ಗೃಹ ಸಚಿವ ಕೆ.ಜೆ.ಜಾರ್ಜ್ 
ಜಿಲ್ಲಾ ಸುದ್ದಿ

ನಗರಕ್ಕೆ ಸೈಬರ್ ಫೋರೆನ್ಸಿಕ್ ಕೇಂದ್ರ

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸೈಬರ್ ಅಪರಾಧ ಪ್ರಕರಣಗಳ ನಿಯಂತ್ರಣ ಹಾಗೂ ತನಿಖೆಗೆ ಅನುಕೂಲವಾಗುವಂತೆ ಬೆಂಗಳೂರಿನಲ್ಲಿ ಅಂತಾ ರಾಷ್ಟ್ರೀಯ ಮಟ್ಟದ ಸೈಬರ್ ಫೋರೆನ್ಸಿಕ್ ಕೇಂದ್ರ ಸ್ಥಾಪಿಸಲಾಗುವುದು ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು...

ಬೆಂಗಳೂರು: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸೈಬರ್ ಅಪರಾಧ ಪ್ರಕರಣಗಳ ನಿಯಂತ್ರಣ ಹಾಗೂ ತನಿಖೆಗೆ ಅನುಕೂಲವಾಗುವಂತೆ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸೈಬರ್ ಫೋರೆನ್ಸಿಕ್ ಕೇಂದ್ರ ಸ್ಥಾಪಿಸಲಾಗುವುದು ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.

ಮಡಿವಾಳದ ನ್ಯಾಯವಿಜ್ಞಾನ ಪ್ರಯೋಗಾಲಯದಲ್ಲಿ ನೂತನವಾಗಿ ಆರಂಭಿಸಲಾಗಿರುವ `ಸೈಬರ್ ಫೋರೆನ್ಸಿಕ್ ಘಟಕ' ಉದ್ಘಾಟಿಸಿ ಅವರು ಮಾತನಾಡಿದರು. ಕೇರಳದ `ಸೆಂಟರ್ ಫಾರ್ ಡೆವಲಪ್ ಮೆಂಟ್ ಆಫ್ ಅಡ್ವಾನ್ಸ್‍ಡ್ ಕಂಪ್ಯೂಟಿಂಗ್' (ಸಿ-ಡಾಕ್) ಅಭಿವೃದ್ಧಿಪಡಿಸಿರುವ ಸಾಫ್ಟ್  ವೇರ್, ಹಾರ್ಡ್‍ವೇರ್ ಹಾಗೂ ಇತರ ಉಪಕರಣಗಳನ್ನು ಪೊಲೀಸ್ ಆಧುನೀಕರಣ ಅನುದಾನ ಬಳಸಿ ರು.1 ಕೋಟಿ ವೆಚ್ಚದಲ್ಲಿ ಖರೀದಿಸಲಾಗಿದೆ. ಅವುಗಳ ಅಳವಡಿಕೆಗಾಗಿ ಪೊಲೀಸ್ ಗೃಹ ಮಂಡಳಿಯಿಂದ ರು.30 ಲಕ್ಷ ವೆಚ್ಚದಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದು ಸಚಿವರು ತಿಳಿಸಿದರು.

ನೂತನ ಸೈಬರ್ ಘಟಕವು ಸೈಬರ್ ಘಟಕವು ಸೈಬರ್ ಅಪರಾದಗಳಿಗೆ ಶೀಘ್ರ ಶಿಕ್ಷೆ ಆಗಲು ಸಹಕಾರಿಯಾಗಲಿದೆ. ಈಗಾಗಲೇ  ರಾಜ್ಯದ ಐದು ಜಿಲ್ಲಾ ಕೇಂದ್ರಗಳಲ್ಲಿ ಜೀವಶಾಸ್ತ್ರ, ವಿಷವಿಜ್ಞಾನ, ನ್ಯಾಯ ಮನೋವಿಜ್ಞಾನ ಮತ್ತು ಛಾಯಾಚಿತ್ರ ವಿಭಾಗಗಳು ಇವೆ. ಮುಂದಿನ ದಿನಗಳಲ್ಲಿ ಡಿಎನ್ ಎ, ಭೌತಶಾಸ್ತ್ರ ಹಾಗೂ ಸೈಬರ್ ಫೋರೆನ್ಸಿಕ್ ಘಟಕಗಳ ವಿಸ್ತರಣೆ ಮಾಡಲಾಗುವುದು ಎಂದರು.

ಈ ವೇಳೆ ಮಾತನಾಡಿದ ಪ್ರಯೋಗಾಲಯ ನಿರ್ದೇಶಕ ಬಿ.ದಯಾನಂದ, ಪೊಲೀಸ್ ಇಲಾಖೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪದವಿ ಹೊಂದಿರುವ ಪೊಲೀಸ್ ಇನ್ಸ್ ಪೆಕ್ಟರ್ ಹಾಗೂ ಡಿವೈಎಸ್ಪಿ ಮಟ್ಟದ ಐವರು ಸಿಬ್ಬಂದಿಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಸಾಫ್ಟ್ ವೇರ್, ಹಾರ್ಡ್ ವೇರ್ ಹಾಗೂ ಇತರ ಉಪಕರಣಗಳ ಬಳಕೆ, ವಿಶ್ಲೇಷಣೆಗಾಗಿ ಈ ತಂಡದ ಸದಸ್ಯರು 3 ತಿಂಗಳು ತಿರುವನಂತಪುರದ ಸಿ-ಡಾಕ್ ಕೇಂದ್ರದಲ್ಲಿ ತರಬೇತಿ ಪಡೆದುಕೊಳ್ಳಲಿದ್ದಾರೆ. ಬಳಿಕ ಬೆಂಗಳೂರಿನಲ್ಲಿ ಸಿಡಾಕ್ ನ ಸಿಬ್ಬಂದಿಯೇ ಉಪಕರಣಗಳ ಬಳಕೆಗಾಗಿ 5 ತಿಂಗಳು ತರಬೇತಿ ಕೊಡುತ್ತಾರೆ ಎಂದರು. ಪೊಲೀಸ್ ಮಹಾನಿರ್ದೇಶಕ  ಓಂ ಪ್ರಕಾಶ್, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಕೆ.ವಿ. ಗನಗ್‍ದೀಪ್, ಎಡಿಜಿಪಿ ಮೇಘರಿಕ್, ಪಿ.ಕೆ ಗಾರ್ಗ್, ಗೃಹಸಚಿವರ ಸಲಹೆಗಾರ ಕೆಂಪಯ್ಯ, ಸಿ ಡಾಕ್ ನ ನಿರ್ದೇಶಕ ರಮಣಿ ಇದ್ದರು.

ಫೋರೆನ್ಸಿಕ್ ಘಟಕ ಬ್ಯಾಂಕಿಂಗ್, ಮೊಬೈಲ್ ಫೋನ್, ಸ್ಮಾರ್ಟ್ ಫೋನ್, ಇ ಮೇಲ್, ಸಾಮಾಜಿಕ ಜಾಲತಾಣಗಳು, ವೆಬ್ ಸೈಟ್ ಗಳ ಹ್ಯಾಕ್ ಮೂಲಕ ದುರುಪಯೋಗ ಪ್ರಕರಣಗಳು ಹೆಚ್ಚಾಗುತ್ತಿವೆ. ಆರ್ಥಿಕ ಅಪರಾಧಗಳು ಹೆಚ್ಚುತ್ತಿವೆ. ಅಪರಾಧ ಸಂಭವಿಸಿದಾಗ ನಗರ ಪೊಲೀಸರು ಸಿಐಡಿ ಅಪರಾಧ ಘಟಕದ ಮೊರ ಹೋಗಬೇಕಿತ್ತು ಅಥ ವಾ ಹೈದ್ರಾ ಬಾದ್, ಅಹ್ಮದಾಬಾದ್ ಮುಂತಾದ ಕಡೆ ಹೋಗಿ ಪ್ರಕರಣಗಳ ವಿಶ್ಲೇಷಣೆಗೆ ಮನವಿ ಮಾಡಬೇಕಿತ್ತು. ಆದರೆ, ಇನ್ನು ಮುಂದೆ ಸಿಐಡಿಗೂ ಹೋಗಬೇಕಿಲ್ಲ, ಹೊರ ರಾಜ್ಯವನ್ನೂ ಕೇಳಬೇಕಿಲ್ಲ. ರಾಜ್ಯದ ಪೊಲೀಸರು ಈ ಮಾದರಿಯ ಪ್ರಕರಣಗಳ ವಿಶ್ಲೇಷಣೆಗೆ ಸೈಬರ್ ಫೋರೆನ್ಸಿಕ್ ಘಟಕಕ್ಕೆ ಮಾಹಿತಿ ನೀಡಬಹುದು. ಮೊಬೈಲ್ ಫೋನ್, ಕಂಪ್ಯೂಟರ್ ಸೇರಿದಂತೆ ಎಲೆಕ್ಟ್ರಾನಿಕ್ಸ್ ಉಪಕರಣಗಳಳ್ಲಿ ಅಳಿಸಿ ಹಾಕಿದ, ಮುಚ್ಚಿಟ್ಟಿರುವ ಅಥವಾ ಹಾಳಾಗಿರುವ ಮಾಹಿತಿಯನ್ನು ವಾಪಸ್ ಪಡೆದುಕೊಳ್ಳುವ ಅತ್ಯಾಧುನಿಕ ಉಪಕರಣ ಗಳು ಇರುತ್ತವೆ. ಸೈಬರ್ ಲ್ಯಾಬ್‍ನ ವರದಿಗೆ ನ್ಯಾಯಾಲಯದ ಮಾನ್ಯತೆ ಇದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT