ಚಿನ್ನಾಭರಣ 
ಜಿಲ್ಲಾ ಸುದ್ದಿ

18 ಕೆ.ಜಿ ಚಿನ್ನ, ಇನೋವಾ ಕಾರಿನೊಂದಿಗೆ ಚಾಲಕ ಎಸ್ಕೇಪ್

18 ಕೆ.ಜಿ ಚಿನ್ನದ ಒಡವೆ, 1 ಲಕ್ಷದ ನಗದು ಹಾಗೂ ಇನೋವಾ ಕಾರಿನ ಸಮೇತ ಬೆಂಗಳೂರಿನ ಓಂ ಜ್ಯುವೆಲರಿಯ ಮಾಲೀಕ ರಾಜೇಶ್ ಭಟ್ ಕಾರಿನ ಚಾಲಕ...

ಕೋಲಾರ: 18 ಕೆ.ಜಿ ಚಿನ್ನದ ಒಡವೆ, 1 ಲಕ್ಷದ ನಗದು ಹಾಗೂ ಇನೋವಾ ಕಾರಿನ ಸಮೇತ ಬೆಂಗಳೂರಿನ ಓಂ ಜ್ಯುವೆಲರಿಯ ಮಾಲೀಕ ರಾಜೇಶ್ ಭಟ್ ಕಾರಿನ ಚಾಲಕ ಪರಾರಿಯಾಗಿರುವ ಘಟನೆ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರಾಜೇಶ್ ಭಟ್ ತಮ್ಮ ಇಬ್ಬರು ಸ್ನೇಹಿತರ ಜೊತೆ ಕೋಲ್ಕತ್ತಾದಿಂದ ಚಿನ್ನಾಭರಣ ಮಾಡಿಸಿಕೊಂಡು ಬೆಂಗಳೂರಿಗೆ ಬರುತ್ತಿದ್ದ ವೇಳೆ ಮಧ್ಯಾಹ್ನದ ಊಟಕ್ಕೆಂದು ಕೋಲಾರ ಸಮೀಪದ ಅಡಿಗಾಸ್ ಹೋಟೆಲ್ ಬಳಿ ನಿಲ್ಲಿಸಿದ್ದರು. ಈ ವೇಳೆ ರಾಜೇಶ್‌ಭಟ್ ಮತ್ತು ಸ್ನೇಹಿತರು ಒಳಗೆ ಹೋಗಿದ್ದಾರೆ.

ಊಟ ಮಾಡಿಕೊಂಡು ರಾಜೇಶ್ ಭಟ್ ಹೊರ ಬರುವಷ್ಟರಲ್ಲಿ ಇನೋವಾ ಕಾರು, 18 ಕೆ.ಜಿ. ಚಿನ್ನಾಭರಣ, 1 ಲಕ್ಷ ನಗದು ಸಮೇತ ಕಾರಿನ ಚಾಲಕ ಬಾಬು ಪರಾರಿಯಾಗಿದ್ದಾನೆ.

ಕೂಡಲೇ ರಾಜೇಶ್ ಭಟ್ ಬಾಬುವಿಗಾಗಿ ಸುತ್ತ-ಮುತ್ತ ಹುಡುಕಾಟ ನಡೆಸಿದ್ದಾರೆ. ಬಳಿಕ ಫೋನ್ ಗೆ ಕರೆ ಮಾಡಿದ್ದು ಫೋನ್ ಸ್ವಿಚ್ ಆಫ್ ಆಗಿದೆ. ಇದರಿಂದ ಮಾಲೀಕ ರಾಜೇಶ್ ಭಟ್ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಸಬ್‌ಇನ್ಸ್‌ಪೆಕ್ಟರ್ ದೇವೇಂದ್ರಪ್ಪ ಪ್ರಕರಣ ದಾಖಲಿಸಿಕೊಂಡಿದ್ದು, ಜಿಲ್ಲಾ ರಕ್ಷಣಾಧಿಕಾರಿ ಅಜಯ್ ಹಿಲ್ಹೋರಿ ಸ್ಥಳ ಪರಿಶೀಲನೆ ನಡೆಸಿ, ಬಾಬೂವಿಗಾಗಿ ಪತ್ತೆಗಾಗಿ ತಂಡವನ್ನು ರಚಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

SCROLL FOR NEXT