ಕಬ್ಬಿನ ಗದ್ದೆ ಬೆಂಕಿ ಹಾಕಿ ಅದೇ ಬೆಂಕಿಗೆ ಹಾರಿದ ರೈತ ನಿಂಗೇಗೌಡ 
ಜಿಲ್ಲಾ ಸುದ್ದಿ

ಆತ್ಮಸ್ಥೈರ್ಯ ಕಳೆದುಕೊಂಡರೇ ರೈತರು?

ಬೆಳೆ ನಷ್ಟ, ಬೆಲೆ ಕುಸಿತ, ಸಾಲದ ಹೊರೆ ಮತ್ತಿತರ ಕಾರಣಗಳಿಂದ ಆತ್ಮಸ್ಥೈರ್ಯ ಕಳೆದುಕೊಂಡ ರಾಜ್ಯದ ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವುದು ಆತಂಕಕಾರಿ ಬೆಳವಣಿಗೆ.

ಬೆಂಗಳೂರು: ಬೆಳೆ ನಷ್ಟ, ಬೆಲೆ ಕುಸಿತ, ಸಾಲದ ಹೊರೆ ಮತ್ತಿತರ ಕಾರಣಗಳಿಂದ ಆತ್ಮಸ್ಥೈರ್ಯ ಕಳೆದುಕೊಂಡ ರಾಜ್ಯದ ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವುದು ಆತಂಕಕಾರಿ ಬೆಳವಣಿಗೆ.

ಕಳೆದ ವರ್ಷ 48 ರೈತರು ಕೃಷಿ ಸಂಬಂಧಿ ಸಮಸ್ಯೆಗಳಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವರ್ಷ ಸಂಭವಿಸಿರುವ ರೈತರ ಆತ್ಮಹತ್ಯೆ ಪ್ರಕರಣಗಳಿಗೆ ಹೋಲಿಸಿದರೆ ಪ್ರಮಾಣ  ಕಡಿಮೆಯಾಗಿದೆ ಎಂದು ಹೇಳಬಹುದು. ಜೂನ್ ತಿಂಗಳೊಂದರಲ್ಲೇ ಐವರು ರೈತರು ಬೆಳೆ ಹಾನಿ, ಸಾಲ ಬಾಧೆ ಮತ್ತು ಕಬ್ಬಿನ ಬಾಕಿ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೆ ಶರಣಾಗುತ್ತಿರುವ ರೈತರ ಸಂಖ್ಯೆ ಹೆಚ್ಚುತ್ತಿರುವುದು ರೈತ ಸಮುದಾಯದ ಆತ್ಮಸ್ಥೈರ್ಯ ಕುಗ್ಗುವಂತಾಗಿದೆ. ಇಷ್ಟಾದರೂ ಸರ್ಕಾರ ರೈತರ ಆತ್ಮಹತ್ಯೆ ತಡೆದು, ರೈತರ ಆತ್ಮಬಲ ವೃದ್ಧಿಸುವ  ಯಾವ ಪ್ರಯತ್ನವನ್ನೂ ಮಾಡಿಲ್ಲ.

ಪ್ರತಿ ಬಾರಿ ರೈತ ಆತ್ಮಹತ್ಯೆಯಾದಾಗ ಸರ್ಕಾರ ಮೃತ ರೈತನ ಕುಟುಂಬಕ್ಕೆ ರು.1ಲಕ್ಷ ಪರಿಹಾರ ನೀಡಿ ಕೈ ತೊಳೆದುಕೊಳ್ಳುತ್ತದೆಯೇ ವಿನಾ ಆತ್ಮಹತ್ಯೆ ಹೆಚ್ಚಾಗದಂತೆ ತಡೆಗೆ ಪರಿಣಾಮಕಾರಿ  ಕಾರ್ಯಕ್ರಮ ರೂಪಿಸಿಲ್ಲ. ಏಕೆಂದರೆ, ಅಂಥ ಕಾರ್ಯಕ್ರಮ ಸರ್ಕಾರದಲ್ಲೇ ಇಲ್ಲ. ರೈತರ ಆತ್ಮಹತ್ಯೆ ತಡೆಯುವ ನಿಟ್ಟಿನಲ್ಲಿ ಸರ್ಕಾರ ಕೃಷಿ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಕಂದಾಯ  ಇಲಾಖೆಗಳ ಜತೆ ಅಗತ್ಯ ಕಾರ್ಯಕ್ರಮ, ಕಾರ್ಯ ಯೋಜನೆಗಳನ್ನು ಮಾಡಬೇಕಿತ್ತು. ಆದರೆ, ಅಂಥ ಪ್ರಯತ್ನ ಈವರೆಗೂ ಆಗಿಲ್ಲ. ಆದರೆ, ಈ ತಿಂಗಳಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಜಾಗೃತಿ ಕಾರ್ಯಕ್ರಮಗಳ ಅಗತ್ಯತೆ ಬಗ್ಗೆ ಚರ್ಚಿಸಲಾರಂಭಿಸಿದೆ. ಆರೋಗ್ಯ ಇಲಾಖೆಯ ಆರೋಗ್ಯವಾಣಿ ನೆರವು ಪಡೆದು ಏನಾದರೂ ಮಾಡಬಹುದೆ ಎಂದು  ಆಲೋಚಿಸುತ್ತಿದೆ, ಅದು ಕೂಡ ಇನ್ನೂ ಸ್ಪಷ್ಟವಾಗಿಲ್ಲ. ಹೀಗಾಗಿ ರೈತರು ಕೃಷಿ ಸಂಬಂಧಿ ಸಮಸ್ಯೆಗಳಿಗೆ ಸಿಲುಕಿದಾಗ ಆತ್ಮಹತ್ಯೆ ಒಂದೇ ದಾರಿಯಲ್ಲ ಎಂದು ಅವರಿಗೆ ಮನದಟ್ಟು ಮಾಡಿಸುವ  ಯಾವುದೇ ಪ್ರಯತ್ನ ಇದುವರೆಗೆ ನಡೆದಿಲ್ಲ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

ರೈತರ ಆತ್ಮಹತ್ಯೆಸುತ್ತಮುತ್ತ
ರಾಜ್ಯದಲ್ಲಿ ಅತಿ ಹೆಚ್ಚೆಂದರೆ, 2010-11ರಲ್ಲಿ 200ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದರು. ಆದರೆ, ಅವನ್ನು ಆತ್ಮಹತ್ಯೆಯೆಂದು ಪರಿಗಣಿಸಿ ಸರ್ಕಾರ ಪರಿಹಾರ ನೀಡಿದ್ದು, 117 ಮಂದಿ ಮೃತ  ಕುಟುಂಬಕ್ಕೆ ಮಾತ್ರ. ರೈತಕು ಖುದ್ದಾಗಿ ಜೀವ ಕಳೆದುಕೊಂಡ ಎಲ್ಲಾ ಪ್ರಕರಣಗಳನ್ನು ಸರ್ಕಾರ ಆತ್ಮಹತ್ಯೆ ಎಂದು ಪರಿಗಣಿಸುವುದಿಲ್ಲ. ಹೀಗಾಗಿ, 2014-15ರಲ್ಲಿ ರಾಜ್ಯದಲ್ಲಿ 61 ಮಂದಿ ರೈತರು  ಆತ್ಮಹತ್ಯೆ ಮಾಡಿಕೊಂಡಿದ್ದರೂ ಪರಿಹಾರ ಸಿಕ್ಕಿರುವುದು 48 ರೈತರ ಕುಟುಂಬಗಳಿಗೆ ಮಾತ್ರ. ಇದರರ್ಥ- ರೈತರ ಸಾವನ್ನು ಆತ್ಮಹತ್ಯೆ ಎಂದು ಪರಿಗಣಿಸುವುದು ಕಡಿಮೆಯಾಗುತ್ತಿದೆ.  ಇದರಿಂದಾಗಿಯೇ ಈ ವರ್ಷ 12ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೂ, ಸರ್ಕಾರದ ದಾಖಲೆ ಪ್ರಕಾರ ಬರೀ 4 ರೈತರು ಮಾತ್ರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ, ಮೃತ ರೈತರಿಗೆ ಪರಿಹಾರ ನೀಡಲೆಂದು ರು.2 ಕೋಟಿ ಮೀಸಲಿಟ್ಟಿದ್ದರೂ ವೆಚ್ಚವಾಗಿರುವುದು ರು. 65 ಲಕ್ಷ ಮಾತ್ರ.

ಪರಿಹಾರಕ್ಕೆ ಜಾಗೃತಿಗೆ ಸಮಿತಿ ಇಲ್ಲ

ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದರೆ ಅದನ್ನು ಪರಿಶೀಲಿಸಲು ಉಪ ವಿಭಾಗದ ಮಟ್ಟದಲ್ಲಿ ಸಹಾಯಕ ಆಯುಕ್ತರ ನೇತೃತ್ವದ ಸಮಿತಿ ಇರುತ್ತದೆ. ಆ ಸಮಿತಿ ಸ್ಥಳ ಪರಿಶೀಲನೆ  ನಡೆಸಿ, ತನಿಖೆ ಕೈಗೊಂಡು ರೈತ ಸಾವು ಆತ್ಮಹತ್ಯೆಯೇ ಅಥವಾ ಬೇರೆ ಕಾರಣಕ್ಕೆ ಆಗಿರುವ ಸಾವೋ ಎಂದು ವರದಿ ಸಲ್ಲಿಸುತ್ತಾರೆ. ಅದನ್ನಾಧರಿಸಿ ಕೃಷಿ ಇಲಾಖೆ ರು.1 ಲಕ್ಷ ಪರಿಹಾರ  ನೀಡುತ್ತದೆ. ಆನಂತರ ಅಂಥದ್ದೇ ಪ್ರಕರಣ ಮತ್ತೆ ನಡೆಯದಂತೆ ಸ್ಥಳೀಯ ಆಡಳಿತ ಗಮನ ಹರಿಸುವುದಿಲ್ಲ. ಸಂಬಂಧಿಸಿದ ಇಲಾಖೆಯೂ ಜಾಗೃತಿ ಮೂಡಿಸುವುದಿಲ್ಲ. ರೈತರು ಕೃಷಿ ನಂಬಿದ  ತಪ್ಪಿಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲ. ಬದಲಾಗಿ ಕೃಷಿಗೆ ಸಂಬಂಧಿಸಿದ ಇತರ ಸಮಸ್ಯೆಗಳಿಗೆ ಸಿಲುಕಿದಾಗಲೂ ಸಾವಿನ ಹಾದಿ ಹಿಡಿಯುತ್ತಿದ್ದಾರೆ. ಫಸಲಿಗೆ ಸಕಾಲಕ್ಕೆ ಮಾರುಕಟ್ಟೆ  ಸಿಗದಿರುವುದು, ನಿರೀಕ್ಷಿತ ಬೆಲೆ ಸಿಗದೆ ಮಾಡಿದ್ದ ಸಾಲ ಮರು ಪಾವತಿಸಲಾಗದ ಸಂದರ್ಭಗಳೂ ಇರುತ್ತವೆ. ಬೆಳೆ ಹಾನಿಯಿಂದ ಮೂಲ ಹೂಡಿಕೆ ಹಣವೂ ಸಿಗದೆ ಜಿಗುಪ್ಸೆ ಉಂಟಾಗಿರುವ  ಸಾಧ್ಯತೆಯೂ ಇರುತ್ತದೆ. ಆದ್ದರಿಂದ ರೈತರಲ್ಲಿ ಎಷ್ಟೇ ಸಮಸ್ಯೆ ಬಂದರೂ ಅದನ್ನು ಎದುರಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಬೇಕು. ಪರಿಹಾರ ಮಾರ್ಗಗಳನ್ನು ಸೂಚಿಸಬೇಕು ಎಂದು ಹಿರಿಯ  ರೈತ ಮುಖಂಡ ಹನುಮನಗೌಡ ಹೇಳುತ್ತಾರೆ.

ರೈತರ ಆತ್ಮಹತ್ಯೆ ತಡೆಯುವುದಕ್ಕೆಂದು ವಿಶೇಷವಾಗಿ ಯಾವುದೇ ಕಾರ್ಯಕ್ರಮ ರೂಪಿಸಿಲ್ಲ. ಇದಕ್ಕೆ ನಮ್ಮ ಇಲಾಖೆಯೊಂದೇ ಏನೂ ಮಾಡುವುದಕ್ಕೆ ಆಗುವುದಿಲ್ಲ. ಆದರೆ, ಸರ್ಕಾರದ  ಯೋಜನೆಗಳಿಂದ ಏನೆಲ್ಲಾ ಲಾಭವಿದೆ ಎಂದು ಪ್ರಚಾರ ಮಾಡುವ ಕೃಷಿ ಅಭಿಯಾನವನ್ನು ಆರಂಭಿಸಿದ್ದೇವೆ. ಇದರ ಮೂಲಕ ರೈತರ ಆತ್ಮಬಲ ವೃದ್ಧಿಸಲಾಗುತ್ತಿದೆ.
-ಪಾಂಡುರಂಗ, ಬಿ. ನಾಯಕ್, ಕೃಷಿ ಇಲಾಖೆ ಆಯುಕ

ರೈತರ ಆತ್ಮಹತ್ಯೆ ಹಾದಿ
ಜೂನ್2: ಶ್ರೀರಂಗಪಟ್ಟಣದ ಚನ್ನೇನಹಳ್ಳಿಯ ರೈತ ಸಿ. ರಾಜೇಂದ್ರ ಕೃಷಿ ಸಾಲದ ಕಾಟ ತಾಳಲಾಗದೆ ಆತ್ಮಹತ್ಯೆ.
ಜೂನ್ 9: ಬೆಳಗಾವಿಯ ಬಡಾಲ ಅಂಕಲಗಿಯ ಗುರುನಾಥ ಮಲ್ಲಪ್ಪ ಚಾಪಗಾಂವಿ ಕಬ್ಬಿನ ಬಾಕಿ ಸಿಕ್ಕಿಲ್ಲ ಎಂದು ಬೇಸತ್ತು ಆತ್ಮಹತ್ಯೆ.
ಜೂನ್ 24: ಕಲಬರಗಿ ಜಿಲ್ಲೆ ಜೀವರ್ಗಿಯ ನೇಗಿಲಯೋಗಿ ಗ್ರಾಮದಲ್ಲಿ ರತನ್‍ಚಂದ್ ಕಿಶನ್ ಸಿಂಗ್ ಪಾಗಾ ತೊಗರಿ ಬೆಳೆಗಾಗಿ ಮಾಡಿದ ಸಾಲ ತೀರಿಸಲಾಗದೆ ಆತ್ಮಹತ್ಯೆ.
ಜೂನ್ 25: ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಗಾಣದಹೊಸೂರಿನಲ್ಲಿ ಕಬ್ಬು ಬೆಳೆಗಾರ ನಿಂಗೇಗೌಡ ಬೆಂಕಿಗೆ ಹಾರಿ ಆತ್ಮಹತ್ಯೆ.
ಜೂನ್ 26: ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಸಿದ್ದೇನಹುಂಡಿ ಶಿವಲಿಂಗೇಗೌಡ ಸಾಲದ ಬಾಧೆಯಿಂದ ಸಾವಿಗೆ ಶರಣು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT