ಜಿಲ್ಲಾ ಸುದ್ದಿ

ಹೊರವಲಯದಲ್ಲಿ ಸಾಂಸ್ಕೃತಿಕ ಸಂಘರ್ಷ

ಬೆಂಗಳೂರು: ಕೊತ್ತನೂರು, ಭೈರತಿ, ಹೆಣ್ಣೂರು ಮುಂತಾದ ಹೊರವಲಯದ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಫ್ರಿಕಾ ನಾಗರಿಕರು ನೆಲೆಸಿದ್ದಾರೆ.

ಆದರೆ, ಈ ಪ್ರದೇಶಗಳಲ್ಲಿ ಗ್ರಾಮೀಣ ಸಂಸ್ಕೃತಿ ಗಾಢವಾಗಿದೆ. ಆಧುನಿಕತೆಗೆ ಅಲ್ಲಿನ ಜನ ಹೊಂದಿಕೊಂಡಿಲ್ಲ. ಆಫ್ರಿಕನ್ನರ ಸಂಸ್ಕೃತಿ ಅಲ್ಲಿನ ಜನರಿಗೆ ಒಗ್ಗುತ್ತಿಲ್ಲ. ಹೀಗಾಗಿಯೇ ಈ ಭಾಗದಲ್ಲಿ ಸಾಂಸ್ಕೃತಿಕ ಸಂಘರ್ಷ ಉಂಟಾಗಿದೆ ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ವಿದೇಶೀಯರಿಗೆ ಇಲ್ಲಿನ ಸಂಸ್ಕೃತಿ ಬಗ್ಗೆ ಮಾಹಿತಿ ಇಲ್ಲ. ಇಲ್ಲಿನ ಸಂಸ್ಕೃತಿ, ವ್ಯವಸ್ಥೆಯ ಬಗ್ಗೆ ಅವರಿಗೆ ಮನವರಿಕೆ ಮಾಡುವುದು ಕಷ್ಟ. ಹೀಗಾಗಿ ಸ್ವೇಚ್ಛೆಯಿಂದ ಓಡಾಡುತ್ತಾರೆ. ರಾತ್ರಿ ವೇಳೆ ತಿರುಗಾಟ, ಬರಿ ಮೈಯಲ್ಲಿ ಓಡಾಟ, ಅರೆಬರೆ ಬಟ್ಟೆ ಧರಿಸಿ ಮಹಿಳೆಯರ ಓಡಾಟ ಸ್ಥಳೀಯರಿಗೆ ಸರಿ ಕಾಣುವುದಿಲ್ಲ. ಹೀಗಾಗಿ, ಇದನ್ನು ಸರಿಪಡಿಸಲು ಸಭೆ ನಡೆಸಲಾಗುವುದು ಎಂದು ಅಧಿಕಾರಿ ಹೇಳಿದರು.

SCROLL FOR NEXT