ಜಿಲ್ಲಾ ಸುದ್ದಿ

ಚೈನ್ ಲಿಂಕ್ ದಂಧೆ: ಆರೋಪಿಗಳು ಅಂದರ್

ವಿದೇಶ ಪ್ರವಾಸದ ಹೆಸರಿನಲ್ಲಿ ಸಾರ್ವಜನಿ ಕರಿಂದ ಹಣ ಸಂಗ್ರಹಿಸಿ `ಚೈನ್ ಲಿಂಕ್' ದಂಧೆ ನಡೆಸುತ್ತಿದ್ದ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ....

ಬೆಂಗಳೂರು: ವಿದೇಶ ಪ್ರವಾಸದ ಹೆಸರಿನಲ್ಲಿ ಸಾರ್ವಜನಿ ಕರಿಂದ ಹಣ ಸಂಗ್ರಹಿಸಿ `ಚೈನ್ ಲಿಂಕ್' ದಂಧೆ ನಡೆಸುತ್ತಿದ್ದ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಮುನೇಶ್ವರ ಬ್ಲಾಕ್‍ನ ಮಧುಕರ್(35), ಬಿ.ಪ್ರಶಾಂತ್(35), ಚಂದ್ರಾ ಬಡಾವಣೆಯ ಉದಯ್ ಕುಮಾರ್(21) ಮತ್ತು ಚಿಕ್ಕಮಗಳೂರಿನ ಬಿ.ಎಸ್.ಸತೀಶ್ (40) ಬಂ„ತರು. ಇವರಿಂದ ರು. 1 ಲಕ್ಷ ನಗದು, ಟಿವಿ, ಕಂಪ್ಯೂಟರ್ ಸೇರಿ ಇತರ ವಸ್ತುಗಳನ್ನು ವಶಪಡಿ ಸಿಕೊಳ್ಳಲಾಗಿದೆ.

ಚಂದ್ರಾ ಬಡಾವಣೆ 9ನೇ ಮುಖ್ಯರಸ್ತೆಯಲ್ಲಿರುವ `ಸೂಪರ್ ರಾಯಲ್ ಹಾಲಿಡೇಸ್ ಇಂಡಿಯಾ ಪ್ರೈ.ಲಿ' ಹೆಸರಿನಲ್ಲಿ ಕಂಪನಿ ಸ್ಥಾಪಿಸಿದ್ದಾರೆ. ಇದಕ್ಕೆ ಮಧುಕರ್, ಸತೀಶ್ ನಿರ್ದೇಶಕರಾಗಿದ್ದು, ಪ್ರಶಾಂತ್ ಪ್ರಧಾನ ವ್ಯವಸ್ಥಾಪಕನಾಗಿದ್ದ. ಉದಯ್ ಕುಮಾರ್ ಸ್ವಾಗತಕಾರ ನಾಗಿ ಕೆಲಸ ಮಾಡುತ್ತಿದ್ದ.

ಆನ್‍ಲೈನ್ ಮೂಲಕ ದೇಶ-ವಿದೇಶಗಳಿಗೆ ಪ್ರವಾಸ ಕಳುಹಿಸಲು ಚೈನ್ ಲಿಂಕ್ ಮಾದರಿ ದಂಧೆ ಅನುಸರಿಸುತ್ತಿದ್ದರು. ಮೊದಲು ರು.11 ಸಾವಿರ ಪಾವತಿಸಿ ಸದಸ್ಯರಾಗಬೇಕು. ನಂತರ ಅವರು ಬೇರೆ ಇಬ್ಬರಿಗೆ ಸದಸ್ಯತ್ವ ನೋಂದಣಿ ಮಾಡಿಸಿದರೆ ಕಮಿಷನ್ ರೂಪದಲ್ಲಿ ರು. 1 ಸಾವಿರ ಜತೆಗೆ ವಿದೇಶ ಪ್ರವಾಸ ಪ್ಯಾಕೇಜ್‍ಗೆ ಅರ್ಹತೆ ಸಿಕ್ಕಿದೆ ಎಂದು ಹೇಳುತ್ತಿದ್ದರು.

ಎರಡನೇ ಹಂತದ ಸದಸ್ಯತ್ವ ನೋಂದಣಿ ಮಾಡಿಸಿದಲ್ಲಿ, ಮೊದಲ ಹಂತದ ಸದಸ್ಯರಿಗೆ ರು.1 ಸಾವಿರ ಕಮಿಷನ್ ಹಾಗೂ ಮೂಲ ಸದಸ್ಯನಿಗೆ ರು.4 ಸಾವಿರ ಕಮಿಷನ್ ಸಿಗುತ್ತದೆ.

ಇನ್ನು 25 ಸದಸ್ಯರ ನೋಂದಣಿ ಮಾಡಿಸಿದರೆ 1 ಮೊಬೈಲ್, 50 ಸದಸ್ಯರಾದರೆ ಡಿಜಿಟಲ್ ಕ್ಯಾಮರಾ, 100 ಸದಸ್ಯರಾದರೆ ಎಲ್‍ಸಿಡಿ ಟಿ.ವಿ, 200 ಸದಸ್ಯರಾದರೆ ಬೈಕ್ ಕೊಳ್ಳಲು ರು.35 ಸಾವಿರ ಮುಂಗಡ ಹಣ, 300 ಸದಸ್ಯರಾದರೆ ಕಾರು ಖರೀದಿಗೆ ಮುಂಗಡ ಹಣ ಕೊಡುವ ಆಸೆ ತೋರಿಸಿ ಸದಸ್ಯತ್ವ ಮಾಡಿಸಿಕೊಳ್ಳುತ್ತಿದ್ದರು. ವಂಚನೆಗೊಳಗಾದವರ ಮಾಹಿತಿ ಇಲ್ಲ ವಂಚನೆಗೊಳಗಾದವರು ಚಂದ್ರಾ ಬಡಾವಣೆ ಠಾಣೆಯಲ್ಲಿ ದೂರು ನೀಡಬಹುದು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT