ಸಂಗೀತ ಸಂಯೋಜಕರು, ಸಾಹಿತಿ­ಗಳು, ಹಿನ್ನೆಲೆ ಗಾಯಕರು, ವಾದ್ಯ ಸಂಯೋಜಕರು, ತಂತ್ರಜ್ಞರು, ಚಲನಚಿತ್ರ/ ಚಲನಚಿತ್ರೇತರ ಹಾಡುಗಳಲ್ಲಿ ಸಾಧನೆ ಮಾಡಿರುವವರು ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು. ತೀರ್ಪುಗಾರರ ಸಮಿತಿ ಅರ್ಜಿಗಳನ್ನು ಪರಿಷ್ಕರಿಸಿ ನಾಮಾಂಕಿತರನ್ನು ಘೋಷಿಸಲಿದೆ.

ಜೀವಮಾನದ ಸಾಧನೆ, ಮಹೋನ್ನತ ಕೊಡುಗೆ ಮತ್ತು ಅಂತರರಾಷ್ಟ್ರೀಯ ಸಂಗೀತಗಾರ ವಿಭಾಗಗಳಲ್ಲಿ ವಿಶೇಷ ಪ್ರಶಸ್ತಿಗಳನ್ನು ಸಹ ನೀಡಲಾಗುವುದು. ಜೂನ್ 21ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಪ್ರಶಸ್ತಿ ಕುರಿತ ವಿವರಗಳಿಗೆ www.kima.co.in ವೆಬ್‌ಸೈಟ್‌ಅನ್ನು ವೀಕ್ಷಿಸಬಹುದು. 

ಪತ್ರಿಕಾಗೋಷ್ಟಿಯಲ್ಲಿ ಕಲಾ ನಿರ್ದೇಶಕ, ನಟ ಅರುಣ್ ಸಾಗರ್, ಸಂಸ್ಥೆಯ ಮುಖ್ಯಸ್ಥರು ಹಾಜರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್