ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯೆ ಮೋಟಮ್ಮ ಮತ್ತಿತರರು ಹಾಜರಿದ್ದರು. 
ಜಿಲ್ಲಾ ಸುದ್ದಿ

ಅಶ್ವಿನಿ ಅಂಗಡಿ ಸಾಧನೆ ಶ್ಲಾಘಿಸಿದ ಮೋಟಮ್ಮ

ದುರ್ಬಲ, ವಿಕಲಚೇತನ ಹಾಗೂ ಅಂಧ ಮಕ್ಕಳ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಕನ್ನಡದ ಕುವರಿ ಕುಮಾರಿ ಅಶ್ವಿನಿ ಅಂಗಡಿ ಅವರಿಗೆ ವಿಶ್ವ ಮಟ್ಟದಲ್ಲಿ ಮನ್ನಣೆ...

ಬೆಂಗಳೂರು: ದುರ್ಬಲ, ವಿಕಲಚೇತನ ಹಾಗೂ ಅಂಧ ಮಕ್ಕಳ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಕನ್ನಡದ ಕುವರಿ ಕುಮಾರಿ ಅಶ್ವಿನಿ ಅಂಗಡಿ ಅವರಿಗೆ ವಿಶ್ವ ಮಟ್ಟದಲ್ಲಿ ಮನ್ನಣೆ ಸಿಕ್ಕಿರುವುದು ಶ್ಲಾಘನೀಯ ಎಂದು ವಿಧಾನ ಪರಿಷತ್ ಸದಸ್ಯೆ ಮೋಟಮ್ಮ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಶ್ವಿನಿ ಅಂಗಡಿ ಅವರು ಬೆಂಗಳೂರಿನಲ್ಲಿ ಬೆಳಕು ಅಕಾಡೆಮಿ ಸ್ಥಾಪಿಸಿ ಅಂಧ ಮಕ್ಕಳಿಗೆ ಉಚಿತ ವಸತಿ ಶಾಲೆ ಸೌಲಭ್ಯ ಕಲ್ಪಿಸಿದ್ದಾರೆ. ಅವರಿಗೆ ದೇಶ-ವಿದೇಶಗಳ ಬಿರುದು ಬಾವಲಿಗಳು, ಪುರಸ್ಕಾರಗಳು ದೊರೆತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದ್ದಾರೆ.

ಅಶ್ವಿನಿ ಅಂಗಡಿಯವರಿಗೆ ಲಂಡನ್ ಮಹಾರಾಣಿ ಎಲಿಜಬೆತ್ ಅವರ ಡೈಮಂಡ್ ಜುಬಿಲಿ ಟ್ರಸ್ಟ್ ನೀಡುವ  ಯಂಗ್ ಲೀಡರ್ ಪ್ರಶಸ್ತಿ ಲಭಿಸಿದೆ. ಇದೇ 22ರಂದು ಬಂಕಿಂಗ್ಹ್ಯಾಮ್ ಅರಮನೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದ ಅವರು, ವಿಶ್ವದ 60 ಯುವ ಪ್ರತಿಭೆಗಳಿಗೆ ಯಂಗ್ ಲೀಡರ್ ಪ್ರಶಸ್ತಿ ಲಭಿಸಿದ್ದು, ಅದರಲ್ಲಿ ಅಶ್ವಿನಿ ಕೂಡ ಒಬ್ಬಳಾಗಿರುವುದು ಖುಷಿಯ ಸಂಗತಿ. ಅಶ್ವಿನಿ ಅಂಗಡಿ ಮಾದರಿಯಲ್ಲೇ ಎಲ್ಲಾ ಅಂಗವಿಕಲರು ಕುಗ್ಗದೇ ಸಾಧನೆಯತ್ತ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!